ಸರ್ಕಾರಿ ನೌಕರರಿಗೆ ಈ ಸಂತಸದ ಸುದ್ದಿ ಸಿಗುವ ಡೇಟ್ ಫಿಕ್ಸ್, ಹಬ್ಬದ ಋತುವಿನಲ್ಲಿ ಸಿಗಲಿದೆ ಬಂಪರ್ ಗಿಫ್ಟ್!

7th Pay Commission: ಡಿಎ ಹೆಚ್ಚಳಕ್ಕಾಗಿ ಕಾಯುತ್ತಿರುವ ಕೇಂದ್ರ ನೌಕರರ ನಿರೀಕ್ಷೆಗೆ ಶೀಘ್ರದಲ್ಲಿಯೇ ತೆರೆಬೀಳಲಿದೆ. ಹಬ್ಬ ಹರಿದಿನಗಳಲ್ಲಿ ಬಂಪರ್ ಉಡುಗೊರೆಸಿಗಲಿದೆ. ಅದುವೇ ಶೇ.4 ರಷ್ಟು ತುಟ್ಟಿಭತ್ಯೆಯ ಹೆಚ್ಚಳ. ಆದರೆ ಅದಕ್ಕಾಗಿ ಇನ್ನೂ ಕೆಲ ದಿನಗಳು ಕಾಯಬೇಕಾಗಲಿದೆ, ಅದರ ನಂತರ ಅವರ ಅಸ್ತಿತ್ವದಲ್ಲಿರುವ ಡಿಎ ದರ ಬದಲಾಗಲಿದೆ. Business News In Kannada

Written by - Nitin Tabib | Last Updated : Oct 7, 2023, 09:29 PM IST
  • 7ನೇ ವೇತನ ಆಯೋಗದ ಅಡಿಯಲ್ಲಿ ವೇತನ ಪಡೆಯುವ ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ಡಿಎ-ಡಿಆರ್ ಪಾವತಿಯನ್ನು ಅಕ್ಟೋಬರ್ ಅಂತ್ಯದೊಳಗೆ ಮಾಡಲಾಗುತ್ತದೆ.
  • ಭತ್ಯೆಗಳನ್ನು ನೌಕರರ ವೇತನಕ್ಕೆ ಸೇರಿಸಲಾಗುತ್ತದೆ . ಇದೇ ವೇಳೆ, 3 ತಿಂಗಳ ಬಾಕಿಯನ್ನು ಸೇರಿಸಿದ ನಂತರ ಪಾವತಿ ಮಾಡಲಾಗುತ್ತದೆ.
  • ಪಿಂಚಣಿದಾರರ ಪಿಂಚಣಿಗೂ ಕೂಡ ಶೇ. 4 ರಷ್ಟು ಹೆಚ್ಚುವರಿ ಪಾವತಿಯನ್ನು ಸೇರಿಸಲಾಗುತ್ತದೆ ಮತ್ತು ಅಕ್ಟೋಬರ್ ಅಂತ್ಯದ ವೇಳೆಗೆ ನೀಡಲಾಗುತ್ತದೆ.
ಸರ್ಕಾರಿ ನೌಕರರಿಗೆ ಈ ಸಂತಸದ ಸುದ್ದಿ ಸಿಗುವ ಡೇಟ್ ಫಿಕ್ಸ್, ಹಬ್ಬದ ಋತುವಿನಲ್ಲಿ ಸಿಗಲಿದೆ ಬಂಪರ್ ಗಿಫ್ಟ್! title=

DA Hike: ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರು ತಮ್ಮ ಹಬ್ಬಗಳನ್ನು ಸಂತಸದಲ್ಲಿ ಕಳೆಯಲಿದ್ದಾರೆ. ತುಟ್ಟಿಭತ್ಯೆ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಶೀಘ್ರವೇ ಸಂಪುಟ ಸಭೆಯಲ್ಲಿ ಅನುಮೋದನೆ ನೀಡುವ ಸಾಧ್ಯತೆ ಇದೆ (Business News In Kannada). ತುಟ್ಟಿಭತ್ಯೆಯಲ್ಲಿ ಒಟ್ಟು ಶೇಕಡ 4ರಷ್ಟು ಹೆಚ್ಚಳವಾಗಲಿದೆ ಎಂಬುದು ಎಐಸಿಪಿಐ ಅಂಕಿಅಂಶಗಳಿಂದ ಈಗಾಗಲೇ ಸ್ಪಷ್ಟವಾಗಿದೆ. ಪ್ರಸ್ತುತ ತುಟ್ಟಿಭತ್ಯೆ ಶೇಕಡಾ 42 ರಷ್ಟಿದೆ. 4 ರಷ್ಟು ಅನುಮೋದನೆ ಪಡೆದರೆ, ಜುಲೈ 1, 2023 ರಿಂದ, ಕೇಂದ್ರ ನೌಕರರು ಶೇ.46 ರಷ್ಟು ತುಟ್ಟಿಭತ್ಯೆಯನ್ನು ಪಡೆಯಲಿದ್ದಾರೆ. ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ತುಟ್ಟಿಭತ್ಯೆಯ ವ್ಯತ್ಯಾಸವನ್ನು ಬಾಕಿ ರೂಪದಲ್ಲಿ ಪಾವ್ತಿಸಲಾಗುತ್ತದೆ. ಕಳೆದ ಬಾರಿ 2023ರ ಮಾರ್ಚ್‌ನಲ್ಲಿ ಸರ್ಕಾರ ತುಟ್ಟಿಭತ್ಯೆಯನ್ನು ಹೆಚ್ಚಿಸಿತ್ತು ಮತ್ತು ಅದು ಜನವರಿಯಿಂದ ಅನ್ವಯಿಸಿತ್ತು.

ತುಟ್ಟಿಭತ್ಯೆಯನ್ನು ಯಾವಾಗ ಅನುಮೋದಿಸಲಾಗುತ್ತದೆ?
ಸಾಮಾನ್ಯವಾಗಿ ತುಟ್ಟಿಭತ್ಯೆಯನ್ನು ಅಕ್ಟೋಬರ್‌ನಲ್ಲಿ ದಸರಾ ಮೊದಲು ಹೆಚ್ಚಿಸಲಾಗುತ್ತದೆ. ಈ ಬಾರಿಯೂ ದಸರಾಕ್ಕೆ ಮುನ್ನ ತುಟ್ಟಿಭತ್ಯೆ ಹೆಚ್ಚಳವಾಗುವ ನಿರೀಕ್ಷೆ ಇದೆ. ಆದರೆ, ಮೂಲಗಳನ್ನು ನಂಬುವುದಾದರೆ, ಈ ಬಾರಿಯ ತುಟ್ಟಿಭತ್ಯೆಯು ದಸರಾ ನಂತರವೇ ಹೆಚ್ಚಾಗಲಿದೆ. ಮಾಹಿತಿ ಪ್ರಕಾರ ಅಕ್ಟೋಬರ್ 25 ರಂದು ಸಚಿವ ಸಂಪುಟದಲ್ಲಿ ಅದಕ್ಕೆ ಅನುಮೋದನೆ ಸಿಗಲಿದೆ ಎನ್ನಲಾಗುತ್ತಿದೆ. ಆದರೆ, ಸರ್ಕಾರದಿಂದ ಈ ಕುರಿತು ಯಾವುದೇ ಅಧಿಕೃತ ದಿನಾಂಕ ಘೋಷಣೆಯಾಗಿಲ್ಲ. ನಮ್ಮ ಬಿಸ್ನೆಸ್ ವೆಬ್ ಸೈಟ್ ಆಗಿರುವ ಜೀ ಬಿಸ್ನೆಸ್ ಗೆ ಮೂಲಗಳು ಈ ಮಾಹಿತಿಯನ್ನು ನೀಡಿವೆ.

ಅಕ್ಟೋಬರ್ ಸಂಬಳದಲ್ಲಿ ಪಾವತಿ ಮಾಡಲಾಗುವುದು
7ನೇ ವೇತನ ಆಯೋಗದ ಅಡಿಯಲ್ಲಿ ವೇತನ ಪಡೆಯುವ ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ಡಿಎ-ಡಿಆರ್ ಪಾವತಿಯನ್ನು ಅಕ್ಟೋಬರ್ ಅಂತ್ಯದೊಳಗೆ ಮಾಡಲಾಗುತ್ತದೆ. ಭತ್ಯೆಗಳನ್ನು ನೌಕರರ ವೇತನಕ್ಕೆ ಸೇರಿಸಲಾಗುತ್ತದೆ . ಇದೇ ವೇಳೆ, 3 ತಿಂಗಳ ಬಾಕಿಯನ್ನು ಸೇರಿಸಿದ ನಂತರ ಪಾವತಿ ಮಾಡಲಾಗುತ್ತದೆ. ಪಿಂಚಣಿದಾರರ ಪಿಂಚಣಿಗೂ ಕೂಡ ಶೇ. 4 ರಷ್ಟು ಹೆಚ್ಚುವರಿ ಪಾವತಿಯನ್ನು ಸೇರಿಸಲಾಗುತ್ತದೆ ಮತ್ತು ಅಕ್ಟೋಬರ್ ಅಂತ್ಯದ ವೇಳೆಗೆ ನೀಡಲಾಗುತ್ತದೆ.

ಇದನ್ನೂ ಓದಿ-ಗ್ಯಾರಂಟಿ ಇಲ್ಲದೆ 3 ಲಕ್ಷ ರೂ.ಗಳವರೆಗೆ ಸಾಲ, ಕಡಿಮೆ ಬಡ್ಡಿ-ಸಬ್ಸಿಡಿ ಯೋಜನೆ ಕುರಿತು ಆರ್ಬಿಐ ಮಹತ್ವದ ಘೋಷಣೆ!

ತುಟ್ಟಿಭತ್ಯೆ ಹೇಗೆ ಹೆಚ್ಚಾಗುತ್ತದೆ?
ಕೇಂದ್ರ ಉದ್ಯೋಗಿಗಳ ತುಟ್ಟಿಭತ್ಯೆಯನ್ನು (ಡಿಎ) ಕೈಗಾರಿಕಾ ಕಾರ್ಮಿಕರ ಗ್ರಾಹಕ ಬೆಲೆ ಸೂಚ್ಯಂಕ (AICPI-IW) ನಿರ್ಧರಿಸುತ್ತದೆ. ತುಟ್ಟಿಭತ್ಯೆಯನ್ನು ಲೆಕ್ಕಾಚಾರ ಮಾಡುವ ಸೂತ್ರವನ್ನು ನಿಗದಿಪಡಿಸಲಾಗಿದೆ. 7ನೇ CPC DA% = [{AICPI-IW ನ ಸರಾಸರಿ (ಬೇಸ್ ಇಯರ್ 2001=100) ಕಳೆದ 12 ತಿಂಗಳುಗಳಲ್ಲಿ – 261.42}/261.42x100] = [{382.32-261.42}/261.42x100]= 46.24. ತುಟ್ಟಿಭತ್ಯೆ ಶೇ.4ರಷ್ಟು ಹೆಚ್ಚಳ ಮಾಡುವುದು ಲೆಕ್ಕಾಚಾರದಿಂದ ಸ್ಪಷ್ಟವಾಗಿದೆ. ಜುಲೈ 1, 2023 ರಿಂದ ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಶೇ 46ಕ್ಕೆ ಏರಿಕೆಯಾಗಲಿದೆ. ಅದರ ಪಾವತಿ ಅಕ್ಟೋಬರ್‌ನಲ್ಲಿ ಸಾಧ್ಯವಾಗಲಿದೆ.

ಇದನ್ನೂ ಓದಿ-ಕೋ-ಆಪರೇಟಿವ್ ಬ್ಯಾಂಕ್ ಗಳಿಗೆ ಹೊಸ ನಿಯಮ ಜಾರಿಗೊಳಿಸಿದ ಆರ್ಬಿಐ, ಇನ್ಮುಂದೆ ಗ್ರಾಹಕರಿಗೆ ಸಿಗಲಿದೆ ಈ ಲಾಭ!

ತುಟ್ಟಿ ಭತ್ಯೆ ಶೇ.4.24ರಷ್ಟು ಹೆಚ್ಚಳ
ಕಳೆದ 12 ತಿಂಗಳುಗಳಲ್ಲಿ AICPI-IW ನ ಸರಾಸರಿಯು 382.32 ಆಗಿದೆ. ಸೂತ್ರದ ಪ್ರಕಾರ, ಒಟ್ಟು ತುಟ್ಟಿ ಭತ್ಯೆ 46.24% ಆಗಿರುತ್ತದೆ. ಪ್ರಸ್ತುತ ತುಟ್ಟಿ ಭತ್ಯೆ ದರವು 42% ಆಗಿದೆ. ಇಂತಹ ಪರಿಸ್ಥಿತಿಯಲ್ಲಿ, ಜುಲೈ 1, 2023 ರಿಂದ, ಡಿಎಯಲ್ಲಿ 46.24%-42% = 4.24% ರಷ್ಟು ಹೆಚ್ಚಳವಾಗುತ್ತದೆ. ತುಟ್ಟಿಭತ್ಯೆಯನ್ನು ದಶಮಾಂಶದಲ್ಲಿ ಪಾವತಿಸದ ಕಾರಣ, ತುಟ್ಟಿಭತ್ಯೆಯನ್ನು ರೌಂಡ್ ಫಿಗರ್ ಅಂದರೆ ಶೇಕಡಾ 4 ಕ್ಕೆ ಪಾವತಿಸಲಾಗುತ್ತದೆ. 1 ಕೋಟಿಗೂ ಹೆಚ್ಚು ಉದ್ಯೋಗಿಗಳು ಮತ್ತು ಪಿಂಚಣಿದಾರರು ಇದರಿಂದ ಪ್ರಯೋಜನ ಪಡೆಯುತ್ತಾರೆ. ಆದರೆ, ಕೇಂದ್ರದ ಅಧೀನದಲ್ಲಿರುವವರು ಮತ್ತು 7ನೇ ವೇತನ ಆಯೋಗದ ಪೇ ಬ್ಯಾಂಡ್‌ನಲ್ಲಿ ಬರುವವರು ಮಾತ್ರ ಇದರ ಲಾಭ ಸಿಗುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News