Bakrid 2023: ಇಲ್ಲಿದೆ ನೋಡಿ ʼಬಕ್ರಿದ್‌ʼ ಹಬ್ಬದ ಮಹತ್ವ...!

 Festival Of Bakrid: ಬಕ್ರೀದ್‌ ಹಬ್ಬವು ಜಗತ್ತಿನಾದ್ಯಂತ ಮುಸ್ಲಿಮರಿಗೆ ಅತ್ಯಂತ ಮಂಗಳಕರವಾದ ಹಬ್ಬಗಳಲ್ಲಿ ಒಂದಾಗಿದೆ. ಇಲ್ಲಿದೆ ನೋಡಿ ಬಕ್ರಿದ್‌ ಹಬ್ಬದ ಮಹತ್ವ...

Written by - Zee Kannada News Desk | Last Updated : Jun 28, 2023, 01:44 PM IST
  • ತ್ಯಾಗದ ಪ್ರತೀಕ ಬಕ್ರೀದ್​ ಹಬ್ಬ
  • ಇಲ್ಲಿದೆ ನೋಡಿ ಬಕ್ರಿದ್‌ ಹಬ್ಬದ ಮಹತ್ವ
  • ಬಕ್ರೀದ್‌ ಹಬ್ಬವು ಜಗತ್ತಿನಾದ್ಯಂತ ಮುಸ್ಲಿಮರಿಗೆ ಅತ್ಯಂತ ಮಂಗಳಕರವಾದ ಹಬ್ಬ
Bakrid 2023: ಇಲ್ಲಿದೆ ನೋಡಿ ʼಬಕ್ರಿದ್‌ʼ ಹಬ್ಬದ ಮಹತ್ವ...! title=

ಬೆಂಗಳೂರು: ಬಕ್ರೀದ್‌ ಹಬ್ಬವು ಜಗತ್ತಿನಾದ್ಯಂತ ಮುಸ್ಲಿಮರಿಗೆ ಅತ್ಯಂತ ಮಂಗಳಕರವಾದ ಹಬ್ಬಗಳಲ್ಲಿ ಒಂದಾಗಿದೆ. ಇಸ್ಲಾಮಿಕ್ ಕ್ಯಾಲೆಂಡರ್‌  ಪ್ರಕಾರ ಈ ಪವಿತ್ರ ದಿನವನ್ನು ಧು ಅಲ್-ಹಿಜ್ಜಾದ ಹತ್ತನೇ  ದಿನದಂದು ಆಚರಿಸುತ್ತಾರೆ. ಈ ಹಬ್ಬದ ದಿನದಂದು ಬೆಳಗಿನ ಸಮಯದಲ್ಲಿ ನಮಾಝ್ ಮಾಡುವ ಮೂಲಕ ಹಬ್ಬ ಆರಂಭಿಸಲಾಗುತ್ತದೆ.

ಬಳಿಕ ಬಡವರಿಗೆ ತಮ್ಮ ಕೈಲಾದಷ್ಟು ದಾನ ಮಾಡಿ ಹಸಿದವರ ಹಸಿವು ನೀಗಸಬೇಕು. ಇಸ್ಲಾಂಮಿಕ್‌ ಪವಿತ್ರ ಗ್ರಂಥವಾದ ಕುರಾನ್‌ ನಲ್ಲಿ ಹೇಳಲಾಗಿದೆ. ಇನ್ನು ʼಈದ್ ಉಲ್ ಅದಾ ಎಂದರೆ, ಅದಾ ಎಂಬುದು ತ್ಯಾಗ, ಬಲಿದಾನ  ಹಾಗೂ ʼಈದ್ʼ ಎಂದರೆ ಹಬ್ಬ. ತ್ಯಾಗ ಸಂಕೇತವಾಗಿರುವ ಈ ಹಬ್ಬವನ್ನು ಬಕ್ರೀದ್‌ ಎನ್ನುವುದಾಗಿದೆ.

ಇದನ್ನೂ ಓದಿ:Viral Video: ʼಲೇ ನಂಗೆ ಬರ್ಯಾಕ ಬರಲ್ಲʼ ಅಂಥ ಗುರುಗಳಿಗೆ ಪುಟ್ಟ ಬಾಲಕ ಅವಾಜ್; ಸ್ಟೂಡೆಂಟ್ ರಾಕ್‌.. ಟೀಚರ್‌ ಶಾಕ್..!

ಬಕ್ರೀದ್‌ ಮಹತ್ವ:
ಅಲ್ಲಾಹು ಒಂದು ಬಾರಿ ತನ್ನ ಭಕ್ತರು ದಾನ, ತ್ಯಾಗ ಎಂದರೆ ಹೇಗೆ ಪ್ರತಿಕ್ರಿಯಿಸುವವರು ಎಂಬ ನಿಟ್ಟಿನಲ್ಲಿ ಹಜರತ್ ಇಬ್ರಾಹಿಂ ಅವರ ಪ್ರವಾದಿ ಕನಸಿನಲ್ಲಿ ಬಂದು  ನಿನಗೆ ತುಂಬಾ ಇಷ್ಟವಾದ ವಸ್ತುವನ್ನು  ನನಗೆ ನೀಡಬೇಕೆಂದು ಕೇಳಿಕೊಂಡರು.

ಆಗಾ ಹಜರತ್ ಇಬ್ರಾಹಿಂ ತಾನು ತುಂಬಾ ಪ್ರೀತಿಸುವ ವಸ್ತುವಿದ್ದರೇ ಅದು ನನ್ನ ಮಗ ಇಸ್ಮಾಯಿಲ್‌ ಎಂದರು. ಆದರೆ ದೇವರಾಗಿರುವ ಅಲ್ಲಾನೇ ಇಷ್ಟವಾದುದನ್ನು ಕೇಳಿರುವಾಗ ತನ್ನ ಮಗನಿಗಿಂತ ಬೇರೆ ಯಾವುದು ಇಲ್ಲ ಎಂದು ಯೋಚಿಸಿ ತನ್ನ ಮಗನನ್ನು ಅಲ್ಲಾಹುಗೆ ತ್ಯಾಗ ಮಾಡಲು ಮುಂದಾದರು. ಆದರೆ ದಾರಿ ಮಧ್ಯೆ ಸಿಕ್ಕ ಸೈತಾನು ತಂದೆ ಮಗನ ಸಂಬಂಧದ ಬಗ್ಗೆ ಬಿಡಿಸಿ ಹೇಳಿದರು.  

ಇದನ್ನೂ ಓದಿ: Viral Video: ತನ್ನ ಮನೆಯಲ್ಲಿ ಮೊದಲ ಬಾರಿಗೆ ವಿದ್ಯುತ್ ವ್ಯವಸ್ಥೆ ಕಂಡ 70 ವಯಸ್ಸಿನ ವಯೋವೃದ್ಧೆ ; ಅಧಿಕಾರಿಗಳಿಗೆ ಸಿಹಿ ಹಂಚಿ ಸಂಭ್ರಮ!

ಸೈತಾನನ ಮಾತು ಆಲಿಸಿದ  ಇಬ್ರಾಹಿಂಗೆ ಇನ್ನಷ್ಟು ಚಿಂತೆಯಾಯಿತು. ನಾನು ಸೈತಾನನ ಮಾತು ಕೇಳಿದರೇ ಅಲ್ಲಾಹುಗೆ ಮೋಸ ಮಾಡಿದಂತಾಗುವುದು ಎಂದು ಯೋಚಿಸಿ ಮಗನ ಬಲಿಕೊಡಲು ತನ್ನ ಕಣ್ಣುಗಳಿಗೆ ಬಟ್ಟೆ ಕಟ್ಟಿ ಮಗನನ್ನು ರುಂಡ ಹಾರಿಸಿದರು.

ಆದರೆ ಕಣ್ಣಿನಿಂದ ಬಟ್ಟೆ ತೆಗೆದು ನೋಡಿದರೇ ಇಬ್ರಾಹಿಂ ಮಗನಿಗೆ ಏನೂ ಆಗದೇ ಮೇಕೆಯೊಂದು ಬಲಿಯಾಗಿತ್ತು. ಬಳಿಕ ಆ ವಿಸ್ಮಯ ಕಂಡು ತನ್ನ ಪರೀಕ್ಷಿಸಲು ಅಲ್ಲಾಹು ಹೀಗೆ ಮಾಡಿದ್ದಾರೆಂದು ಅರಿತರು. ಹೀಗಾಗಿ ಬಕ್ರೀದ್‌ ಹಬ್ಬದಂದು  ಕುರಿ ಮೇಕೆಗಳನ್ನು  ಬಲಿ ನೀಡುತ್ತಾರೆ ಎಂಬ ನಂಬಿಕೆ ಇದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News