ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೂ, ಕಾಂಗ್ರೆಸ್ ಪಕ್ಷಕ್ಕೂ ನಂಟಿದೆ: ಬಿಜೆಪಿ

Mangalore Kukkar Bomb Blast Case: ಮಂಗಳೂರು ಕುಕ್ಕರ್‌ ಬಾಂಬ್‌ ಸ್ಪೋಟದ ಆರೋಪಿಯೊಂದಿಗೆ ಬ್ಲಾಕ್‌ ಕಾಂಗ್ರೆಸ್‌ ಜವಾಬ್ದಾರಿಯಿರುವ ವ್ಯಕ್ತಿಯ ಪುತ್ರ ನೇರ ಸಂಪರ್ಕ ಹೊಂದಿದ್ದ ಎಂದು ಬಿಜೆಪಿ ಟ್ವೀಟ್ ಮಾಡಿದೆ.

Written by - Puttaraj K Alur | Last Updated : Jan 6, 2023, 06:33 PM IST
  • ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣಕ್ಕೂ, ಕಾಂಗ್ರೆಸ್‌ ಪಕ್ಷಕ್ಕೂ ನಂಟಿದೆ
  • ಕುಕ್ಕರ್ ಬ್ಲಾಸ್ಟ್ ಪ್ರಕರಣ ಸಂಬಂಧ ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್ ಕಾರ್ಯದರ್ಶಿ ತಾಜುದ್ದೀನ್ ಪುತ್ರನ ಬಂಧನ
  • ತಾಜುದ್ದೀನ್ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಮತ್ತು ಯುಟಿ ಖಾದರ್ ಅವರ ಅತ್ಯಾಪ್ತ
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೂ, ಕಾಂಗ್ರೆಸ್ ಪಕ್ಷಕ್ಕೂ ನಂಟಿದೆ: ಬಿಜೆಪಿ title=
ಕಾಂಗ್ರೆಸ್ ವಿರುದ್ಧ ಬಿಜೆಪಿ ಗಂಭೀರ ಆರೋಪ

ಬೆಂಗಳೂರು: ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣಕ್ಕೂ, ಕಾಂಗ್ರೆಸ್‌ ಪಕ್ಷಕ್ಕೂ ನಂಟಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. #CommunalCongress ಹ್ಯಾಶ್‍ಟ್ಯಾಗ್ ಬಳಸಿ ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದೆ.

‘ಮಂಗಳೂರು ಕುಕ್ಕರ್‌ ಬಾಂಬ್‌ ಸ್ಪೋಟದ ಆರೋಪಿಯ ಪರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಕಾಲತ್ತು ಸುಮ್ಮನೆ ವಹಿಸಿಲ್ಲ. ಬಾಂಬ್‌ ಸ್ಪೋಟ ಪ್ರಕರಣಕ್ಕೂ, ಕಾಂಗ್ರೆಸ್‌ ಪಕ್ಷಕ್ಕೂ ನಂಟಿದೆ. ಬಾಂಬ್‌ ಸ್ಪೋಟದ ಆರೋಪಿಯೊಂದಿಗೆ ಬ್ಲಾಕ್‌ ಕಾಂಗ್ರೆಸ್‌ ಜವಾಬ್ದಾರಿಯಿರುವ ವ್ಯಕ್ತಿಯ ಪುತ್ರ ನೇರ ಸಂಪರ್ಕ ಹೊಂದಿದ್ದ’ ಎಂದು ಟ್ವೀಟ್ ಮಾಡಿದೆ.

ಇದನ್ನೂ ಓದಿ: ಸ್ವಾಮೀಜಿಗಳು‌24 ಗಂಟೆಗಳ‌ ಗಡುವು ನೀಡಿದ್ದು ಸರಿಯಲ್ಲ!

‘ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್ ಕಾರ್ಯದರ್ಶಿ ತಾಜುದ್ದೀನ್ ಎಂಬವನ ಪುತ್ರ ಈಗ ಕುಕ್ಕರ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧ ಬಂಧಿತನಾಗಿದ್ದಾನೆ. ತಾಜುದ್ದೀನ್ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಮತ್ತು ಯುಟಿ ಖಾದರ್ ಅವರ ಅತ್ಯಾಪ್ತನಾಗಿದ್ದಾನೆ. ಮಂಗಳೂರು ಸ್ಪೋಟದ ಬಗ್ಗೆ‌ ಕಾಂಗ್ರೆಸ್‌ ಮೃದು ಧೋರಣೆ ತಳೆಯಲು ಇದೇ ಕಾರಣವೇ?’ ಎಂದು ಬಿಜೆಪಿ ಪ್ರಶ್ನಿಸಿದೆ.

‘ಮತಾಂಧ ಚಟುವಟಿಕೆಗಳನ್ನು ಎಸಗುವವರನ್ನು "ಬ್ರದರ್ಸ್" ಎಂದು ಸಂಬೋಧಿಸುವ ಡಿಕೆ ಶಿವಕುಮಾರ್ ಅವರೇ, ಉಗ್ರ ಶಾರೀಕ್‌, ಅವನ ಸ್ನೇಹಿತ ರಿಶಾನ್‌ ಶೇಖ್‌ ಮತ್ತು ರಿಶಾನ್‌ ತಂದೆ, ಬ್ಲಾಕ್‌ ಕಾಂಗ್ರೆಸ್‌ ಪದಾಧಿಕಾರಿಯನ್ನು ಹೇಗೆ ಸಂಬೋಧಿಸುತ್ತೀರಿ? ಕೆಪಿಸಿಸಿಯಲ್ಲಿ ಉಗ್ರ ಸೆಲ್‌ ತೆರೆಯುವ ಯೋಚನೆಯಿದೆಯೇ?’ ಎಂದು ಬಿಜೆಪಿ ಕುಟುಕಿದೆ.

ಇದನ್ನೂ ಓದಿ: ಕೆಪಿಸಿಸಿ ಕಚೇರಿಯಲ್ಲಿ ರಂಪಾಟ! ಕೆಜಿಎಫ್ ಬಾಬುಗೆ ಚಳಿ ಬಿಡಿಸಿದ ‘ಕೈ’ ಕಾರ್ಯಕರ್ತರು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News