SSLC Exam Result 2024 : ಜೊತೆಯಾಗಿ ಪರೀಕ್ಷೆ ಬರೆದ ತಾಯಿ ಮಗ ಇಬ್ಬರೂ ಪಾಸ್ : ತಾಯಿ - ಮಗ ಪಡೆದ ಪಡೆದ ಅಂಕ ಎಷ್ಟು ?

SSLC Exam Result 2024 : 38 ವರ್ಷದ ತಾಯಿ ಜ್ಯೋತಿ.ಪಿ.ಆರ್.ಎರಡನೇ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದರು. ಸಕಲೇಶಪುರ ತಾಲೂಕಿನ, ಬಾಳ್ಳುಪೇಟೆಯ ಸಿದ್ದಣ್ಯಯ್ಯ ಹೈಸ್ಕೂಲ್‌ನಲ್ಲಿ ಮಗನಿತಿನ್.ಸಿ.ಬಿ. ಜೊತೆ  ತಾಯಿ ಜ್ಯೋತಿ.ಪಿ.ಆರ್. ಕೂಡಾ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದಾರೆ.

Written by - Ranjitha R K | Last Updated : May 9, 2024, 04:05 PM IST
  • SSLC ಫಲಿತಾಂಶ ಪ್ರಕಟ
  • ಜೊತೆಯಾಗಿ ಪರೀಕ್ಷೆ ಬರೆದಿದ್ದ ತಾಯಿ-ಮಗ
  • ಮನೆಯಲ್ಲಿ ಮನೆ ಮಾಡುದ ಸಂತಸ
SSLC Exam Result 2024 : ಜೊತೆಯಾಗಿ ಪರೀಕ್ಷೆ ಬರೆದ ತಾಯಿ ಮಗ ಇಬ್ಬರೂ ಪಾಸ್ : ತಾಯಿ - ಮಗ ಪಡೆದ ಪಡೆದ ಅಂಕ ಎಷ್ಟು ?  title=

ಹಾಸನ : ಇಂದು ಎಸ್‌ಎಸ್‌ಎಲ್ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಹಾಸನದಲ್ಲಿ ಅಪರೂಪದ ಪ್ರಸಂಗ ನಡೆದಿದೆ. ಜಿಲ್ಲೆಯಲ್ಲಿ ತಾಯಿ ಮಗ ಇಬ್ಬರೂ ಪರೀಕ್ಷೆ ಬರೆದಿದ್ದಾರೆ.ಇದೀಗ ಇಬ್ಬರ ಫಲಿತಾಂಶ ಬಂದಿದೆ. 

ತಾಯಿ ಮಗ ಜೊತೆಯಾಗಿ ಪರೀಕ್ಷೆ ಬರೆದ ಘಟನೆ ಸಕಲೇಶಪುರ ತಾಲೂಕಿನ ಚಿನ್ನಳ್ಳಿ ಗ್ರಾಮದಲ್ಲಿ ನಡೆದಿದೆ.38 ವರ್ಷದ ತಾಯಿ ಜ್ಯೋತಿ.ಪಿ.ಆರ್.ಎರಡನೇ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದರು. ಸಕಲೇಶಪುರ ತಾಲೂಕಿನ, ಬಾಳ್ಳುಪೇಟೆಯ ಸಿದ್ದಣ್ಯಯ್ಯ ಹೈಸ್ಕೂಲ್‌ನಲ್ಲಿ ಮಗನಿತಿನ್.ಸಿ.ಬಿ. ಜೊತೆ  ತಾಯಿ ಜ್ಯೋತಿ.ಪಿ.ಆರ್. ಕೂಡಾ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದಾರೆ. 

ಇದನ್ನೂ ಓದಿ : ಪೆನ್ ಡ್ರೈವ್ ಪ್ರಕರಣ; ಹೋರಾಟ ಮಾಡದಂತೆ ಕುಮಾರಸ್ವಾಮಿಯನ್ನು ಕಟ್ಟಿಹಾಕಿರುವವರು ಯಾರು: ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು

 ಇಂದು ಪ್ರಕಟವಾದ ಫಲಿತಾಂಶ ತಾಯಿ ಮಗ ಇಬ್ಬರಿಗೂ ಸಂತಸ ತಂದಿದೆ. ತಾಯಿ ಜ್ಯೋತಿ.ಪಿ.ಆರ್. 250 ಅಂಕ ಪಡೆದು ತೇರ್ಗಡೆಯಾಗಿದ್ದರೆ, ಮಗ ನಿತಿನ್.ಸಿ.ಬಿ. 582 ಅಂಕ ಪಡೆದಿದ್ದಾರೆ. ಪುತ್ರ  ನಿತಿನ್.ಸಿ.ಬಿ. ಬಾಳ್ಳುಪೇಟೆಯಲ್ಲಿರುವ ವಿವೇಕ ಕಾನ್ವೆಂಟ್‌ನಲ್ಲಿ ಓದುತ್ತಿದ್ದ. ಇದೀಗ ಮಗನ ಜಿತೆ ಪರೀಕ್ಷೆ ಬರೆದು ತಾಯಿಯೂ ಪಾಸಾಗಿರುವ ಕಾರಣ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. 

ಇದನ್ನೂ ಓದಿ : Karnataka SSLC Results 2024 :ಎಸ್ಎಸ್ ಎಲ್ ಸಿ ಫಲಿತಾಂಶ ಪ್ರಕಟ: ಉಡುಪಿ ಪ್ರಥಮ, ಯಾದಗಿರಿಗೆ ಕೊನೆಯ ಸ್ಥಾನ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News