ಲಂಚ ಪ್ರಕರಣ: ಸಮಾಜ ಕಲ್ಯಾಣ ಇಲಾಖೆ ಎಸ್ಡಿಎ ಲೋಕಾಯುಕ್ತ ಬಲೆಗೆ

ಕೊಪ್ಪಳ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರ ಕಚೇರಿಯ ಎಸ್ಡಿಎ ವೆಂಕಟೇಶ ಸೋಮಪ್ಪ ಪೂಜಾರ ಅವರು ಲಂಚದ ಹಣ 5000 ಪಡೆದುಕೊಂಡು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

Last Updated : Apr 6, 2023, 06:02 AM IST
  • ನಿಸರ್ಗ ಡಾಬಾ ಮುಂದೆ ಇರುವ ಪಾನ್ ಶಾಪ್ ಹತ್ತಿರ ಫರ‍್ಯಾದಿದಾರರಿಂದ ಲಂಚದ ಹಣ ಪಡೆದುಕೊಂಡು ಟ್ರಾಪ್‌ಗೆ ಒಳಗಾಗಿದ್ದಾರೆ.
  • ಆರೋಪಿತನನ್ನು ಲೋಕಾಯುಕ್ತವು ತನ್ನ ವಶಕ್ಕೆ ಪಡೆದು ತನಿಖೆಯನ್ನು ಮುಂದುವರೆಸಿದೆ.
ಲಂಚ ಪ್ರಕರಣ: ಸಮಾಜ ಕಲ್ಯಾಣ ಇಲಾಖೆ ಎಸ್ಡಿಎ ಲೋಕಾಯುಕ್ತ ಬಲೆಗೆ title=

ಕೊಪ್ಪಳ: ಕೊಪ್ಪಳ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರ ಕಚೇರಿಯ ಎಸ್ಡಿಎ ವೆಂಕಟೇಶ ಸೋಮಪ್ಪ ಪೂಜಾರ ಅವರು ಲಂಚದ ಹಣ 5000 ಪಡೆದುಕೊಂಡು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಗೆ ಕಪ್ಪುಹಣ ಹೊರಗೆ ಬರುತ್ತದೆ ಎನ್ನುವ ಭಯವಿದೆ: ಸಿಎಂ ಬೊಮ್ಮಾಯಿ‌

ಸಮಾಜ ಕಲ್ಯಾಣ ಇಲಾಖೆಯಿಂದ ನೀಡಲಾಗುವ ರೂ. 5ಲಕ್ಷ ಪ್ರೋತ್ಸಾಹಧನ ಮಂಜೂರಾತಿ ಕುರಿತಂತೆ ಅರ್ಜಿದಾರರಿಗೆ ವೆಂಕಟೇಶ ಸೋಮಪ್ಪ ಪೂಜಾರ ಅವರು 5 ಸಾವಿರ ರೂ.ಗಳಿಗೆ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದು, ಏ 5ರ ಮಧ್ಯಾಹ್ನ 1.55 ಗಂಟೆಯ ಸುಮಾರಿಗೆ ಹೊಸಪೇಟೆ ರಸ್ತೆಯ ನಿಸರ್ಗ ಡಾಬಾ ಮುಂದೆ ಇರುವ ಪಾನ್ ಶಾಪ್ ಹತ್ತಿರ ಫರ‍್ಯಾದಿದಾರರಿಂದ ಲಂಚದ ಹಣ ಪಡೆದುಕೊಂಡು ಟ್ರಾಪ್‌ಗೆ ಒಳಗಾಗಿದ್ದಾರೆ. ಆರೋಪಿತನನ್ನು ಲೋಕಾಯುಕ್ತವು ತನ್ನ ವಶಕ್ಕೆ ಪಡೆದು ತನಿಖೆಯನ್ನು ಮುಂದುವರೆಸಿದೆ.

ಇದನ್ನೂ ಓದಿ: ರಾಷ್ಟ್ರಪತಿಯಿಂದ ಎಸ್,ಎಲ್ ಭೈರಪ್ಪ, ಸುಧಾಮೂರ್ತಿ ಗೆ ಪದ್ಮಭೂಷಣ ಪ್ರಧಾನ

ಲೋಕಾಯುಕ್ತ ಕೊಪ್ಪಳ ಪೊಲೀಸ್ ಉಪಾಧೀಕ್ಷಕರಾದ ಸಲೀಂಪಾಷಾ ಅವರ ಮಾರ್ಗದರ್ಶನದಲ್ಲಿ ಪಿ.ಐ (ತನಿಖಾಧಿಕಾರಿ) ಸಂತೋಷ ರಾಠೋಡ, ಪಿ.ಐ ಗಿರೀಶ ರೋಡ್ಕರ್, ಪಿಐ ರಾಜೇಶ ಬಟಗುರ್ಕಿ, ಪಿ.ಐ ಚಂದ್ರಪ್ಪ ಈಟಿ., ಸಿಹೆಚ್‌ಸಿ ಸಿದ್ದಯ್ಯ, ಸಿಹೆಚ್‌ಸಿ ರಾಮಣ್ಣ, ಸಿಹೆಚ್‌ಸಿ ಬಸವರಾಜ ಬೀಡನಾಳ, ಸಿಪಿಸಿ ರಂಗನಾಥ, ಸಿಪಿಸಿ ನಾಗಪ್ಪ, ಮಪಿಸಿ ತಾರಾಮತಿ, ಮಪಿಸಿ ಶೈಲಜಾ, ಎಪಿಸಿ ಆನಂದಕುಮಾರ, ಎಪಿಸಿ ಗುರು ದೇಶಪಾಂಡೆ, ಎಹೆಚ್‌ಸಿ ರಾಜು ಅವರು ಈ ಟ್ರಾಪ್ ಪ್ರಕರಣದಲ್ಲಿ ಭಾಗವಹಿಸಿರುತ್ತಾರೆ ಎಂದು ಕರ್ನಾಟಕ ಲೋಕಾಯುಕ್ತ ರಾಯಚೂರು ಪೊಲೀಸ್ ಅಧೀಕ್ಷಕರ ಕಚೇರಿಯ ಪ್ರಕಟಣೆ ತಿಳಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News