ಬೆಂಗಳೂರಿನಲ್ಲಿ ಶಾಸಕನ ಪುತ್ರನಿಂದ ಯುವಕನ ಮೇಲೆ ಹಲ್ಲೆ

ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆಗಿರುವ ಮೊಹಮ್ಮದ್ ಹ್ಯಾರಿಸ್ ನಳಪಾಡ್  ಮತ್ತು ಇತರ 10 ಮಂದಿ ವಿರುದ್ಧ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಲಾಗಿದೆ. 

Last Updated : Feb 18, 2018, 11:27 AM IST
ಬೆಂಗಳೂರಿನಲ್ಲಿ ಶಾಸಕನ ಪುತ್ರನಿಂದ ಯುವಕನ ಮೇಲೆ ಹಲ್ಲೆ title=
Pic : Facebook

ಬೆಂಗಳೂರು : ಜಿಲ್ಲೆಯ ಶಾಂತಿನಗರ ಶಾಸಕ ಹ್ಯಾರಿಸ್ ಅವರ ಮಗ ಮಹಮ್ಮದ್ ನಲಪಾಡ್ ಹ್ಯಾರಿಸ್ ಇಲ್ಲಿನ ಯುಬಿ ರೆಸ್ಟೋರೆಂಟ್ನಲ್ಲಿ ಯುವಕನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಆತನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. 

ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆಗಿರುವ ಮೊಹಮ್ಮದ್ ಹ್ಯಾರಿಸ್ ನಳಪಾಡ್ ಮತ್ತು ಇತರ 10 ಮಂದಿ ವಿರುದ್ಧ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಲಾಗಿದೆ. 

ಯುವಕ ವಿದ್ವತ್ ಊಟಕ್ಕೆಂದು ಯುಬಿ ಸಿಟಿಯ ರೆಸ್ಟೋರೆಂಟ್ ಗೆ ಬಂದಿದ್ದರು ಎನ್ನಲಾಗಿದ್ದು, ಈ ವೇಳೆ ಅದೇ ರೆಸ್ಟೋರೆಂಟ್ ಗೆ ಬಂದಿದ್ದ ಶಾಸಕ ಹ್ಯಾರಿಸ್ ಮಗ ಹಾಗು ಆತನ ಸ್ನೇಹಿತರು ಕಾಲನ್ನು ಹಿಂದಕ್ಕೆ ತೆಗೆಯುವಂತೆ ಧಮಕಿ ಹಾಕಿದ್ದಾರೆ ಎನ್ನಲಾಗಿದೆ. ಈ ವೇಳೆ ಗಲಾಟೆ ನಡೆದಿದ್ದು, ವಿದ್ವತ್ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. 

2017ರ ಮೇ ತಿಂಗಳಲ್ಲಿ ಕಾಂಗ್ರೆಸ್ ನೇತೃತ್ವದ ಚುನಾವಣೆಯಲ್ಲಿ ವಿಜಯಶಾಲಿಯಾಗಿದ್ದ ಮೊಹಮ್ಮದ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡರು. ಅವರು ನಳಪಾಡ್ ಗ್ರೂಪ್ ಆಫ್ ಕಂಪೆನಿಗಳ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ.

ಈ ಘಟನೆ ನಡೆದ ಸಂದರ್ಭದಲ್ಲಿ ಅಲ್ಲಿದ್ದ ರೆಸ್ಟೋರೆಂಟ್ ವ್ಯವಸ್ಥಾಪಕ ಮತ್ತು ಗ್ರಾಹಕರನ್ನು ಪೊಲೀಸರು ಪ್ರಶ್ನೆ ನಡೆಸಿದ್ದು, ತನಿಖೆ ಆರಂಭಿಸಿದ್ದಾರೆ. 

2016ರಲ್ಲಿ ಬೆಂಗಳೂರಿನ ಶಾಂತಿನಗರದ ಪಬ್ ಹೊರಗೆ ವ್ಯಕ್ತಿಯೋರ್ವನ ಮೇಲೆ ಹಲ್ಲೆ ಮಾಡಿದ ಪ್ರಕರಣದಲ್ಲಿ, ಅವರ ಸಹೋದರ ಉಮರ್ ಆರೋಪಿಯಾಗಿದ್ದರು. ಆದರೆ, ಈ ಈ ಸಂಬಂಧ ಪೊಲೀಸರು ಎಫ್ಐಆರ್ ದಾಖಲಿಸಲು ನಿರಾಕರಿಸಿದ್ದರು ಎಂದು ವರದಿಗಳು ತಿಳಿಸಿವೆ. ಅಂದು ಆ ಪಬ್ ಮಾಲೀಕರು, ಉಮರ್ ಈ ಘಟನೆಯಲ್ಲಿ ಭಾಗಿಯಾಗಲಿಲ್ಲ ಎಂದು ಹೇಳಿದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಲಿಲ್ಲ ಎಂದು ತಿಳಿದುಬಂದಿದೆ. 

Trending News