ಮತಾಂತರ ಅಲ್ಲ ಮನಸಾಂತರ: ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ತಡರಾತ್ರಿ ಪ್ರೊಟೆಸ್ಟ್

ಮತಾಂತರ ಅಲ್ಲ ಮನಸಾಂತರ: ಹೀಗೇ ನೂರಾರು ಜನರು ಏಕಾಏಕಿ ಹಳೆ ಹುಬ್ಬಳ್ಳಿಯ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಬೇಕೇ ಬೇಕು ನ್ಯಾಯ ಬೇಕು.. ಬಂಧನ ಮಾಡಿ.. ಮಾಡಿ ಬಂಧನ ಮಾಡಿ ಅಂತಾ ತಡರಾತ್ರಿ ಆಕ್ರೋಶ ವ್ಯಕ್ತಪಡಿಸಿದರು. ಹುಬ್ಬಳ್ಳಿ ಧಾರವಾಡ ಸೇರಿದಂತೆ ಎಲ್ಲೆಲ್ಲೂ ಮತಾಂತರ ಆರೋಪ ಕೇಳಿ ಬರುತ್ತಿದೆ. ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದರು ಕೂಡ ಅದು ಸರಿಯಾಗಿ ಪಾಲನೆಯಾಗದೆ ಮತಾಂತರ ನಡೆಯುತ್ತಲೆ ಇವೆ. 

Written by - Yashaswini V | Last Updated : Nov 16, 2022, 07:46 AM IST
  • ನಗರದ ಶಿವಾ ಕಾಲೋನಿ ಸೇರಿದಂತೆ ಹಳೇ ಹುಬ್ಬಳ್ಳಿಯಲ್ಲಿ ಬಡವರಿಗೆ ಹಣದೊಂದಿಗೆ ವಿವಿಧ ಆಮೀಷಗಳನ್ನು ತೋರಿಸಿ ಹಿಂದುಗಳ ಮತಾಂತರ ಮಾಡಲಾಗುತ್ತಿದೆ.
  • ಮತಾಂತರ ತಡೆಯಬೇಕು, ಮತಾಂತರದಲ್ಲಿ ಭಾಗಿಯಾದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು
  • ಅಂತಹವರ ವಿರುದ್ಧ ಶೀಘ್ರದಲ್ಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಪ್ರತಿಭಟನಾಕಾರರು
ಮತಾಂತರ ಅಲ್ಲ ಮನಸಾಂತರ: ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ತಡರಾತ್ರಿ ಪ್ರೊಟೆಸ್ಟ್ title=
Conversion from Hinduism to Christianity

ಮತಾಂತರ ಅಲ್ಲ ಮನಸಾಂತರ: ಹುಬ್ಬಳ್ಳಿ ನಗರದ ವಿವಿಧ ಬಡಾವಣೆಗಳಲ್ಲಿ ಮತಾಂತರದ‌ ಹೊಸ ರೂಪ ಮನಸಾಂತರ ಎಂಬ ನೂತನ ಆಯಾಮದ ಮೇಲೆ ಮುಗ್ಧ ಜನರನ್ನ ಹಿಂದು ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ನಡೆಯುತ್ತಿದ್ದು ಕೂಡಲೇ ಮತಾಂತರ ನಿಷೇಧ ಕಾಯ್ದೆ ಅಡಿ ತಪ್ಪಿತಸ್ಥರ ಮೇಲೆ ಕಾನೂನುಕ್ರಮಕ್ಕೆ ಆಗ್ರಹಿಸಿ ವಿಶ್ವ‌ ಹಿಂದು ಪರಿಷತ್ ಸೇರಿದಂತೆ ವಿವಿಧ ಹಿಂದು ಪರ ಸಂಘಟನೆಗಳ ನೇತೃತ್ವದಲ್ಲಿ ರೊಚ್ಚಿಗೆದ್ದ ಜನ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಗೆ‌ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಇದೇ ಸಂದರ್ಭದಲ್ಲಿ 10 ಪಾಸ್ಟರ್ ಸೇರಿದಂತೆ , 30 ಜನರ ವಿರುದ್ಧ ದೂರು ನೀಡಲಾಯಿತು. 

ಹೀಗೇ ನೂರಾರು ಜನರು ಏಕಾಏಕಿ ಹಳೆ ಹುಬ್ಬಳ್ಳಿಯ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಬೇಕೇ ಬೇಕು ನ್ಯಾಯ ಬೇಕು.. ಬಂಧನ ಮಾಡಿ.. ಮಾಡಿ ಬಂಧನ ಮಾಡಿ ಅಂತಾ ತಡರಾತ್ರಿ ಆಕ್ರೋಶ ವ್ಯಕ್ತಪಡಿಸಿದರು. ಹುಬ್ಬಳ್ಳಿ ಧಾರವಾಡ ಸೇರಿದಂತೆ ಎಲ್ಲೆಲ್ಲೂ ಮತಾಂತರ ಆರೋಪ ಕೇಳಿ ಬರುತ್ತಿದೆ. ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದರು ಕೂಡ ಅದು ಸರಿಯಾಗಿ ಪಾಲನೆಯಾಗದೆ ಮತಾಂತರ ನಡೆಯುತ್ತಲೆ ಇವೆ. ಹುಬ್ಬಳ್ಳಿ ನಗರದ ಶಿವಾ ಕಾಲೋನಿ ಚಪ್ಪರ ಕಾಲೋನಿಯಲ್ಲಿ ಶಿಕ್ಕಲಗಾರ ಸಮಾಜ ಹಾಗೂ ಇತರ ಬಡ ಹಿಂದು ಸಮಾಜದವರನ್ನು ಟಾರ್ಗೇಟ್ ಮಾಡಿ ಮತಾಂತರ ಮಾಡಲಾಗುತ್ತದೆ. ಅಂತಹವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು, ಅವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ- ಕಬ್ಬಿಗೆ ಸೂಕ್ತ ಬೆಲೆ ನಿರ್ಣಯ ಸಂಧಾನ ಸಭೆ ವಿಫಲ- ಇಂದು ಮುಧೋಳ ನಗರ ಬಂದ್

ನಗರದ ಶಿವಾ ಕಾಲೋನಿ ಸೇರಿದಂತೆ ಹಳೇ ಹುಬ್ಬಳ್ಳಿಯಲ್ಲಿ ಬಡವರಿಗೆ ಹಣದೊಂದಿಗೆ ವಿವಿಧ ಆಮೀಷಗಳನ್ನು  ತೋರಿಸಿ ಹಿಂದುಗಳ ಮತಾಂತರ ಮಾಡಲಾಗುತ್ತಿದೆ. ಮತಾಂತರ ತಡೆಯಬೇಕು, ಮತಾಂತರದಲ್ಲಿ ಭಾಗಿಯಾದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸುಮಾರು ಎರಡು ಗಂಟೆಗಳ ಕಾಲ ಪೊಲೀಸ್ ಠಾಣೆ ಎದುರು  ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಅಂತಹವರ ವಿರುದ್ಧ ಶೀಘ್ರದಲ್ಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಮಾತನಾಡಿದ ಹಿಂದು ಪರ ಸಂಘಟನೆಗಳ ಮುಖಂಡ ಜಯತೀರ್ಥ ಕಟ್ಟಿ, ಕಳೆದ‌ ಕೆಲವು ದಿನಗಳಿಂದ ಅಮಾಯಕರಿಗೆ ಹಿಂದು ಧರ್ಮೀಯರಿಗೆ ಹಣ ಆಮಿಷ ತೋರಿಸಿ ಮತಾಂತರ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಇದನ್ನು ಕೂಡಲೇ ನಿಲ್ಲಿಸಬೇಕು. ಮತಾಂತರಿಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ರಾಜ್ಯದಲ್ಲಿ ಮತಾಂತರ ನಿಷೇಧ ಕಾನೂನು ಜಾರಿ ಮಾಡಲಾಗಿದೆ. ಆದರೂ ಇದಕ್ಕೆ ಕ್ರಿಶ್ಚಿಯನ್ ಧರ್ಮದ ಕೇಲವರು ಹೆದರುತ್ತಿಲ್ಲ. ಈಗಾಗಲೇ ಹುಬ್ಬಳ್ಳಿಯ ನವನಗರದಲ್ಲಿ ಕೆಲ ತಿಂಗಳುಗಳ ಹಿಂದೆ ಇದೇ ರೀತಿ ಮತಾಂತರ ನಡೆದು ಉಗ್ರ ಸ್ವರೂಪದ ಹೋರಾಟದ ಬಳಿಕ ಕೆಲವರ ಮೇಲೆ ಕ್ರಮ ಆಯಿತು.‌ ಆದಾಗ್ಯೂ, ಇನ್ನೂ ಕೂಡ ಈ ಮತಾಂತರದ ಹಾವಳಿ ನಿಂತಿಲ್ಲ. ಇದರಲ್ಲಿ ಸಾಕಷ್ಟು ಕಾಣದ ಕೈಗಳ ಕೈವಾಡ‌ ಇದೆ‌.‌ ಈಗ ಮತಾಂತರ ಬದಲಾಗಿ ಮನಸಾಂತರ ಹೊಸ ರೂಪದ ಮುಖಾಂತರ ಮತಾಂತರ ನಡೆಯುತ್ತದೆ ಎಂದರು.

ಇದನ್ನೂ ಓದಿ- Basavaraj Bommai : ಬಿಜೆಪಿ ಸರ್ಕಾರದಿಂದ 150 ಕ್ಕೂ ಹೆಚ್ಚು ಕೆರೆಗಳು ತುಂಬಿವೆ : ಸಿಎಂ ಬೊಮ್ಮಾಯಿ

ಮತಾಂತರದಲ್ಲಿ ಹತ್ತು ಪಾಸ್ಟರ್ ಹಾಗೂ 30 ಮತಾಂತರ ಆದವರ ಹಾಗೂ ಇತರರ ಮೇಲೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದು  ಧಾರವಾಡ ಪೊಲೀಸ್ ಕಮೀಷನರ್, ಡಿಸಿಪಿ ಪ್ರತಿಭಟನಾಕಾರರ ಮನವಿ ಸ್ವೀಕಾರ ಮಾಡಿ  ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News