ಕಮಲ ದಳ'ದಲ್ಲಿಯೇ ಇದೆ ಡೇಂಜರ್ : ದಿನೇಶ್ ಗುಂಡೂರಾವ್ ಕಿಡಿ

ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ಸಚಿವ ದಿನೇಶ್ ಗುಂಡೂರಾವ್, ಈಗ ಹೇಳಿ ಯಾರು ಡೇಂಜರ್ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

Written by - Ranjitha R K | Last Updated : Apr 30, 2024, 03:29 PM IST
  • ಕಮಲ ಪಾಳಯದ ವಿರುದ್ದ ದಿನೇಶ್ ಗುಂಡೂರಾವ್ ಕಿಡಿ
  • ಚುನಾವಣೆಯಲ್ಲಿ ಕಣ್ಣಾ ಮುಚ್ಚಾಲೆ ಆಟ ಆಡಿದಿರಾ - ದಿನೇಶ್ ಪ್ರಶ್ನೆ
  • ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ಸಚಿವ ದಿನೇಶ್ ಗುಂಡೂರಾವ್
ಕಮಲ ದಳ'ದಲ್ಲಿಯೇ ಇದೆ ಡೇಂಜರ್ : ದಿನೇಶ್ ಗುಂಡೂರಾವ್ ಕಿಡಿ  title=

ಬೆಂಗಳೂರು : ಪ್ರಜ್ವಲ್ ರೇವಣ್ಣ ವಿರುದ್ದ ಕೇಳಿಬಂದಿರುವ ಲೈಂಗಿಕ ದೌರ್ಜನ್ಯದ ಆರೋಪಗಳ ಕುರಿತು ಕಮಲ ಪಾಳಯದ ವಿರುದ್ದ ದಿನೇಶ್ ಗುಂಡೂರಾವ್ ಕಿಡಿ ಕಾರಿದ್ದಾರೆ. ಮೊದಲೇ ಗೊತ್ತಿತ್ತು ಎಂದು ಹೇಳುವ ಬಿಜೆಪಿ ನಾಯಕರು ಕಿರಾತಕ ಕೃತ್ಯಗಳನ್ನ ಕಂಡೂ ಚುನಾವಣೆಯಲ್ಲಿ ಕಣ್ಣಾ ಮುಚ್ಚಾಲೆ ಆಟ ಆಡಿದಿರಾ ಎಂದು ಪ್ರಶ್ನಿಸಿದ್ದಾರೆ. 

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ಸಚಿವ ದಿನೇಶ್ ಗುಂಡೂರಾವ್, ಈಗ ಹೇಳಿ ಯಾರು ಡೇಂಜರ್ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಎಲ್ಲಾ ಗೊತ್ತಿದ್ದು ಕಣ್ಮುಚ್ಚಿ ಕುಳಿತಿದ್ದ 'ಕಮಲ ದಳ'ದವರೇ ಡೇಂಜರ್ ಎಂದು ಹರಿಹಾಯ್ದಿದ್ದಾರೆ.ಮಹಿಳೆಯರ ಮಾಂಗಲ್ಯದ ಬಗ್ಗೆ ಮೋದಿಯವರು ಮಾತನಾಡುತ್ತಾರೆ. ಹುಬ್ಬಳ್ಳಿಯ ಹೆಣ್ಣುಮಗಳ ಹತ್ಯೆಗೆ ಅಬ್ಬರಿಸಿದಷ್ಟೇ, ಹಾಸನದ ಹೆಣ್ಣುಮಕ್ಕಳಿಗಾದ ಅನ್ಯಾಯಗಳ ವಿರುದ್ಧ ಅರ್ಭಟಿಸಬೇಕಾಗಿತ್ತಲ್ಲ.ಆದರೆ ಮೋದಿಯವರು ಪ್ರಜ್ವಲ್ ರೇವಣ್ಣ ಅವರಿಗೆ ಆಶೀರ್ವದಿಸಿ ಎಂದು ಕೇಳಿದ್ದರು. ಆ ಸಂಸದರ ಅಶ್ಲೀಲದ ಕುರಿತು ಬಿಜೆಪಿ ಹೈಕಮಾಂಡ್ ಗೆ ಮೊದಲೇ ಮಾಹಿತಿ ತಲುಪಿತ್ತು ಎಂದು ಮೇಲೆ ಅವರ ಪರವಾಗಿ ಮತ ಕೇಳಲು ಅಸಹ್ಯ ಎನಿಸಲಿಲ್ಲವೇ ಎಂದು ಬಿಜೆಪಿ ನಡೆಯನ್ನು ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : ಪ್ರಜ್ವಲ್ ವಿರುದ್ಧ ತಕ್ಷಣ ಏಕೆ FIR ಹಾಕಲಿಲ್ಲ? ಕೇಂದ್ರ ಸಚಿವ ಪ್ರಲ್ಹಾದ ಜೋಶಿ 

ದುಷ್ಕೃತ್ಯಗಳನ್ನ ನಡೆಸಿದ ದಾರುಳನನ್ನ ಜೊತೆಗಿಟ್ಟುಕೊಂಡವರು ಡೇಂಜರ್. ಕನ್ಯೆಯರ ಕಣ್ಣೀರಿಗೆ ಬೆಲೆ ಕೊಡದ ಕಮಂಗಿಗಳಿಗೆ ಕಮಲ ದಳ ರಾಜಕೀಯ ದಾಳವಾಗದಿರಲಿ ಎಂದು ತಮ್ಮ ಪೊಸ್ಟ್ ನಲ್ಲಿ ಸಚಿವ ದಿನೇಶ್ ಗುಂಡೂರಾವ್ ವಿರೋಧ ಪಕ್ಷಗಳಿಗೆ ಸಲಹೆ ನೀಡಿದ್ದಾರೆ.‌

ಇದನ್ನೂ ಓದಿ :  ಮುಂದಿನ 4 ದಿನ ರಾಜ್ಯದ ಈ ಭಾಗಗಲ್ಲಿ ಉಷ್ಣ ಅಲೆಯ ಎಚ್ಚರಿಕೆ!ಹವಾಮಾನ ಇಲಾಖೆ ನೀಡಿದೆ ಅಲರ್ಟ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News