ಕೈ ಸರ್ಕಾರಕ್ಕೆ ಒಂದು ವರ್ಷ : ಡಿನ್ನರ್ ಪಾರ್ಟಿ ಆಯೋಜನೆ; ಯಾವೆಲ್ಲಾ ವಿಷಯ ಟೇಬಲ್ ಮೇಲೆ?

ಶಿಕ್ಷಕರ, ಪದವೀಧರ ಕ್ಷೇತ್ರ ಚುನಾವಣೆ ಹಿನ್ನೆಲೆ, ಅಭ್ಯರ್ಥಿಗಳನ್ನ ಗೆಲ್ಲಿಸಿಕೊಂಡು ಬರುವಂತೆ ಸಚಿವರಿಗೆ ಜವಾಬ್ದಾರಿ ನೀಡಲಾಗುವುದು. ಬಿಬಿಎಂಪಿ, ಸ್ಥಳೀಯ ಚುನಾವಣೆ ತಯಾರಿ ಕುರಿತು ಡಿನ್ನರ್ ಪಾರ್ಟಿಯಲ್ಲಿ ಚರ್ಚೆಯಾಗಲಿದೆ ಎಂದು ಹೇಳಲಾಗುತ್ತಿದೆ. 

Written by - Prashobh Devanahalli | Last Updated : May 22, 2024, 12:33 PM IST
  • ಒಂದು ವರ್ಷದ ಅಧಿಕಾರ ಪೂರ್ಣ ಮಾಡಿರುವ ಕಾಂಗ್ರೆಸ್, ಲೋಕಸಭೆ ಚುನಾವಣೆ ಎದುರಿಸಿದೆ.
  • ಚುನಾವಣೆಯಲ್ಲಿ ಯಾವ ಹಂತಕ್ಕೆ ಕೆಲಸ ಆಗಿದೆ ಎನ್ನುವ ಚರ್ಚೆ ಜೊತೆಗೆ ಮುಂಬರುವ ಶಿಕ್ಷಕರ, ಪದವೀಧರ ಕ್ಷೇತ್ರ ಚುನಾವಣೆ ಸಂಬಂಧಿಸಿದಂತೆ ಕೆಲ ಚರ್ಚೆ ಆಗಲಿದೆ.
  • ಹಾಗಾದ್ರೆ ಇಂದಿನ ಚರ್ಚೆಯಲ್ಲಿ ಯಾವೆಲ್ಲಾ ವಿಷಯ ಬರಲಿದೆ ಇಲ್ಲಿದೆ....
ಕೈ ಸರ್ಕಾರಕ್ಕೆ ಒಂದು ವರ್ಷ : ಡಿನ್ನರ್ ಪಾರ್ಟಿ ಆಯೋಜನೆ; ಯಾವೆಲ್ಲಾ ವಿಷಯ ಟೇಬಲ್ ಮೇಲೆ? title=

ಬೆಂಗಳೂರು: ಸರ್ಕಾರಕ್ಕೆ ಒಂದು ವರ್ಷ ಪೂರ್ಣ ಹಿನ್ನೆಲೆ, ಸಂಸದ ಡಿಕೆ ಸುರೇಶ್ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವರಿಗೆ ಡಿಸಿಎಂ ಡಿಕೆ ಶಿವಕುಮಾರ್ ಡಿನ್ನರ್ ಪಾರ್ಟಿ (Dinner party) ಆಯೋಜನೆ ಮಾಡಿದ್ದಾರೆ. ಸಂಜೆ 7 ಗಂಟೆಗೆ ನಡೆಯುವ ಭೋಜನಕೂಟದಲ್ಲಿ ಊಟದ ಜೊತೆ ಬಹಳಷ್ಟು ರಾಜಕೀಯ ಚರ್ಚೆ ನಡೆಯಲಿದೆ ಎನ್ನಲಾಗಿದೆ. 

ಒಂದು ವರ್ಷದ ಅಧಿಕಾರ ಪೂರ್ಣ ಮಾಡಿರುವ ಕಾಂಗ್ರೆಸ್, ಲೋಕಸಭೆ ಚುನಾವಣೆ (Lok Sabha Election) ಎದುರಿಸಿದೆ. ಚುನಾವಣೆಯಲ್ಲಿ ಯಾವ ಹಂತಕ್ಕೆ ಕೆಲಸ ಆಗಿದೆ ಎನ್ನುವ ಚರ್ಚೆ ಜೊತೆಗೆ ಮುಂಬರುವ ಶಿಕ್ಷಕರ, ಪದವೀಧರ ಕ್ಷೇತ್ರ ಚುನಾವಣೆ ಸಂಬಂಧಿಸಿದಂತೆ ಕೆಲ ಚರ್ಚೆ ಆಗಲಿದೆ. ಹಾಗಾದ್ರೆ ಇಂದಿನ ಚರ್ಚೆಯಲ್ಲಿ ಯಾವೆಲ್ಲಾ ವಿಷಯ ಬರಲಿದೆ ಇಲ್ಲಿದೆ....

ಇದನ್ನೂ ಓದಿ- ಬದಲಾಗಿದೆ ಸಮಯ.. ಇದು RCBಯ ಹೊಸ ಅಧ್ಯಾಯ: ಶಹಬ್ಬಾಶ್ ಹುಡುಗ್ರಾ ಎಂದ ಡಿ.ಕೆ. ಶಿವಕುಮಾರ್‌

ಶಿಕ್ಷಕರ, ಪದವೀಧರ ಕ್ಷೇತ್ರ ಚುನಾವಣೆ ಹಿನ್ನೆಲೆ, ಅಭ್ಯರ್ಥಿಗಳನ್ನ ಗೆಲ್ಲಿಸಿಕೊಂಡು ಬರುವಂತೆ ಸಚಿವರಿಗೆ ಜವಾಬ್ದಾರಿ ನೀಡಲಾಗುವುದು. ಬಿಬಿಎಂಪಿ (BBMP), ಸ್ಥಳೀಯ ಚುನಾವಣೆ (Local Election) ತಯಾರಿ ಕುರಿತು ಚರ್ಚೆ ಬರಲಿದೆ. ಜೊತೆಗೆ ಇನ್ನು ಈಗಷ್ಟೇ ಕರ್ನಾಟಕದಲ್ಲಿ ಮತದಾನ ಆಗಿರುವ ಲೋಕಸಭೆ ಚುನಾವಣೆ ಬಗ್ಗೆ ಬೂತ್ ಮಟ್ಟದ ಲೆಕ್ಕಾಚಾರ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ ಕಾಂಗ್ರೆಸ್ ನಾಯಕರು. ಇದಲ್ಲದೆ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಚರ್ಚೆ ನಡೆಸಲಿದ್ದು ಮುಂದೆ ಯಾವ ನಡೆ ಅನುಸರಿಸಬೇಕೆಂಬ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ.

ಇದನ್ನೂ ಓದಿ- ದಿಕ್ಕಿಲ್ಲದ ಹಡಗಿನಂತಾದ ಪ್ರಾಥಮಿಕ & ಪ್ರೌಢ ಶಿಕ್ಷಣ: ರಾಜ್ಯ ಸರ್ಕಾರದ ವಿರುದ್ಧ ವಿಜಯೇಂದ್ರ ಕಿಡಿ

ಸಚಿವರಿಗೇಕೆ ಡಿಕೆಶಿಯಿಂದ ಔತಣಕೂಟ ಆಯೋಜನೆ?
ಕೆಪಿಸಿಸಿ ಅಧ್ಯಕ್ಷದ (KPCC President) ಬದಲಾವಣೆ ಕುರಿತು ಸುಳಿವು ನೀಡಿದ್ದ ಡಿಕೆಶಿ, ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆಶಿ ಮುಂದುವರೆಯುತ್ತಾರಾ, ಕೆಳಗಿಳೀತಾರಾ ಎನ್ನುವ ಚರ್ಚೆ ಜೋರಾಗಿದೆ. ಇದರ ಜೊತೆಗೆ ಸಿಎಂ ಗಾದಿ ಮೇಲೆ ಕಣ್ಣಿಟ್ಟಿರುವ ಡಿಸಿಎಂ ಡಿಕೆ ಶಿವಕುಮಾರ್ ಅಧಿಕಾರ ಹಂಚಿಕೆ ಬಗ್ಗೆ ಮಾತುಕತೆ ನಡೆಸುತ್ತಾರಾ? ಎಂಬ ಪ್ರಶ್ನೆ ಮೂಡಿದೆ. ಹೀಗಾಗಿ ಸಚಿವರನ್ನ ವಿಶ್ವಾಸಕ್ಕೆ ಪಡೆಯಲು ಮುಂದಾಗಿರುವ ಡಿಸಿಎಂ ಡಿಕೆಶಿ ಔತಣಕೂಟ ಆಯೋಜನೆ ಮಾಡಿದ್ದಾರೆ ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News