ಒಂದೇ ಒಂದು ಪಾನ್ ಅಲ್ಲಾಡಿಸಲಿ ನೋಡೋಣ: ಬಿಜೆಪಿಗೆ ಡಿಕೆಶಿ ಸವಾಲು

ರಾಜಕೀಯ ಚೆಸ್ ಆಟವಿದ್ದಂತೆ. ಬಿಜೆಪಿಯವರು ಒಂದೇ ಒಂದು ಪಾನ್ ಜರುಗಿಸಲಿ ನೋಡೋಣ. ಆಮೇಲೆ ಎಂಥ ನಡೆ ನಡೆಸಬೇಕು ಅನ್ನೋದನ್ನು ನಾವು ನಿರ್ಧರಿಸುತ್ತೇವೆ.

Updated: Sep 12, 2018 , 04:44 PM IST
ಒಂದೇ ಒಂದು ಪಾನ್ ಅಲ್ಲಾಡಿಸಲಿ ನೋಡೋಣ: ಬಿಜೆಪಿಗೆ ಡಿಕೆಶಿ ಸವಾಲು
File image

ಬೆಂಗಳೂರು: ಕಳೆದೆರಡು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ಆಪರೇಷನ್ ಕಮಲ ಮತ್ತೆ ಸದ್ದು ಮಾಡುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಡಿ.ಕೆ. ಶಿವಕುಮಾರ್, 'ಒಂದೇ ಒಂದು ಪಾನ್ ಅಲ್ಲಾಡಿಸಲಿ ನೋಡೋಣ' ಎಂದು ಬಿಜೆಪಿಗೆ ಸವಾಲೆಸೆದಿದ್ದಾರೆ.

ರಾಜಕೀಯ ಚೆಸ್ ಆಟವಿದ್ದಂತೆ. ಬಿಜೆಪಿಯವರು ಒಂದೇ ಒಂದು ಪಾನ್ ಜರುಗಿಸಲಿ ನೋಡೋಣ. ಆಮೇಲೆ ಎಂಥ ನಡೆ ನಡೆಸಬೇಕು ಅನ್ನೋದನ್ನು ನಾವು ನಿರ್ಧರಿಸುತ್ತೇವೆ ಎಂದಿರುವ ಡಿಕೆಶಿ, 'ರಾಜಕೀಯ ಅಂದ್ರೆ ಹಾಗೇನೆ. ಒಂದು ಸ್ಥಾನ ಖಾಲಿಯಾದರೂ ಆ ಸ್ಥಾನಕ್ಕೆ ಬಂದು ಕೂರಲು ಮತ್ತೊಬ್ಬರು ರೆಡಿಯಾಗಿರುತ್ತಾರೆ. ಸರ್ಕಾರ ಬೀಳುವ ಯಾವ ಭಯವೂ ಇಲ್ಲ' ಎಂದಿದ್ದಾರೆ.

ಕಾಂಗ್ರೆಸ್ಸಿನ ಆಪದ್ಬಾಂಧವ ಎಂದೇ ಹೆಸರಾದ ಡಿ.ಕೆ. ಶಿವಕುಮಾರ್, ನಮಗೂ ರಾಜಕಾರಣ ಮಾಡಲು ಗೊತ್ತಿದೆ. ಚೆಸ್‌ ಗೇಮ್‌ ಆಡುತ್ತೇವೆ. ಅವರು ಒಬ್ಬ ನಮ್ಮ ಶಾಸಕರನ್ನು ಮುಟ್ಟಲಿ,ನಾನು ಚೆಕ್‌ ಕೊಡುತ್ತೇನೆ ಎನ್ನುವ ಮೂಲಕ ಅಖಾಡಕ್ಕಿಳಿದಿದ್ದು, ರಾಜ್ಯ ರಾಜಕಾರಣಕ್ಕೆ ಹೊಸ ಹುರುಪು ಬಂದಂತಾಗಿದೆ.