ಅಗ್ನಿಶಾಮಕ ಇಲಾಖೆ: 1567 ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯು ಅಗ್ನಿಶಾಮಕ ಸಿಬ್ಬಂದಿಯ 1567 ವಿವಿಧ ವೃಂದಗಳ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

Last Updated : Jun 20, 2020, 08:20 PM IST
ಅಗ್ನಿಶಾಮಕ ಇಲಾಖೆ: 1567 ಹುದ್ದೆಗಳಿಗೆ ಅರ್ಜಿ ಆಹ್ವಾನ title=
Photo Courtsey : facebook

ಗದಗ : ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯು ಅಗ್ನಿಶಾಮಕ ಸಿಬ್ಬಂದಿಯ 1567 ವಿವಿಧ ವೃಂದಗಳ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಅಗ್ನಿಶಾಮಕ ಠಾಣಾಧಿಕಾರಿಗಳ 36 ಹುದ್ದೆಗಳು, ಅಗ್ನಿಶಾಮಕ ಚಾಲಕರ 227 ಹುದ್ದೆಗಳು, ಚಾಲಕ ತಂತ್ರಜ್ಞರ 82 ಹುದ್ದೆಗಳು ಹಾಗೂ ಅಗ್ನಿಶಾಮಕರ 1222 ಹುದ್ದೆಗಳಿಗೆ ಈ ನೇಮಕಾತಿ ಒಳಗೊಂಡಿದೆ.

ಅಂತರ್ಜಾಲ ತಾಣ www.ksp.gov.in ಲಾಗ್‍ಇನ್ ಆಗಿ ಜೂನ್ 22 ಆನ್‍ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.

ಅರ್ಜಿಗಳನ್ನು ಸಲ್ಲಿಸಲು ಜುಲೈ 20 ಕೊನೆಯ ದಿನಾಂಕವಾಗಿದೆ.

ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಗೆ ಸೇರ್ಪಡೆಯಾಗಿ ಅಮೂಲ್ಯ ಜೀವಗಳನ್ನು ರಕ್ಷಿಸಲು ಇದೊಂದು ಸದಾವಕಾಶವಾಗಿದೆ ಎಂದು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಮಹಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Trending News