S Shadakshari : ಪ್ರತಿ ಶನಿವಾರ ರಾಜ್ಯ ಸರ್ಕಾರಿ ನೌಕರರಿಗೆ ರಜೆ ಸಿಗುತ್ತಾ..?

ಕೇಂದ್ರ ಸರ್ಕಾರ ನೌಕರರದ್ದು ಅಯ್ತು, ಇದೀಗ ರಾಜ್ಯ ಸರ್ಕಾರಿ ನೌಕರರ ಸರದಿ ಶುರುವಾಗಿದೆ. ವೇತನ ಹೆಚ್ಚಳವಾಗುತ್ತಿದ್ದಂತೆ, ಶನಿವಾರ ರಜೆ ನೀಡುವಂತೆ 7ನೇ ವೇತನ ಆಯೋಗ ಸಮಿತಿಗೆ ರಾಜ್ಯ ಸರ್ಕಾರಿ ನೌಕರರ ಸಂಘ ಬೇಡಿಕೆ ಸಲ್ಲಿಸಿದೆ.

Written by - Channabasava A Kashinakunti | Last Updated : Mar 8, 2023, 10:43 AM IST
  • ಕೇಂದ್ರ ಸರ್ಕಾರ ನೌಕರರದ್ದು ಅಯ್ತು..
  • ರಾಜ್ಯ ಸರ್ಕಾರಿ ನೌಕರರ ಸರದಿ ಶುರುವಾಗಿದೆ
  • ಶನಿವಾರ ರಜೆ ಪ್ರಯೋಜನವೇನು..?
 S Shadakshari : ಪ್ರತಿ ಶನಿವಾರ ರಾಜ್ಯ ಸರ್ಕಾರಿ ನೌಕರರಿಗೆ ರಜೆ ಸಿಗುತ್ತಾ..? title=

ಬೆಂಗಳೂರು : ಕೇಂದ್ರ ಸರ್ಕಾರ ನೌಕರರದ್ದು ಅಯ್ತು, ಇದೀಗ ರಾಜ್ಯ ಸರ್ಕಾರಿ ನೌಕರರ ಸರದಿ ಶುರುವಾಗಿದೆ. ವೇತನ ಹೆಚ್ಚಳವಾಗುತ್ತಿದ್ದಂತೆ, ಶನಿವಾರ ರಜೆ ನೀಡುವಂತೆ 7ನೇ ವೇತನ ಆಯೋಗ ಸಮಿತಿಗೆ ರಾಜ್ಯ ಸರ್ಕಾರಿ ನೌಕರರ ಸಂಘ ಬೇಡಿಕೆ ಸಲ್ಲಿಸಿದೆ.

ಇನ್ನು ಈ ಬಗ್ಗೆ ಮಾಹಿತಿ ನೀಡಿದ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್ ಷಡಕ್ಷರಿ, ಪ್ರತೀ ಶನಿವಾರ ರಜೆ ನೀಡಿ, ಅದರ ಬದಲು ನಾವು ಪ್ರತಿ ದಿನ ಅರ್ಧ ಗಂಟೆ ಮುಂಚಿತ ಹಾಗೂ ಅರ್ಧ ಗಂಟೆ ತಡವಾಗಿ ಮಾಡಲು ಒಪ್ಪಿಗೆ ಇದೆ. ಶನಿವಾರ ಬದಲಾಗಿ ಪ್ರತಿದಿನ ಬೆಳಿಗ್ಗೆ 9:30 ರಿಂದ ಸಂಜೆ 6ರ ತನಕ ಕೆಲಸ ಮಾಡಲು ಸಮಯ ನಿಗದಿ ಪಡಿಸಲು ಬೇಡಿಕೆ ವ್ಯಕ್ತಪಡಿಸಿದ್ದಾರೆ. ಈ ಮೊದಲು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5:30 ರ ತನಕ ಕೆಲಸ ನೌಕರರ ಕೆಲಸ ನಿಗದಿಯಾಗಿತ್ತು ಎಂದರು.

ಇದನ್ನೂ ಓದಿ : ಮಹಿಳಾ ದಿನಾಚರಣೆಗೆ ಬಿಎಂಟಿಸಿ ಗುಡ್‌ನ್ಯೂಸ್‌

ಶನಿವಾರ ರಜೆ ಪ್ರಯೋಜನವೇನು..?

ಇನ್ನು ಮುಂದುವರೆದು ಮಾತನಾಡಿದ ಅಧ್ಯಕ್ಷ ಷಡಕ್ಷರಿ, ಐಟಿ ಕಂಪನಿಗಳ ರೀತಿ ಶನಿವಾರ ಭಾನುವಾರ ರಜೆ ನೀಡಿ. ಇದರಿಂದ, ಸಾರಿಗೆ, ವಿದ್ಯುತ್, ಆರ್ಥಿಕ, ಇಂಧನ ಮಿತವ್ಯಯವಾಗುವುದಿಲ್ಲ. ನಗರ ಸಂಚಾರದಲ್ಲಿ ಟ್ರಾಫಿಕ್ ಸಮಸ್ಯೆ ಗೆ ಕಡಿವಾಣ ಬೀಳಲಿದೆ. ಪ್ರವಾಸೋದ್ಯಮ ಅಭಿವೃದ್ಧಿಗೂ ಪೂರಕವಾಗಲಿದೆ. ಹೆಚ್ಚಿನ ಕಾರ್ಯದ ಒತ್ತಡ, ಮಾನಸಿಕ ಖಿನ್ನತೆ ಉಂಟಾಗುತ್ತದೆ. ಇದರಿಂದಾಗಿ ಪಾರಾಗಲು 5 ದಿನ ಕ್ರೀಯಶೀಲರಾಗಿ ಕಾರ್ಯನಿರ್ವಹಿಸಲು ಅನುಕೂಲವಾಗಲಿದೆ. ಅದಕ್ಕೆ ಈ ಬಗ್ಗೆ 7 ವೇತನ ಆಯೋಗದ ಸಮಿತಿಗೆ ಶನಿವಾರ ರಜೆ ಕುರಿತು ಬೇಡಿಕೆ ಸಲ್ಲಿಸಿದ್ದೇವೆ. ಕೇಂದ್ರ ಸರ್ಕಾರ ನೌಕರರ ರೀತಿ ನಮಗೂ ರಜೆ ನೀಡಲಿ. ಇದರಿಂದ ಸರ್ಕಾರಕ್ಕೆ ಅನುಕೂಲ ಆಗುತ್ತೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. 

ಇದನ್ನೂ ಓದಿ : ಕಾಂಗ್ರೇಸ್‌ನ ʼಕರ್ನಾಟಕ ಬಂದ್‌ʼ ನಾಟಕ ಯಶಸ್ವಿಯಾಗುವುದಿಲ್ಲ; ಸಿಎಂ ಬೊಮ್ಮಾಯಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News