ನಾನು ದೈವದಲ್ಲಿ ನಂಬಿಕೆ ಇಟ್ಟವನು, ಈಶ್ವರ, ಅಲ್ಲಾ ಇಬ್ಬರೂ ಒಂದೇ-ಹೆಚ್ದಿಡಿ

ನನಗೆ ಮೋಸ ಮಾಡಿದ್ರೆ , ನಿಮಗೆ ದೇವರು ಮೋಸ ಮಾಡ್ತಾನೆ- ಅಲ್ತಾಫ್ ಖಾನ್

Last Updated : Apr 2, 2018, 03:27 PM IST
ನಾನು ದೈವದಲ್ಲಿ ನಂಬಿಕೆ ಇಟ್ಟವನು, ಈಶ್ವರ, ಅಲ್ಲಾ ಇಬ್ಬರೂ ಒಂದೇ-ಹೆಚ್ದಿಡಿ title=

ಬೆಂಗಳೂರು: ಜೆಪಿ ಭವನದಲ್ಲಿ ಹಲವಾರು ಸಭೆ ನಡೆಸಿದ್ದೇವೆ, ಆದರೆ ಇದೊಂದು ವಿಶೇಷ ಸಂಧರ್ಭ. ಈ ಪಕ್ಷದಿಂದ ಬೆಳೆದು ಇಲ್ಲಿಂದ ಹೊರಹೋದ ಅನೇಕ ಸ್ನೇಹಿತರಿದ್ದಾರೆ. ಕೆಲವರು ಮುಖ್ಯಮಂತ್ರಿ ಕೂಡಾ ಆಗಿದ್ದಾರೆ. ನಮ್ಮ ಪಕ್ಷ ಅವರನ್ನು ಉಪಮುಖ್ಯಮಂತ್ರಿ ಕೂಡಾ ಮಾಡಿತ್ತು . ಆದರೆ ಅವರಿಗೆ ತೃಪ್ತಿ ಆಗಲಿಲ್ಲ. ಈಗ ಬೇರೆ ಪಕ್ಷ ಕ್ಕೆ ಹೋಗಿ ಮುಖ್ಯಮಂತ್ರಿ ಆಗಿದ್ದಾರೆ. ಈಗಲೂ ಜೆಡಿಎಸ್ ಅನ್ನು ಮುಗಿಸಲು ಅವರು ಕಾಯುತ್ತಿದ್ದಾರೆ ಅವರಿಗೆ ಏಳು ಜನ ಮಾಜಿ ಶಾಸಕರು ಕೈ ಜೋಡಿಸಿದ್ದಾರೆ ಎಂದು ಗುಡುಗಿದ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ, ಇದೆಲ್ಲವನ್ನೂ ಈಗ ಮಾತನಾಡುವುದು ಬೇಡ, ನಾನು ದೈವದಲ್ಲಿ ನಂಬಿಕೆ ಇಟ್ಟವನು. ಈಶ್ವರ, ಅಲ್ಲಾ ಇಬ್ಬರೂ ಒಂದೇ ಎಂದು ತಿಳಿಸಿದರು.

ನಗರದ ಜೆಪಿ ಭವನದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡ, ನಾವು ಎಲ್ಲಿಂದ ಬಂದಿದ್ದೇವೆ, ಯಾರು ನಮ್ಮನ್ನು ಬೆಳೆಸಿದ್ದಾರೆ ಅನ್ನೊ ಕನಿಷ್ಟ ಜ್ಞಾನ ಇರಬೇಕು. ಕಳೆದ ನಾಲ್ಕು ವರ್ಷಗಳಿಂದ ನಮ್ಮ ವಿರುದ್ಧ ಅನೇಕ ಟೀಕೆ ಮಾಡಿದ್ದಾರೆ. ಯಾರೆಲ್ಲ ನಮ್ಮ ವಿರುದ್ದ ಮಾತನಾಡುತ್ತಿದ್ದಾರೋ ಅವರ  ಹೆಸರೂ ನಾನು ಹೇಳಲು ಹೋಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಮೀರ್ ಅಹಮ್ಮದ್ ಇಬ್ಬರ ವಿರುದ್ದವೂ ಹೆಸರು ಹೇಳದೆಯೇ ಹರಿಹಾಯ್ದರು.

ಬೆಂಗಳೂರಿನ ಚಾಮರಾಜಪೇಟೆಯ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಅಲ್ತಾಫ್ ಖಾನ್ ಜೆಡಿಎಸ್ ಸೇರ್ಪಡೆ ಬಗ್ಗೆ ಮಾತನಾಡಿದ ಹೆಚ್ಡಿಡಿ,  ಇವತ್ತು ಸೋಮವಾರ ಬೆಳಗ್ಗೆ 10:15ಕ್ಕೆ ಟೈಂ ನೋಡೇ ಅಲ್ತಾಫ್  ಕೈಗೆ ಬಾವುಟ ಕೊಟ್ಟಿದ್ದೇನೆ. ನನಗೆ ಈಶ್ವರನ ಮೇಲೆ ನಂಬಿಕೆ ಇದೆ. ಈಶ್ವರ ಅಲ್ಲಾ ತೇರೆನಾಮ್...  ನೋಡಿ ಆತ ಎಷ್ಟು ಕೆಲಸ ಮಾಡ್ತಾರೆ ಅಂತಾ ಇವತ್ತಿಂದ ಈ ಪಕ್ಷ ಅಲ್ತಾಫ್ ಅವರದ್ದು ಎಂದು ತಿಳಿಸಿದರು.

ಅಲ್ತಾಫ್ ಗೆಲ್ಲುವುದರಲ್ಲಿ ಸಂಶಯವಿಲ್ಲ
ಚಾಮರಾಜಪೇಟೆ ಕಾಂಪೋಷಿಶನ್ ಏನು ಅಂತ ಗೊತ್ತಿದೆ. ಅಲ್ತಾಫ್ ಈ ಚುನಾವಣೆಯಲ್ಲಿ ಗೆಲ್ಲುವುದರಲ್ಲಿ ನನಗೆ ಯಾವುದೇ ಸಂಶಯವಿಲ್ಲ ಎಂದು ಅಲ್ತಾಫ್ ಖಾನ್ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.

ಅಲ್ತಾಫ್ ಮೇಲೆ ಕೆಲವರಿಗೆ ದ್ವೇಷ ಇದೆ. ಅವರ ಬೆಂಬಲಕ್ಕೆ ನಾನಿದ್ದೀನಿ, ಕುಮಾರಸ್ವಾಮಿ ಇದ್ದಾರೆ ಹಾಗೂ ಪಕ್ಷದ ಲಕ್ಷಾಂತರ ಕಾರ್ಯಕರ್ತರಿದ್ದಾರೆ ಮತ್ತು ಚಾಮರಾಜಪೇಟೆಯಾ ಜನರ ಆಶೀರ್ವಾದವಿದೆ ಎಂದ ದೇವೇಗೌಡರು, ಚಾಮರಾಜಪೇಟೆ ಯಲ್ಲಿ ಹೊಸ ಶಕೆ ಪ್ರಾರಂಭಾವಾಗಿದೆ. ನಾನು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ ಎಂದರು.

ನನಗೆ ಮೋಸ ಮಾಡಿದ್ರೆ , ನಿಮಗೆ ದೇವರು ಮೋಸ ಮಾಡ್ತಾನೆ- ಅಲ್ತಾಫ್ ಖಾನ್
ಮಾಜಿ ಪ್ರಧಾನಿ ಎಚ್ಡಿ.ದೇವೇಗೌಡ ಅವರ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆ ಆದ ನಂತರ ಮಾತನಾಡಿದ ಅಲ್ತಾಫ್ ಖಾನ್, ನನಗೆ ತುಂಬಾ ತೊಂದರೆ ಕೊಟ್ಟಿದ್ದಾರೆ. ನನಗೆ ಮೋಸ ಮಾಡಿದರೆ, ನಿಮಗೆ ದೇವರು ಮೋಸ ಮಾಡ್ತಾನೆ. ಚಾಮರಾಜಪೇಟೆ ಒಂದೇ ಅಲ್ಲ, ಎಲ್ಲಾ ಕ್ಷೇತ್ರಗಳಲ್ಲೂ ಓಡಾಡುತ್ತೇನೆ. ಜಮೀರ್ ಕೇವಲ ಮುಸ್ಲಿಂ ನಾಯಕ ಎಂದು ಹೇಳಿಕೊಳ್ಳುತ್ತಾರೆ. ಆದರೆ ನಾನು ಜನ ನಾಯಕ. ಸುಳ್ಳು ಹೇಳುವ ಜಮೀರ್ ಗೆ ದೇವರು ಪಾಠ ಕಲಿಸುತ್ತಾರೆ ಎಂದು ಜಮೀರ್ ಅಹಮ್ಮದ್ ವಿರುದ್ಧ ವಾಗ್ಧಾಳಿ ನಡೆಸಿದರು.

Trending News