ನರ್ಸ್, ಫಾರ್ಮಸಿಸ್ಟ್ ಹಾಗೂ ಲ್ಯಾಬ್ ಟೆಕ್ನಿಷಿಯನ್ ಸೇರಿ 49 ಹುದ್ದೆಗಳಿಗೆ ನೇರ ಸಂದರ್ಶನ

ಹಾವೇರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಶ್ರೂಶುಷಕರ 20 ಹುದ್ದೆ, ಫಾರ್ಮಸಿಸ್ಟ್-15 ಹುದ್ದೆ, ಪ್ರಯೋಗಶಾಲಾ ತಂತ್ರಜ್ಞರ 14 ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ಭರ್ತಿಮಾಡಿಕೊಳ್ಳಲು ನೇರ ಸಂದರ್ಶನಕ್ಕೆ ಆಗಸ್ಟ್ 03 ರಂದು ಆಹ್ವಾನಿಸಲಾಗಿದೆ.

Last Updated : Jul 29, 2020, 03:41 PM IST
ನರ್ಸ್, ಫಾರ್ಮಸಿಸ್ಟ್ ಹಾಗೂ ಲ್ಯಾಬ್ ಟೆಕ್ನಿಷಿಯನ್ ಸೇರಿ 49 ಹುದ್ದೆಗಳಿಗೆ ನೇರ ಸಂದರ್ಶನ title=
ಸಾಂದರ್ಭಿಕ ಚಿತ್ರ

ಬೆಂಗಳೂರು: ಹಾವೇರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಶ್ರೂಶುಷಕರ 20 ಹುದ್ದೆ, ಫಾರ್ಮಸಿಸ್ಟ್-15 ಹುದ್ದೆ, ಪ್ರಯೋಗಶಾಲಾ ತಂತ್ರಜ್ಞರ 14 ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ಭರ್ತಿಮಾಡಿಕೊಳ್ಳಲು ನೇರ ಸಂದರ್ಶನಕ್ಕೆ ಆಗಸ್ಟ್ 03 ರಂದು ಆಹ್ವಾನಿಸಲಾಗಿದೆ.

ಡಿಪ್ಲೋಮಾ ನರ್ಸಿಂಗ್ ಕೋರ್ಸ್ ಹೊಂದಿರುವ ಹಾಗೂ ಕರ್ನಾಟಕ ನರ್ಸಿಂಗ್ ಕೌನ್ಸಿಲ್‍ನಲ್ಲಿ ನೊಂದಾಯಿಸಿಕೊಂಡ ಅಭ್ಯರ್ಥಿಗಳಿಂದ ಶ್ರೂಶುಷಕರ ಹುದ್ದೆಯ ಸಂದರ್ಶನಕ್ಕೆ ಹಾಜರಾಗಬಹುದು. ಮಾಹೆಯಾನ 25 ಸಾವಿರ ರೂ. ವೇತನ ನೀಡಲಾಗುವುದು.

ಎಸ್.ಎಸ್.ಎಲ್. ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಮಾನ್ಯತೆಪಡೆದ ಸಂಸ್ಥೆಯಲ್ಲಿ ಡಿಪ್ಲೋಮಾ ಇನ್ ಫಾಮರ್ಸಿ ವಿದ್ಯಾರ್ಹತೆ ಹಾಗೂ ಕರ್ನಾಟಕ ಫಾರ್ಮಸಿ ಕೌನ್ಸಿನಲ್ ನೊಂದಾಯಿಸಿಕೊಂಡವರಿಗಾಗಿ ಫಾರ್ಮಸಿಸ್ಟ್ 15 ಹುದ್ದೆಗೆ ನೇರ ಸಂದರ್ಶನ ನಡೆಸಲಾಗುವುದು. ಆಯ್ಕೆಯಾದವರಿಗೆ ಮಾಹೆಯನಾ 20 ಸಾವಿರ ರೂ. ವೇತನ ನೀಡಲಾಗುವುದು.

ಎಸ್.ಎಸ್.ಎಲ್.ಸಿ ಹಾಗೂ ತತ್ಸಮಾನ ಪರೀಕ್ಷೆ ತೇರ್ಗಡೆಯಾಗಿ ಪ್ರಯೋಗಾಲಯ ತಂತ್ರಜ್ಞತೆಯಲ್ಲಿ ಎರಡು ವರ್ಷದ ಕರ್ನಾಟಕ ವೇಕೆಷನಲ್ ಶೈಕ್ಷಣಿಕ ಬೋರ್ಡ್‍ನಿಂದ ಡಿಪ್ಲೋಮಾ ಶೈಕ್ಷಣಿಕ ಅರ್ಹತೆ ಹೊಂದಿದ ಅಥವಾ ಪಿ.ಯು.ಸಿ. ವಿಜ್ಞಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಅಥವಾ ಕರ್ನಾಟಕ ಅರೇ ವೈದ್ಯಕೀಯ ಮಂಡಳಿಯ ನಡೆಸುವ ಎರಡು ವರ್ಷದ ಪ್ರಯೋಗಶಾಲಾ ತರಬೇತಿ ಹೊಂದಿರಬೇಕು. ಅಥವಾ ಕರ್ನಾಟಕ ಅರೇ ವೈದ್ಯಕೀಯ ಮಂಡಳಿಯ ನಡೆಸುವ ಮೂರು ವರ್ಷದ ಡಿಪ್ಲೋಮಾ ಶೈಕ್ಷಣಿಕ ಅರ್ಹತೆ ಹೊಂದಿದವರಿಗೆ ಪ್ರಯೋಗಶಾಲಾ ತಂತ್ರಜ್ಞರ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲಾಗುವುದು. 14 ಹುದ್ದೆಗಳು ಖಾಲಿ ಇದ್ದು ಮಾಹೆಯಾನ 20 ಸಾವಿರ ರೂ. ವೇತನ ನೀಡಲಾಗುವುದು.

ಮೇಲ್ಕಂಡ ಎಲ್ಲ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಠ 45 ವರ್ಷದೊಳರಗಿಬೇಕು. ದ್ವಿಪ್ರತಿಯಲ್ಲಿ ಶೈಕ್ಷಣಿಕ ದಾಖಲೆಗಳನ್ನು ಸಲ್ಲಿಸಬೇಕು. ಆರು ತಿಂಗಳ ಅವಧಿಗೆ ಮಾತ್ರ ನೇಮಕಾತಿ ನಡೆಯಲಿದೆ. ಎಲ್ಲ ಶೈಕ್ಷಣಿಕ ದಾಖಲೆಗಳೊಂದಿಗೆ ದಿನಾಂಕ 03-08-2020 ರ ಬೆಳಿಗ್ಗೆ 10-30 ಗಂಟೆಗೆ ಹಾವೇರಿ ನಗರದ ಪಿ.ಬಿ.ರಸ್ತೆಯಲ್ಲಿರುವ ತಾಲೂಕಾ ಆರೋಗ್ಯಾಧಿಕಾರಿಗಳ ಕಚೇರಿ ಆವರಣದಲ್ಲಿರುವ ತಾಲೂಕಾ ಆರೋಗ್ಯ ಭವನದಲ್ಲಿ ನಡೆಯುವ ನೇಮಕಾತಿಯ ನೇರ ಸಂದರ್ಶನಕ್ಕೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಯನ್ನು ದೂರವಾಣಿ 08375-249066 ಸಂಪರ್ಕಿಸಬಹುದು.

Trending News