HD Kumaraswamy: ಮಿಷನ್ 123 ಮರೆತಿದೆಯೇ ಜೆಡಿಎಸ್? ಅವಲಂಬಿ ರಾಜಕಾರಣಕ್ಕೆ ಮತ್ತೆ ಜೈ ಎನ್ನುತ್ತಾರ ಎಚ್ಡಿಕೆ?

ಕಳೆದ ವರ್ಷದ ಅಂತ್ಯದಲ್ಲಿ ಜೆಡಿಎಸ್ ಪಕ್ಷ "ಜನತಾ ಪರ್ವ" ಎರಡನೇ ಅಧ್ಯಯವನ್ನು ಪ್ರಾರಂಭಿಸಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ 123 ಸ್ಥಾನ ಗೆಲ್ಲುವ ಮೂಲಕ ಬಹುಮತದಿಂದ ಪಕ್ಷವನ್ನು ಅಧಿಕಾರಕ್ಕೆ ತರುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು. ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ( HD Devegowda) ಕೂಡ ಪಕ್ಷದ ಕಾರ್ಯಕರ್ತರನ್ನ ಉದ್ದೇಶಿಸಿ ಹಲವಾರು ಭಾಷಣ ಮಾಡುವ ಮೂಲಕ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬುವ ಕೆಲಸ ಮಾಡಿದ್ದರು. 

Edited by - Yashaswini V | Last Updated : Jan 27, 2022, 07:17 AM IST
  • ಕಳೆದ ವರ್ಷದ ಅಂತ್ಯದಲ್ಲಿ ಜೆಡಿಎಸ್ ಪಕ್ಷ "ಜನತಾ ಪರ್ವ" ಎರಡನೇ ಅಧ್ಯಯವನ್ನು ಪ್ರಾರಂಭಿಸಿದೆ
  • ಈ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ 123 ಸ್ಥಾನ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿತ್ತು
  • ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಕೂಡ ಪಕ್ಷದ ಕಾರ್ಯಕರ್ತರನ್ನ ಉದ್ದೇಶಿಸಿ ಹಲವಾರು ಭಾಷಣ ಮಾಡುವ ಮೂಲಕ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬುವ ಕೆಲಸ ಮಾಡಿದ್ದರು
HD Kumaraswamy: ಮಿಷನ್ 123 ಮರೆತಿದೆಯೇ ಜೆಡಿಎಸ್? ಅವಲಂಬಿ ರಾಜಕಾರಣಕ್ಕೆ ಮತ್ತೆ ಜೈ ಎನ್ನುತ್ತಾರ ಎಚ್ಡಿಕೆ? title=
Karnataka Assembly Elections

ಬೆಂಗಳೂರು: ಮುಂದಿನ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ  ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂಬ ವಿಶ್ವಾಸದಿಂದ ಜೆಡಿಎಸ್ ಪಕ್ಷ 'ಜನತಾ ಪರ್ವ' ಎಂಬ ಅಭೂತಪೂರ್ವ ಕಾರ್ಯಕ್ರಮವನ್ನು ಕೈಗೆತ್ತಿಕೊಂಡಿಟ್ಟು. ಆದರೆ, ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಬುಧವಾರ "2023ರಲ್ಲಿ ನಮ್ಮ ಶ್ರಮ ಏನು ಎಂದು ಎರಡು ಪಕ್ಷಗಳಿಗೆ ತಿಳಿಯಲಿದೆ" ಎಂದು ಹೇಳಿಕೆ ನೀಡಿದ್ದಾರೆ. ಹಾಗಾದ್ರೆ ಈ ಹೇಳಿಕೆ ಹಿಂದಿನ ಸತ್ಯ ಮತ್ತೆ ಅವಲಂಬಿ ರಾಜಕಾರಣ ಸರಿ ಎಂದು ಜೆಡಿಎಸ್ ಒಪ್ಪಿದ್ಯಾ? ಅಥವಾ ನಿಜವಾಗಲೂ 123 ಸ್ಥಾನ ಗೆಲ್ಲುವುದಕ್ಕೆ ಪಕ್ಷ ಕೆಲಸ ಮಾಡಲಿದೆಯೇ? ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.

ಕಳೆದ ವರ್ಷದ ಅಂತ್ಯದಲ್ಲಿ ಜೆಡಿಎಸ್ ಪಕ್ಷ "ಜನತಾ ಪರ್ವ" ಎರಡನೇ ಅಧ್ಯಯವನ್ನು ಪ್ರಾರಂಭಿಸಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ 123 ಸ್ಥಾನ ಗೆಲ್ಲುವ ಮೂಲಕ ಬಹುಮತದಿಂದ ಪಕ್ಷವನ್ನು ಅಧಿಕಾರಕ್ಕೆ ತರುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು. ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ( HD Devegowda) ಕೂಡ ಪಕ್ಷದ ಕಾರ್ಯಕರ್ತರನ್ನ ಉದ್ದೇಶಿಸಿ ಹಲವಾರು ಭಾಷಣ ಮಾಡುವ ಮೂಲಕ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬುವ ಕೆಲಸ ಮಾಡಿದ್ದರು. 

ಇದನ್ನೂ ಓದಿ- ಸಾಧಕನಿಗೆ ಒಲಿದ ಪದ್ಮಶ್ರೀ ಪ್ರಶಸ್ತಿ

ನಿನ್ನೆ ಜೆಡಿಎಸ್ ಕಚೇರಿಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಯವರು, 2023ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಶ್ರಮ ಎರಡು ಪಕ್ಷಗಳಿಗೆ ತಿಳಿಯಲಿದೆ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೆಡಿಎಜ್ ಬಿಟ್ಟ ಸಂದರ್ಭದಲ್ಲಿ ಪಕ್ಷಕ್ಕೆ 40 ಸ್ಥಾನ ಬಂದಿದ್ದವು, ಅವರಿದ್ದಾಗಲೂ ಅಷ್ಟೇ ಸ್ಥಾನ ಬಂದಿತ್ತು ಎಂಬ ಹೇಳಿಕೆ ನೀಡಿದ್ದಾರೆ. ಎಚ್ಡಿಕೆ ಅವರ ಈ ಹೇಳಿಕೆ ಹಿಂದಿನ ಮರ್ಮವೇನು ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿದ್ದು, ಜೆಡಿಎಸ್ ಪಕ್ಷ ಅವಲಂಬಿತ ರಾಜಕಾರಣಕ್ಕೆ ಮೊರೆ ಹೋಗಲಿದ್ಯ ಎಂಬ ಪ್ರಶ್ನೆ ಮತ್ತೆ ಉದ್ಭವಿಸಿದೆ. 

ಇದನ್ನೂ ಓದಿ- ಪುನೀತ್ ಗೆ ಸಿಗದ ಪದ್ಮಶ್ರೀ ಪ್ರಶಸ್ತಿ ; ಡಿಕೆಶಿ ಅಸಮಾಧಾನ

ಚುನಾವಣಾ ಹೊಸ್ತಿಲಲ್ಲಿ ಇರುವ ಸಂದರ್ಭದಲ್ಲಿ ಜೆಡಿಎಸ್ ಪಕ್ಷ ಇನ್ನೂ ನೂತನ ನಾಯಕರ ಹುಡುಕಾಟದಲ್ಲೇ ಇದೆ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಸಲಹೆ ಮೇರೆಗೆ ಪಕ್ಷ ಯುವ ನಾಯಕರನ್ನ ಪಕ್ಷಕ್ಕೆ ಕರೆತಂದು ಹೊಸ ನಾಯಕರ ಪರಿಚಯ ಮಾಡಬೇಕು ಎಂಬ ಆಸೆಯನ್ನ ವ್ಯಕ್ತಪಡಿಸಿದೆ. ಆದಾಗ್ಯೂ, ನಿರೀಕ್ಷಿತ ಮಟ್ಟದಲ್ಲಿ ಪಕ್ಷಕ್ಕೆ ಯುವಕರ ಪದಾರ್ಪಣೆ ಆಗಿಲ್ಲ. ಏತನ್ಮಧ್ಯೆ, ಮತ್ತೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಗೆ ಮತ್ತೆ ಜೆಡಿಎಸ್ ಅವಲಂಬಿ ರಾಜಕಾರಣದ ಮೂಲಕ ಅಧಿಕಾರಕ್ಕೆ ಬರುವ ದಾರಿಯನ್ನು ಎದುರುನೋಡುತ್ತಿದೆಯೇ ಎಂಬ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News