JDS-BJP Alliance: ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ಅಧಿಕೃತ ಘೋಷಣೆ ಮಾಡಿದ ಬಿಜೆಪಿ ಹೈಕಮಾಂಡ್..!

JDS-BJP Alliance: ಕಳೆದ 15 ದಿನಗಳ ಹಿಂದೆ ದಳಪತಿಗಳು ಬಿಜೆಪಿ - ಜೆಡಿಎಸ್ ಮೈತ್ರಿಯನ್ನು ಘೋಷಣೆ ಮಾಡಿದ್ದರು. ಇದೀಗ ಈ ಮೈತ್ರಿಗೆ ಬಿಜೆಪಿ ಹೈಕಮಾಂಡ್ ನಾಯಕರು ಗ್ರೀನ್ ಸಿಗ್ನಲ್ ಕೊಟ್ಟಿದ್ದು ತೆನೆಹೊತ್ತ ಮಹಿಳೆ ಕಮಲವನ್ನು ಮುಡಿದಿದ್ದಾಳೆ. 

Written by - Savita M B | Last Updated : Sep 22, 2023, 08:02 PM IST
  • ಮೈತ್ರಿಯಿಂದ ಬಿಜೆಪಿ ಲಾಭದ ಲೆಕ್ಕಾಚಾರ
  • ಜೆಡಿಎಸ್ ಪಕ್ಷಕ್ಕೆ ಎದುರಾಗುವ ಸವಾಲುಗಳು
  • ಮೈತ್ರಿಯಿಂದ ಜೆಡಿಎಸ್ ಗೆ ಆಗುವ ಲಾಭಗಳು
JDS-BJP Alliance: ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ಅಧಿಕೃತ ಘೋಷಣೆ ಮಾಡಿದ ಬಿಜೆಪಿ ಹೈಕಮಾಂಡ್..! title=

BJP-JDS: ಮೈತ್ರಿ ವಿಚಾರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿದ ಮಾಜಿ ಸಿಎಂ ಕುಮಾರಸ್ವಾಮಿ ಮೈತ್ರಿ ಬಗ್ಗೆ ಚರ್ಚೆ ನಡೆಸಿದ್ದರು. ಈ ವೇಳೆ HDK ಗೆ ಪುತ್ರ ನಿಖಿಲ್ ಕುಮಾರಸ್ವಾಮಿ ಸಾಥ್ ನೀಡಿದ್ದರು. ಸುಮಾರು ಅರ್ಧ ಗಂಟೆಗಳ ಕಾಲ ನಡೆದ ಚರ್ಚೆಯಲ್ಲಿ ಮೈತ್ರಿ ಬಗ್ಗೆ ಹಲವು ವಿಚಾರಗಳನ್ನು ಉಭಯ ನಾಯಕರು ಚರ್ಚೆ ನಡೆಸಿದ್ದರು.

ಮೈತ್ರಿ ಗೆ ಗ್ರೀನ್ ಸಿಗ್ನಲ್ ಸಿಗ್ತಿದ್ದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ. ರಾಜ್ಯ ನಾಯಕರಾದ ಮಾಜಿ ಸಿಎಂ ಯಡಿಯೂರಪ್ಪ, ಬೊಮ್ಮಯಿ ಸೇರಿದಂತೆ ಹಲವು ನಾಯಕರು ಟ್ವೀಟ್ ಮಾಡಿ NDA ಮೈತ್ರಿಕೂಟಕ್ಕೆ ಜೆಡಿಎಸ್ ಅನ್ನು ಸ್ವಾಗತಿದ್ದಾರೆ. ಇನ್ನು ಈ ಬಗ್ಗೆ ಟ್ವೀಟ್ ಮಾಡಿದ ರಾಜ್ಯ ಬಿಜೆಪಿ ಘಟಕ ನರೇಂದ್ರ ಮೋದಿಯವರ ನಾಯಕತ್ವ ಮೆಚ್ಚಿದ್ದಕ್ಕೆ ಸ್ವಾಗತ ಎಂದು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. 

ದೆಹಲಿಯಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ ಮೈತ್ರಿ ಬಗ್ಗೆ ಮೊದಲ ಹಂತದ ಮಾತುಕತೆ ಮುಗಿದಿದ್ದು ನಾವು NDA ಒಕ್ಕೂಟಕ್ಕೆ ಸೇರ್ತಿದ್ದೇವೆ. ಸೀಟು ಹಂಚಿಕೆ ಬಗ್ಗೆ ಮುಂದಿನ‌ ದಿನಗಳಲ್ಲಿ ಹಂತ- ಹಂತವಾಗಿ ಚರ್ಚೆ ನಡೆಸುತ್ತೇವೆ ಎಲ್ಲವೂ ಒಳ್ಳೆಯದಾಗುತ್ತೆ ಎಂದಿದ್ದಾರೆ. 

ಮೈತ್ರಿ ವಿಚಾರವಾಗಿ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮೈತ್ರಿಗೆ ಸ್ವಾಗತ ಕೋರಿದ ಮಾಜಿ ಸಚಿವ ಅಶ್ವಥ್ ನಾರಾಯಣ ಜೆಡಿಎಸ್ NDA ಒಕ್ಕೂಟ ಅಧಿಕೃತವಾಗಿ ಒಗ್ಗೂಡಿರೋದು ಸಂತೋಷದ ವಿಷಯ. 

ಅಧಿಕೃತವಾಗಿ ಜೆಡಿಎಸ್‌ ಪಕ್ಷವನ್ನ NDA ಒಕ್ಕೂಟಕ್ಕೆ ಸ್ವಾಗತ ಮಾಡ್ತೀವಿ. ಇದರಿಂದ 28 ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲೋದು ಖಚಿತವಾಗಿದೆ, ಮತ್ತೊಮ್ಮೆ ಮೋದಿಯವರನ್ನ ಪ್ರಧಾನಿ ಆಗಲು ಜೆಡಿಎಸ್‌ ಸಹಕಾರ ನೀಡಿದೆ. ಏನೇ ಅಸಮಾಧಾನ ಇದ್ರೂ ವಿಶ್ವಾಸ ಇಟ್ಟು ಒಗ್ಗಟ್ಟಾಗಿ ಇರಬೇಕು ಎಂದಿದ್ದಾರೆ...

ಸದ್ಯ ಸೀಟು ಹಂಚಿಕೆ ಬಗ್ಗೆ ಇನ್ನು ಚರ್ಚೆಗಳು ನಡೆಯುತ್ತಿದ್ದು ಜೆಡಿಎಸ್ 6 ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿದೆ. ಆದ್ರೆ ಬಿಜೆಪಿ 4 ಕ್ಷೇತ್ರ ಬಿಟ್ಟು ಕೊಡಲು ಒಪ್ಪಿಕೊಂಡಿದೆ, ಈ ಮಧ್ಯೆ ಬಿಜೆಪಿ- ಜೆಡಿಎಸ್ ನಲ್ಲಿ ಸೋಲು- ಗೆಲುವಿನ ಲೆಕ್ಕಾಚಾರ ಶುರುವಾಗಿದೆ. 

ಇದನ್ನೂ ಓದಿ-ತಮಿಳುನಾಡಿಗೆ ಕಾವೇರಿ ನೀರು ಬಿಡುವ ಆದೇಶ ಖಂಡಿಸಿ ಪ್ರತಿಭಟನೆ

ಜೆಡಿಎಸ್ ಪಕ್ಷಕ್ಕೆ ಎದುರಾಗುವ ಸವಾಲುಗಳು
ಸ್ಥಳೀಯವಾಗಿ ಸಮನ್ವಯದ ಕೊರತೆ ಎದುರಾದ್ರೆ ಕಮಲ‌ ದಳ ಎರಡಕ್ಕು ನಷ್ಟ
ಸಂಘಟನಾತ್ಮಕವಾಗಿ ಜೆಡಿಎಸ್ ಅಸ್ತಿತ್ವ ಕಳೆದುಕೊಳ್ಳುವ ಸಾಧ್ಯತೆ
ಅಲ್ಪಸಂಖ್ಯಾತ ಮತಗಳು ಜೆಡಿಎಸ್ ನಿಂದ ದೂರ ಸರಿದು ಕಾಂಗ್ರೆಸ್ ಗೆ ಹೋದ್ರೆ ದಳಕ್ಕೆ ದೊಡ್ಡ ಡ್ಯಾಮೇಜ್
ದಲಿತ ಮತಗಳು ದಳದಿಂದ ವಿಮುಖವಾದ್ರೆ ಕಾಂಗ್ರೆಸ್ ಗೆ ವರದಾನ

ಜೆಪಿಗಿರುವ ಸವಾಲುಗಳು…
5 ಕ್ಕು ಹೆಚ್ಚು ಸ್ಥಾನ ಬಿಟ್ಟು ಕೊಡಲು ಜೆಡಿಎಸ್ ಪಟ್ಟು
ಐದು ಕ್ಷೇತ್ರಗಳಲ್ಲಿ ಬಿಜೆಪಿ ಸಂಘಟನೆಗೆ ಹೊಡೆತ
ಬಿಜೆಪಿಯ ಅಪರೇಷನ್ ಸೌತ್ ಸಂಕಲ್ಪಕ್ಕೆ ಹಿನ್ನಡೆ
ಹಳೇ ಮೈಸೂರು ಭಾಗದಲ್ಲಿ ಏಕಾಂಗಿಯಾಗಿ ಪ್ರಾಬಲ್ಯ ಸಾದಿಸುವ ಅಮಿತ್ ಶಾ ಟಾರ್ಗೆಟ್ ಗೆ ಹಿನ್ನಡೆ 

ಮೈತ್ರಿಯಿಂದ ಜೆಡಿಎಸ್ ಗೆ ಆಗುವ ಲಾಭಗಳು….
ಹೀನಾಯವಾಗಿ ಸೋತಿರುವ ಜೆಡಿಎಸ್ ಗೆ ಮೈತ್ರಿಯಿಂದ ಶಕ್ತಿವರ್ಧನೆ
ಕಳೆದ ಬಾರಿ ಒಂದೇ ಸ್ಥಾನ ಗೆದ್ದಿದ್ದ ಜೆಡಿಎಸ್ ಗೆ ಮೂರರಿಂದ ನಾಲ್ಕು ಸ್ಥಾನ ಗೆಲ್ಲುವ ಶಕ್ತಿ
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಪಾಲುದಾರರಾಗುವ ಅವಕಾಶ
ಕಮಲ ದಳ ಒಂದಾದ್ರೆ ಅಪರೇಷನ್ ಹಸ್ತಕ್ಕೆ ಬ್ರೇಕ್ ..

ಮೈತ್ರಿಯಿಂದ ಬಿಜೆಪಿ ಲಾಭದ ಲೆಕ್ಕಾಚಾರ.. 
ಬಿಜೆಪಿ ಜೆಡಿಎಸ್ ಮೈತ್ರಿಯಿಂದ ಹಳೇ ಮೈಸೂರಿನ‌ 8 ಕ್ಷೇತ್ರಗಳಲ್ಲಿ‌ ಪ್ರಬಾವ ಬೀರುವ ಸಾಧ್ಯತೆ
ವಿಧಾನಸಭೆಯಲ್ಲಿ ಮುಖಭಂಗ ಅನುಭವಿಸಿದ್ದ ಬಿಜೆಪಿಗೆ ಮೈತ್ರಿಯಿಂದ ಆತ್ಮವಿಶ್ವಾಸ ವೃದ್ದಿ
ಕಾಂಗ್ರೆಸ್ ಗೆ ಪೈಪೋಟಿ ನೀಡುವಲ್ಲಿ ಹಿಂದುಳಿಯುತ್ತಿರುವ ಬಿಜೆಪಿಗೆ ಮೈತ್ರಿಯಿಂದ 20ಕ್ಕು ಹೆಚ್ಚು ಸ್ಥಾನ ಗೆಲ್ಲುವ ಸಾದ್ಯತೆ
ಕಮಲ ದಳ‌ ಮೈತ್ರಿಯಿಂದ ಅಪರೇಷನ್ ಹಸ್ತಕ್ಕೂ ತಾತ್ಕಾಲಿಕ ಬ್ರೇಕ್

ಒಟ್ಟಿನಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಇನ್ಮುಂದೆ ಕಾಂಗ್ರೆಸ್ ಗೆ ಸವಾಲಾಗೋದಂತು ಖಂಡಿತ ಎನ್ನಲಾಗುತ್ತಿದೆ. ಶತ್ರುಗಳಂತೆ ಹೋರಾಡ್ತಿದ್ದವರು ಇಂದು ಮಿತ್ರರಾಗಿದ್ದಾರೆ. ಕ್ಷೇತ್ರವಾರು ಲಾಭ- ನಷ್ಟಗಳನ್ನು ಲೆಕ್ಕಹಾಕಿ ಸೀಟು ಹಂಚಿಕೆಗೆ ನಿರ್ಧರಿಸಿದ್ದಾರೆ. ಈ ಮೈತ್ರಿಗೆ ಕಾಂಗ್ರೆಸ್ ಯಾವ ರೀತಿ ಟಕ್ಕರ್ ಕೊಡುತ್ತೆ ಎಂಬುದನ್ನ ಕಾದುನೋಡಬೇಕಿದೆ.

ಇದನ್ನೂ ಓದಿ-ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಸುಪ್ರೀಂಕೋರ್ಟ್ ಆದೇಶ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News