ಕಾಂಗ್ರೆಸ್ ಸೇರುವುದು, ಭಿನ್ನಮತ ಮುಗಿದ ಅಧ್ಯಾಯ-ಸಚಿವ ವಿ.ಸೋಮಣ್ಣ

ಚಾಮರಾಜನಗರ: "ನಾನು ಡೈರೆಕ್ಟ್ ರಾಜಕಾರಣಿ, ಅವೆಲ್ಲಾ ಮುಗಿದ ಅಧ್ಯಾಯ" ಎಂದು ಮಾ.27 ಕ್ಕೆ ಸೋಮಣ್ಣ ಕಾಂಗ್ರೆಸ್ ಗೆ ಸೇರುತ್ತಾರೆ ಎಂಬ ಪೋಸ್ಟ್ ಹರಿದಾಡುತ್ತಿರುವ ಬಗ್ಗೆ ಸಚಿವ ಸೋಮಣ್ಣ ಸ್ಪಷ್ಟನೆ ನೀಡಿದ್ದಾರೆ. 

Written by - Zee Kannada News Desk | Last Updated : Mar 20, 2023, 02:22 PM IST
  • ಸೋಮಣ್ಣನ ನಡೆ ರಹಸ್ಯವಾಗಿದೆ.
  • ಪಕ್ಷ ಸೇರುವುದರ ಕುರಿತು ಸಿಎಂ. ಬೊಮ್ಮಾಯಿ ಅವರು ಬಿಜೆಪಿಯಲ್ಲಿಯೇ ಇರುತ್ತಾರೆ ಎಂದು ಭರವಸೆ ಮಾತುಗಳನ್ನಾಡಿದ್ದರು
  • ಸೋಮಣ್ಣ ಡಿ.ಕೆ.ಶಿವಕುಮಾರ ಅವರ ಜೊತೆಗಿರುವ ಪೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.
ಕಾಂಗ್ರೆಸ್ ಸೇರುವುದು, ಭಿನ್ನಮತ ಮುಗಿದ ಅಧ್ಯಾಯ-ಸಚಿವ ವಿ.ಸೋಮಣ್ಣ  title=

ಸೋಮಣ್ಣ ಯಾವ ಪಕ್ಷ ಸೇರುತ್ತಾರೆ ಎನ್ನುವುದನ್ನು ತಿಳಿಯಲು ಹಲವು ಪಕ್ಷಗಳು ಕಾಯುತ್ತಿವೆ. ಆದರೆ ಸೋಮಣ್ಣನ ನಡೆ ರಹಸ್ಯವಾಗಿದೆ. ಅವರು ಪಕ್ಷ ಸೇರುವುದರ ಕುರಿತು ಸಿಎಂ. ಬೊಮ್ಮಾಯಿ ಅವರು ಬಿಜೆಪಿಯಲ್ಲಿಯೇ ಇರುತ್ತಾರೆ ಎಂದು ಭರವಸೆ ಮಾತುಗಳನ್ನಾಡಿದ್ದರು ಆದರೆ ಸೋಮಣ್ಣ ಡಿ.ಕೆ.ಶಿವಕುಮಾರ ಅವರ ಜೊತೆಗಿರುವ ಪೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. 

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಅವರು ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಎರಡು ತಿಂಗಳಿನಿಂದ ನನ್ನನ್ನು ಉಜ್ಜುತ್ತಿದ್ದೀರಾ, ಇನ್ನು ಎಷ್ಟು ಬೇಕಾದ್ರೂ ಹಾಕಿಕೊಳ್ಳಿ ಅವೆಲ್ಲಾ  ನನ್ನ ತಲೆಯಲ್ಲೇ ಇಲ್ಲಾ, ನಾನೋರ್ವ ಡೈರೆಕ್ಟ್ ರಾಜಕಾರಣಿ ನೇರವಾಗಿ ಮಾತನಾಡುವನು, ಈಗಾಗಲೇ ಅದರ ಬಗ್ಗೆ ಹೇಳುವುದನ್ನೆಲ್ಲಾ ಹೇಳಿದ್ದೇನೆ, ಅವೆಲ್ಲಾ ಮುಗಿದ ಅಧ್ಯಾಯ, ಇನ್ನು ಈ ವಿಚಾರಗಳಿಗೆ ಉತ್ತರಿಸಲ್ಲ ಎಂದರು.

ಇದನ್ನೂ ಓದಿ-ಮಾರ್ಚ್ ನಲ್ಲಿ "ನಮ್ಮ ಬೆಂಗಳೂರು ಹಬ್ಬ 2023": ಕಲೆ, ಸಿನಿಮಾ, ಆಹಾರ ಮೇಳ ಆಯೋಜನೆ, ಎಲ್ಲಿ ಏನು? 

ಇನ್ನು, ಚಾಮರಾಜನಗರ ಜಿಲ್ಲೆಯಲ್ಲಿ ಸ್ಪರ್ಧೆ ಮಾಡುವಿರಾ ಎಂಬ ಪ್ರಶ್ನೆಗೆ ಉತ್ತರಿಸಿ, ರಾಜ್ಯದ 224 ಕ್ಷೇತ್ರಗಳಲ್ಲಿ ಸೋಮಣ್ಣಗೆ ಹಲವಾರು ಕ್ಷೇತ್ರ ಪರಿಚಯ ಇದೆ, ಚಿಕ್ಕಂದಿನಿಂದಲೂ ಚಾಮರಾಜನಗರದ ಬಗ್ಗೆ ವಿಶೇಷ ಪ್ರೀತಿ ಅಷ್ಟೇ, ಎಲ್ಲವೂ ಪಾರ್ಟಿಯ ತೀರ್ಮಾನ ಎಂದರು.

​ಇದನ್ನೂ ಓದಿ-Forest destruction: ಕಾಲುವೆ ನೆಪಕ್ಕೆ ಔಷಧಿ ಸಸ್ಯಗಳು ಬಲಿ 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News