ನವದೆಹಲಿ: ಚುನಾವಣಾ ಸುಧಾರಣೆ ಮೇಲೆ ನಿಗಾ ಇಡುವ ಪ್ರಜಾಪ್ರಭುತ್ವ ಸುಧಾರಣಾ ಸಂಘಟನೆ(ಎಡಿಆರ್), ದೇಶದ 29 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳ ಆಸ್ತಿಯ ಪಟ್ಟಿಯೊಂದನ್ನು ಸೋಮವಾರ ಬಿಡುಗಡೆ ಮಾಡಿದೆ. ಇದರಲ್ಲಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ದೇಶದ 6ನೇ ಶ್ರೀಮಂತ ಮುಖ್ಯಮಂತ್ರಿಯಾಗಿ ಗುರುತಿಸಿಕೊಂಡಿದ್ದಾರೆ.
ರಾಜ್ಯ ಸಭೆಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರಸ್ತುತ ಮುಖ್ಯಮಂತ್ರಿಗಳು ಸಲ್ಲಿಸಿರುವ ಆದಾಯ ಆಸ್ತಿವಿವರಗಳನ್ನು ಪರಾಮರ್ಶಿಸಿ ಎಡಿಆರ್ ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್(NEW) ಈ ಪಟ್ಟಿ ತಯಾರಿಸಿದೆ. ದೇಶದ ಶ್ರೀಮಂತ ಮುಖ್ಯಮಂತ್ರಿ, ಬಡ ಮುಖ್ಯಮಂತ್ರಿ, ಕಿರಿಯ ಮತ್ತಿ ಹಿರಿಯ ಮುಖ್ಯಮಂತ್ರಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಅದರಲ್ಲಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 13 ಕೋಟಿ ರೂ. ಆಸ್ತಿಯೊಂದಿಗೆ ಪಟ್ಟಿಯಲ್ಲಿ 6ನೇ ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ : ಇವರು ಭಾರತದ ಅತಿ ಶ್ರೀಮಂತ, ಬಡ ಮುಖ್ಯಮಂತ್ರಿಗಳು !
ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪಿಮಾ ಖಂಡು ಹೊರತುಪಡಿಸಿ, 18 ರಾಜ್ಯಗಳಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿಯ ಯಾವೊಬ್ಬ ಮುಖ್ಯಮಂತ್ರಿಯೂ ಸಹ ಟಾಪ್ 10 ಪಟ್ಟಿಯಲ್ಲಿ ಇಲ್ಲದಿರುವುದು ವಿಶೇಷ. ಇನ್ನೂ, ರಾಷ್ಟ್ರದ 31 ಮುಖ್ಯಮಂತ್ರಿಗಳ ಪೈಕಿ 8 ಅಥವಾ ಶೇ.26 ಮಂದಿ ಗಂಭೀರ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿರುವುದಾಗಿ ಘೋಷಿಸಿವೆ. ಇದರಲ್ಲಿ ಕೊಲೆಯ ಪ್ರಕರಣಗಳು, ಕೊಲೆ ಯತ್ನ, ಮೋಸಗಾರಿಕೆ ಮತ್ತು ಆಸ್ತಿಯ ವಿತರಣೆ ಅಪರಾಧದ ಬೆದರಿಕೆ ಇತ್ಯಾದಿ ಆರೋಪಗಳನ್ನು ಎದುರಿಸುತ್ತಿರುವುದಾಗಿ ವರದಿ ತಿಳಿಸಿದೆ.