DK Shivakumar challenges BJP: ಮೊದಲು ಪಾಲಿಕೆ ಚುನಾವಣೆ ನಡೆಸಲಿ: ಬಿಜೆಪಿಗೆ ಡಿಕೆಶಿ ಸವಾಲ್

DK Shivakumar challenges BJP: ಸದಾಶಿವನಗರ ನಿವಾಸದ ಬಳಿ ಮಾತಾನಾಡಿದ ಅವರು, “ಸೋಲಿನ ಭೀತಿ ಅವರಿಗಿದೆ. ಜಿಲ್ಲಾ ಪಂಚಾಯತ್, ತಾ.ಪಂ ಎಲೆಕ್ಷನ್ ಮಾಡಲಿ. ಜನ ಏನು ಹೇಳ್ತಾರೆ ಎಂದು ನೋಡೋಣ. ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಯಾರು ತೆಗೆಯಲು ಆಗಲ್ಲ. ಕೆಲವರು ಪ್ರಧಾನ ಮಂತ್ರಿ ಹೋದ್ರೆ ದೇಶಾನೇ ಬದಲಾವಣೆ ಆಗುತ್ತೆ ಎಂದು ಹೇಳ್ತಾರೆ.

Written by - Prashobh Devanahalli | Edited by - Bhavishya Shetty | Last Updated : Dec 12, 2022, 04:08 PM IST
    • “ಮೊದಲು ಅವರು ಕಾರ್ಪೊರೇಷನ್ ಎಲೆಕ್ಷನ್ ಮಾಡೋಕೆ ಹೇಳಿ”
    • “ಕರ್ನಾಟಕ ಜನ ಬದಲಾವಣೆ ಬಯಸುತ್ತಿದ್ದಾರೆ”
    • ಸಚಿವ ಆರ್ ಅಶೋಕ್ ಗೆ ತಿರುಗೇಟು ನೀಡಿದ ಅಧ್ಯಕ್ಷ ಡಿ ಕೆ ಶಿವಕುಮಾರ್
DK Shivakumar challenges BJP: ಮೊದಲು ಪಾಲಿಕೆ ಚುನಾವಣೆ ನಡೆಸಲಿ: ಬಿಜೆಪಿಗೆ ಡಿಕೆಶಿ ಸವಾಲ್ title=
Congress

DK Shivakumar challenges BJP: ಬೆಂಗಳೂರು: ಕಾಂಗ್ರೆಸ್ ಶಾಸಕರು ಬಿಜೆಪಿ ಅವರ ಸಂಪರ್ಕದಲ್ಲಿದ್ದಾರೆ ಎಂಬ ವಿಚಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು, “ಪಾಪಾ ಹತಾಶರಾಗಿರುವವರ ಜೊತೆ ನಾನೇನು ಮಾತಾಡಲಿ, ಮೊದಲು ಅವರು ಕಾರ್ಪೊರೇಷನ್ ಎಲೆಕ್ಷನ್ ಮಾಡೋಕೆ ಹೇಳಿ” ಎಂದು ಸಚಿವ ಆರ್ ಅಶೋಕ್ ಗೆ ತಿರುಗೇಟು ನೀಡಿದರು.

ಇದನ್ನೂ ಓದಿ: ಬಿಜೆಪಿ ಫ್ಲೆಕ್ಸ್ ತೆಗೆಯುವಂತೆ ಎಸ್ಡಿಪಿಐ, ಬಿಎಸ್ಪಿ ಪ್ರತಿಭಟನೆ

ಸದಾಶಿವನಗರ ನಿವಾಸದ ಬಳಿ ಮಾತಾನಾಡಿದ ಅವರು, “ಸೋಲಿನ ಭೀತಿ ಅವರಿಗಿದೆ. ಜಿಲ್ಲಾ ಪಂಚಾಯತ್, ತಾ.ಪಂ ಎಲೆಕ್ಷನ್ ಮಾಡಲಿ. ಜನ ಏನು ಹೇಳ್ತಾರೆ ಎಂದು ನೋಡೋಣ. ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಯಾರು ತೆಗೆಯಲು ಆಗಲ್ಲ. ಕೆಲವರು ಪ್ರಧಾನ ಮಂತ್ರಿ ಹೋದ್ರೆ ದೇಶಾನೇ ಬದಲಾವಣೆ ಆಗುತ್ತೆ ಎಂದು ಹೇಳ್ತಾರೆ. ಹಿಮಾಚಲ ದೆಹಲಿ ಪಕ್ಕದಲ್ಲಿತ್ತು. ದೆಹಲಿಯಲ್ಲಿ ಅವರ ಸರ್ಕಾರ, ಮಂತ್ರಿಗಳಿದ್ದರು. ಆಪ್ ಪಾರ್ಟಿ ಏನೇನೋ ಮಾಡಿ ಅಧಿಕಾರಕ್ಕೆ ಬಂತು. ಹಾಗೆಯೇ ಕರ್ನಾಟಕಕ್ಕೂ ಬೇರೆ ರಾಜ್ಯಕ್ಕೂ ಸಂಬಂಧವಿಲ್ಲ” ಎಂದು ವ್ಯಾಖ್ಯಾನ ನೀಡಿದರು.

ಇಲ್ಲಿಯ ಆಡಳಿತ ಕೆಟ್ಟು ಹೋಗಿದೆ. ದೇಶದಲ್ಲಿ ಜನ ಪ್ರಜ್ಞಾವಂತರು ಇದ್ದಾರೆ. ಕರ್ನಾಟಕ ಜನ ಬದಲಾವಣೆ ಬಯಸುತ್ತಿದ್ದಾರೆ. ಯಾಕೆ ಇವರು ಕಾರ್ಪೊರೇಷನ್, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಎಲೆಕ್ಷನ್ ಮಾಡಿಲ್ಲ. ಅವರ ಸರ್ವೇ ರಿಪೋರ್ಟ್ ನಲ್ಲಿ ಅವರ ವಿರುದ್ಧ ಜನ ಇದ್ದಾರೆ. ಸೋಲುತ್ತೇವೆ ಎನ್ನುವ ಭಯದ ದೃಷ್ಟಿಯಿಂದ ಎಲೆಕ್ಷನ್ ಮಾಡಿಲ್ಲ. ಜನರ ಮುಂದೆ ಹೋಗಲು ಬಿಜೆಪಿಗೆ ಹೆದರಿಕೆ ಇದೆ. 140 ರಿಂದ 150 ಸ್ಥಾನಗಳು ನಮ್ಕ ಪಕ್ಷಕ್ಕೆ ಬರುತ್ತವೆ. ಸ್ಪಷ್ಟ ಬಹುಮತ ಕಾಂಗ್ರೆಸ್ ಗೆ ಸಿಗುತ್ತದೆ” ಎಂದರು.

ಇದನ್ನೂ ಓದಿ: ಅಯೋಧ್ಯೆ ರೀತಿಯೇ ಅಂಜನಾದ್ರಿ ಅಭಿವೃದ್ಧಿಗೆ ಬೇಡಿಕೆ!

ಮಲ್ಲಿಕಾರ್ಜುನ ಖರ್ಗೆಗೆ ಅವರು ಎಐಸಿಸಿ ಅಧ್ಯಕ್ಷರಾಗಿದ್ದಾರೆ. ದೇಶ ಒಗ್ಗೂಡಿಸಲು ರಾಹುಲ್ ಗಾಂಧಿ ನಡೆಯುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News