ನಾಡಹಬ್ಬ ದಸರಾ ಗಜಪಯಣಕ್ಕೆ ಮುಹೂರ್ತ ಫಿಕ್ಸ್

ಮೊದಲ ತಂಡದಲ್ಲಿ 6 ಆನೆಗಳು ಆಗಸ್ಟ್ 29 ರಂದು ಹುಣಸೂರು ತಾಲೂಕಿನ ವೀರನಹೊಸಹಳ್ಳಿ ಬಳಿಯ ನಾಗಾಪುರ ಗಿರಿಜನ ಆಶ್ರಮ ಶಾಲೆ ಆವರಣದಿಂದ ಮೈಸೂರಿನತ್ತ ಪಯಣ ಆರಂಭಿಸಲಿವೆ. 

Last Updated : Aug 27, 2018, 07:20 PM IST
ನಾಡಹಬ್ಬ ದಸರಾ ಗಜಪಯಣಕ್ಕೆ ಮುಹೂರ್ತ ಫಿಕ್ಸ್ title=

ಮೈಸೂರು: ಕೊಡಗು ಜಿಲ್ಲೆಯಲ್ಲಿ ಉಂಟಾದ ಪ್ರವಾಹದಿಂದಾಗಿ ಮುಂದೂಡಲಾಗಿದ್ದ ನಾಡಹಬ್ಬ ದಸರಾ ಗಜಪಯಣ ಕಾರ್ಯಕ್ರಮಕ್ಕೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದ್ದು, ಆಗಸ್ಟ್ 29ರಂದು ಆನೆಗಳು ಮೈಸೂರಿನತ್ತ ಹೆಜ್ಜೆ ಹಾಕಲಿವೆ.

ಮೈಸೂರು ದಸರಾ ಮಹೋತ್ಸವದಲ್ಲಿ ಈ ಬಾರಿ ಪಾಲ್ಗೊಳ್ಳಲಿರುವ 12 ಆನೆಗಳ ಪೈಕಿ ಮೊದಲ ತಂಡದಲ್ಲಿ 6 ಆನೆಗಳು ಆಗಸ್ಟ್ 29 ರಂದು ಹುಣಸೂರು ತಾಲೂಕಿನ ವೀರನಹೊಸಹಳ್ಳಿ ಬಳಿಯ ನಾಗಾಪುರ ಗಿರಿಜನ ಆಶ್ರಮ ಶಾಲೆ ಆವರಣದಿಂದ ಮೈಸೂರಿನತ್ತ ಪಯಣ ಆರಂಭಿಸಲಿವೆ. ಈ ತಂಡದಲ್ಲಿ ಚಿನ್ನದ ಅಂಬಾರಿ ಹೊರುವ ಅರ್ಜುನ ಬಳ್ಳೆ ಆನೆ ಶಿಬಿರದಿಂದಲೂ, ಬಲರಾಮ, ಅಭಿಮನ್ಯು, ವರಲಕ್ಷ್ಮಿ, ಕಾವೇರಿ, ವಿಜಯ ಆನೆಗಳು ತಿತಿಮತಿ ಶಿಬಿರದಿಂದಲೂ ಆಗಮಿಸಲಿವೆ.

ಈಗಾಗಲೇ ಅರಣ್ಯ ಇಲಾಖೆ ಗಜಪಯನಕ್ಕೆ ಸಿದ್ಧತೆ ನಡೆಸಿದ್ದು, ಮೈಸೂರು ಜಿಲ್ಲಾಡಳಿತ ಕೂಡ ಆನೆಗಳನ್ನು ಸ್ವಾಗತಿಸಲು ಸಿದ್ಧತೆಗೆ ಮುಂದಾಗಿದೆ. 

Trending News