ಮೇಕೆದಾಟು ಯೋಜನೆ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ: ಬಸವರಾಜ್ ಬೊಮ್ಮಾಯಿ

'ತಮಿಳುನಾಡಿನಲ್ಲಿ ಮೇಕೆದಾಟು ವಿಚಾರವನ್ನು ರಾಜಕಾರಣಕ್ಕೆ ಬಳಕೆ ಮಾಡಲಾಗುತ್ತಿದೆ'.

Written by - Puttaraj K Alur | Last Updated : Aug 5, 2021, 01:44 PM IST
  • ಶೀಘ್ರವೇ ನಾವು ಮೇಕೆದಾಟು ಯೋಜನೆ ಕಾಮಗಾರಿಯನ್ನು ಪ್ರಾರಂಭಿಸುತ್ತೇವೆ ಎಂದ ಬಸವರಾಜ್ ಬೊಮ್ಮಾಯಿ
  • ಕುಡಿಯುವ ನೀರು, ವಿದ್ಯುಚ್ಛಕ್ತಿ ಮತ್ತು ಕಷ್ಟಕಾಲದಲ್ಲಿ ನೀರು ಹಂಚಿಕೆ ಮಾಡಬಹುದು ಎಂದು ಎಲ್ಲರಿಗೂ ಗೊತ್ತಿದೆ
  • ಈ ಯೋಜನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲವೆಂದು ಅಣ್ಣಾಮೈಲೆಗೆ ತಿರುಗೇಟು ನೀಡಿದ ಬೊಮ್ಮಾಯಿ
ಮೇಕೆದಾಟು ಯೋಜನೆ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ: ಬಸವರಾಜ್ ಬೊಮ್ಮಾಯಿ title=
ಮೇಕೆದಾಟು ಕಾಮಗಾರಿ ಪ್ರಾರಂಭಿಸುವುದು ಶತಸಿದ್ಧ

ಬೆಂಗಳೂರು: ಮೇಕೆದಾಟು ಯೋಜನೆ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಇತ್ತೀಚೆಗೆ ರಾಜ್ಯದ ಸಂಸದರ ನಿಯೋಗದೊಂದಿಗೆ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಲಾಗಿದೆ. ಡಿಪಿಆರ್ ಸೇರಿದಂತೆ ಎಲ್ಲಾ ಅನುಮೋದನೆಗಳು ದೊರಕಿದ ಕೂಡಲೇ ಕಾಮಗಾರಿ ಪ್ರಾರಂಭ ಶತಸ್ಸಿದ್ಧ ಅಂತಾ ಹೇಳಿದ್ದಾರೆ.

‘ತಮಿಳುನಾಡಿನಲ್ಲಿ ಮೇಕೆದಾಟು ವಿಚಾರವನ್ನು ರಾಜಕಾರಣಕ್ಕೆ ಬಳಕೆ ಮಾಡಲಾಗುತ್ತಿದೆ. ಯಾವುದೇ ಪಕ್ಷದಲ್ಲಿರಬಹುದು, ರಾಜಕಾರಣಕ್ಕಾಗಿಯೇ ಈ ಯೋಜನೆಗೆ ವಿರೋಧ ಮಾಡಲಾಗುತ್ತಿದೆ. ಕುಡಿಯುವ ನೀರು, ವಿದ್ಯುಚ್ಛಕ್ತಿ ಮತ್ತು ಕಷ್ಟಕಾಲದಲ್ಲಿ ನೀರನ್ನು ಹಂಚಿಕೆ ಮಾಡಬಹುದು ಎಂದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಯೋಜನೆಯ ಸಾದಕ-ಬಾದಕಗಳ ಬಗ್ಗೆ ಎಲ್ಲಿರಿಗೂ ತಿಳಿದಿದೆ’ ಎಂದು ಬೊಮ್ಮಾಯಿ ಹೇಳಿದ್ದಾರೆ.

ಇದನ್ನೂ ಓದಿ: Karnataka Cabinet Expansion: ಡಿಸಿಎಂ ಹುದ್ದೆ ಕ್ಯಾನ್ಸಲ್, ಬಿ.ವೈ.ವಿಜಯೇಂದ್ರಗೆ ಮಂತ್ರಿಸ್ಥಾನವಿಲ್ಲ!

‘ಇತ್ತೀಚೆಗಷ್ಟೇ ಕೇಂದ್ರ ಜಲಶಕ್ತಿ ಮಂತ್ರಿಗಳನ್ನು ಭೇಟಿಯಾಗಿ ಈ ಬಗ್ಗೆ ನಾನು ಚರ್ಚಿಸಿದ್ದೇನೆ. ನಮ್ಮ ಸಂಸದರ ನಿಯೋಗದೊಂದಿಗೆ ಹೋಗಿ ಮೇಕದಾಟು ಯೋಜನೆ ಜಾರಿ ಬಗ್ಗೆ ಒತ್ತಾಯಿಸಿದ್ದೇವೆ. ಆದಷ್ಟು ಬೇಗ ಈ ಯೋಜನೆಗೆ ಡಿಪಿಆರ್ ಸೇರಿದಂತೆ ಎಲ್ಲ ರೀತಿಯ ಅನುಮೋದನೆ ಸಿಗುತ್ತದೆ ಎಂದು ನನಗೆ ವಿಶ್ವಾಸವಿದೆ. ಎಲ್ಲ ರೀತಿಯ ಅನುಮತಿ ಸಿಕ್ಕ ಬಳಿಕ ನಾವು ಕಾಮಗಾರಿಯನ್ನು ಪ್ರಾರಂಭಿಸುವುದು ಶತಸಿದ್ಧ. ಇದರಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಮತ್ತೆ ಈ ಯೋಜನೆ ವಿಚಾರವಾಗಿ ಯಾರಾದರೂ ಪ್ರತಿಭಟನೆ ಮಾಡುತ್ತಿದ್ದರೆ ಅದು ನಮಗೆ ಸಂಬಂಧವಿಲ್ಲ. ರಾಜಕಾರಣಕ್ಕಾಗಿ ಪ್ರತಿಭಟನೆ ಮಾಡುತ್ತಿರುವುದರಿಂದ ಇದನ್ನು ನಾವು ಲೆಕ್ಕಕ್ಕೇ ತೆಗೆದುಕೊಳ್ಳುವುದಿಲ್ಲ’ ಅಂತಾ ಸಿಎಂ ಬೊಮ್ಮಾಯಿ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈಗೆ ಟಾಂಗ್ ನೀಡಿದ್ದಾರೆ.   

ಮೇಕೆದಾಟು ಯೋಜನೆಗೆ ಕರ್ನಾಟಕ ಕೇಡರ್‌ನ ಐಪಿಎಸ್‌ ಅಧಿಕಾರಿಯಾಗಿದ್ದ ಕೆ.ಅಣ್ಣಾಮಲೈ ಅವರು ವಿರೋಧ ವ್ಯಕ್ತಪಡಿಸಿದ್ದರು. ‘ಬಸವರಾಜ ಬೊಮ್ಮಾಯಿಯವರು ಕಾವೇರಿ ನದಿಗೆ ಮೇಕೆದಾಟು ಡ್ಯಾಂ ನಿರ್ಮಿಸುವುದಾಗಿ ಹೇಳಿದ್ದಾರೆ. ನಾವು ಒಂದೇ ಪಕ್ಷದಲ್ಲಿದ್ದರೂ ಈ ನಿರ್ಧಾರವನ್ನು ಬಲವಾಗಿ ವಿರೋಧಿಸುತ್ತೇವೆ. ಕರ್ನಾಟಕದ ಈ ನಿರ್ಧಾರದ ವಿರುದ್ಧ ಉಪವಾಸ ಸತ್ಯಾಗ್ರಹ ಆಗಸ್ಟ್ 5ರಂದು ಉಪವಾಸ ಸತ್ಯಾಗ್ರಹ ನಡೆಸುತ್ತೇವೆಂದು ತಮಿಳುನಾಡು ಬಿಜೆಪಿ ಅಧ್ಯಕ್ಷರೂ ಆಗಿರುವ ಅಣ್ಣಾಮೈಲೆ ಹೇಳಿದ್ದರು.

ಇದನ್ನೂ ಓದಿ: BIG NEWS: ಬೆಳ್ಳಂಬೆಳಗ್ಗೆ ಶಾಸಕ ಜಮೀರ್ ಅಹ್ಮದ್, ರೋಷನ್ ಬೇಗ್ ಗೆ ಇಡಿ ಶಾಕ್..!

 

 

ಅಣ್ಣಾಮೈಲೆ ಅಥವಾ ಬೇರೆ ಯಾರಾದರೂ ಉಪವಾಸ ಮಾಡಲಿ, ಊಟವನ್ನಾದರೂ ಮಾಡಲಿ. ನಾವು ಮಾತ್ರ ಮೇಕೆದಾಟು ಯೋಜನೆಯ ಕಾಮಗಾರಿ ಪ್ರಾರಂಭಿಸುತ್ತೇವೆ. ಈ ಯೋಜನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲವೆಂದು ಸಿಎಂ ಬಸವರಾಜ್ ಬೊಮ್ಮಾಯಿ ತಿರುಗೇಟು ನೀಡಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

 

Trending News