ಜೆಡಿಎಸ್‌ನಲ್ಲಿ ಎಲ್ಲರೂ ಒಂದಾಗಿದ್ದೇವೆ, ಖಾತೆಗಾಗಿ ಯಾರೂ ಪಟ್ಟು ಹಿಡಿದಿಲ್ಲ: ಜಿಟಿಡಿ

ಯಾರು ಸಚಿವರಾಗಬೇಕು ಎಂಬುದು ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ. ದೇವೇಗೌಡ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಬಿಟ್ಟ ವಿಷಯ- ಜಿ.ಟಿ. ದೇವೇಗೌಡ

Last Updated : Jun 5, 2018, 04:00 PM IST
ಜೆಡಿಎಸ್‌ನಲ್ಲಿ ಎಲ್ಲರೂ ಒಂದಾಗಿದ್ದೇವೆ, ಖಾತೆಗಾಗಿ ಯಾರೂ ಪಟ್ಟು ಹಿಡಿದಿಲ್ಲ: ಜಿಟಿಡಿ title=
File photo

ಬೆಂಗಳೂರು: ಜೆಡಿಎಸ್‌ನಲ್ಲಿ ಎಲ್ಲರೂ ಒಂದಾಗಿದ್ದೇವೆ, ಖಾತೆಗಾಗಿ ಯಾರೂ ಪಟ್ಟು ಹಿಡಿದಿಲ್ಲ ಎಂದು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಹೇಳಿದ್ದಾರೆ.

ಒಟ್ಟು 37 ಶಾಸಕರಲ್ಲಿ 11 ಮಂದಿಗೆ ಸಚಿವ ಸ್ಥಾನ ಸಿಗಲಿದೆ. ಅದರಲ್ಲಿ ಬಿಎಸ್ಪಿಗೂ 1 ಸಚಿವ ಸ್ಥಾನ ನೀಡಬೇಕಿದೆ. ಇನ್ನುಳಿದ 10 ಸಚಿವ ಸ್ಥಾನಗಳಲ್ಲಿ ಯಾರು ಸಚಿವರಾಗಬೇಕು. ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬುದು ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ. ದೇವೇಗೌಡ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಬಿಟ್ಟ ವಿಷಯ ಎಂದು ಜಿಟಿಡಿ ತಿಳಿಸಿದರು.

ಇನ್ನು ಲೋಕೋಪಯೋಗಿ ಖಾತೆಗಾಗಿ ಎಚ್.ಡಿ. ರೇವಣ್ಣ ಹಾಗೂ ಜಿಟಿಡಿ ನಡುವೆ ಹಗ್ಗಜಗ್ಗಾಟ ನಡೆಯುತ್ತಿದೆಯೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಿಟಿಡಿ, 'ಮಾಧ್ಯಮದವರು ಲೋಕೋಪಯೋಗಿ ಖಾತೆ ನಿರ್ವಹಿಸುತ್ತೀರಾ ಎಂದು ಕೇಳಿದರು, ನಾನು ಸಿದ್ಧನಿದ್ದೇನೆ ಎಂದಿದ್ದೇನೆ ಅಷ್ಟೇ. ಇದರ ಹೊರತು ಯಾವ ಹಗ್ಗಜಗ್ಗಾಟವೂ ಇಲ್ಲ, ಪೈಪೋಟಿಯೂ ಇಲ್ಲ ಎಂದು ಪ್ರತಿಕ್ರಿಯಿಸಿದರು.

Trending News