ನಾಡಹಬ್ಬದಲ್ಲಿ ಯಾರೂ ರಾಜಕೀಯ ಮಾಡುವುದಿಲ್ಲ- ಡಾ.ಜಿ. ಪರಮೇಶ್ವರ್

ದಸರಾ ಉತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. ಮೂರು ದಿನ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಮೊದಲ ದಿನ ಹೋಗಿಲ್ಲ ಎಂದು ಸ್ಪಷ್ಟನೆ ನೀಡಿದರು.‌ 

IANS | Updated: Oct 10, 2018 , 01:05 PM IST
ನಾಡಹಬ್ಬದಲ್ಲಿ ಯಾರೂ ರಾಜಕೀಯ ಮಾಡುವುದಿಲ್ಲ- ಡಾ.ಜಿ. ಪರಮೇಶ್ವರ್

ಬೆಂಗಳೂರು: ಮೊದಲ ದಿನದ ದಸರಾ ಉದ್ಘಾಟನೆ ಬದಲಿಗೆ ಅ.14, 18 ,19 ರಂದು ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದೇನೆ.‌ ಇಂದು ಸಿಎಂ ಎಚ್.ಡಿ. ಕುಮಾರಸ್ವಾಮಿ ಹಾಗೂ ಸುಧಾ ಮೂರ್ತಿ ಅವರು ದಸರಾ ಉತ್ಸವಕ್ಕೆ ಚಾಲನೆ ನೀಡಿದ್ದಾರೆ. ಈ ಭಾಗದ ಎರಡೂ ಕ್ಷೇತ್ರದ ಶಾಸಕರು, ಸಚಿವರು ಉತ್ಸವಕ್ಕೆ ಹೋಗಬೇಕು. ಕೆಲವರು ಹೋಗಿಲ್ಲವೆಂಬ ಮಾಹಿತಿ ಬಂದಿದೆ. ಈ ಬಗ್ಗೆ ಅವರೊಂದಿಗೆ ಮಾತನಾಡುತ್ತೇನೆ, ಇದರಲ್ಲಿ ಯಾವುದೇ ಗೊಂದಲವಿಲ್ಲ. ನಾಡಹಬ್ಬದಲ್ಲಿ ಯಾರೂ ರಾಜಕೀಯ ಮಾಡುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು. 

ಬಿಡಿಎ ಕ್ವಾಟ್ರಸ್‌ನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ದಸರಾ ಉತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. ಮೂರು ದಿನ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಮೊದಲ ದಿನ ಹೋಗಿಲ್ಲ ಎಂದು ಸ್ಪಷ್ಟನೆ ನೀಡಿದರು.‌ ದಸರಾಗೆ ಚಾಲನೆ ನೀಡಿದ ಸುಧಾಮೂರ್ತಿ ಅವರು ಕೊಡಗು ಮರುನಿರ್ಮಾಣಕ್ಕೆ 25 ಕೋಟಿ ರೂ. ನೀಡುತ್ತಿರುವುದು ಶ್ಲಾಘನೀಯ ಎಂದರು. 

ಸಚಿವ ಸಂಪುಟ ವಿಸ್ತರಣೆ ಮಾಡುವುದರಲ್ಲಿ‌ ಅನುಮಾನವಿಲ್ಲ. ಸದ್ಯ ಉಪಚುನಾವಣೆ ಎದುರಾಗಿರುವ ಕಾರಣ ಸದ್ಯಕ್ಕೆ ಇತ್ತ ಗಮನ ಹರಿಸಲಾಗಿದೆ.‌ ಉಪಚುನಾವಣೆ ಹಾಗೂ ಲೋಕಸಭೆ ಚುನಾವಣೆ ಸಂಬಂಧ ವೇಣುಗೋಪಾಲ್‌ ಅವರ ನೇತೃತ್ವದಲ್ಲಿ ಎಲ್ಲ ನಾಯಕರೊಂದಿಗೆ ಚರ್ಚೆ ಮಾಡಲಾಗಿದೆ. ಉಪಚುನಾವಣೆಗೆ ಅಭ್ಯರ್ಥಿಗಳ ಸಮಸ್ಯೆ ಇಲ್ಲ. ‌ಲೋಕಸಭೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಚರ್ಚೆ ನಡೆಯುತ್ತಿದೆ ಎಂದು ಹೇಳಿದರು. 
 

By continuing to use the site, you agree to the use of cookies. You can find out more by clicking this link

Close