Budget Session 2022 : ನಿಮ್ಮನ್ನು ಪ್ರೀತಿಸುತ್ತೇನೆ ನೀವು ನನ್ನನ್ನು ಪ್ರೀತಿಸುತ್ತೀರಿ : ಸಿದ್ದರಾಮಯ್ಯ

ಸ್ನೇಹಿತರು ಎಂದು ಶುರುಮಾಡಿಕೊಂಡು ಹೀಗೆ ಹೇಳಿದರೆ ಯಾವ ರೀತಿಯ ಸ್ನೇಹ ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಸಿದ್ದರಾಮಯ್ಯ ಉತ್ತರಿಸಿ, ಸ್ನೇಹ ಬೇರೆ ರಾಜಕಾರಣ ಬೇರೆ. ನಮಗೂ ನಿಮಗೂ ಸ್ನೇಹ ಇದೆ ಆದರೆ ನೀವು ಆರ್ ಎಸ್ ಎಸ್ ಹಿನ್ನೆಲೆಯಿಂದ ಬಂದರೆ ನಾನು ಬೇರೆ ಹಿನ್ನೆಲೆಯಿಂದ ಬಂದವರು.

Written by - Prashobh Devanahalli | Last Updated : Mar 7, 2022, 01:11 PM IST
  • ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್ ಮೇಲೆ ಜನರ ನಿರೀಕ್ಷೆ ಬಹಳವಿತ್ತು
  • ನಮ್ಮಿಬ್ಬರ ಸ್ನೇಹ ಬೇರೆ ರಾಜಕಾರಣ ಬೇರೆ
  • ಯಡಿಯೂರಪ್ಪ ದಾರಿ ಬಿಟ್ಟು ಬೇರೆ ದಾರಿಯಿಂದ ಬಂದವರು
Budget Session 2022 : ನಿಮ್ಮನ್ನು ಪ್ರೀತಿಸುತ್ತೇನೆ ನೀವು ನನ್ನನ್ನು ಪ್ರೀತಿಸುತ್ತೀರಿ : ಸಿದ್ದರಾಮಯ್ಯ title=

ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್ ಮೇಲೆ ಜನರ ನಿರೀಕ್ಷೆ ಬಹಳವಿತ್ತು, ಆದರೆ ಅದು ಹುಸಿಯಾಗಿದೆ ಎಂದು ಬಜೆಟ್ ಕುರಿತ ಚರ್ಚೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದರು.

ಬಜೆಟ್ ಅಧಿವೇಶನದಲ್ಲಿ ಮಾತನಾಡಿದ ಸಿದ್ದರಾಮಯ್ಯ(Siddaramaiah), ನಮ್ಮಿಬ್ಬರ ಸ್ನೇಹ ಬೇರೆ ರಾಜಕಾರಣ ಬೇರೆ ಎಂದು ಭಾಷಣ ಪ್ರಾರಂಭ ಮಾಡಿದರು, ಆ ವೇಳೆ ಮಧ್ಯಪ್ರವೇಶ ಮಾಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ನೇಹಿತರು ಎಂದು ಶುರುಮಾಡಿಕೊಂಡು ಹೀಗೆ ಹೇಳಿದರೆ ಯಾವ ರೀತಿಯ ಸ್ನೇಹ ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಸಿದ್ದರಾಮಯ್ಯ ಉತ್ತರಿಸಿ, ಸ್ನೇಹ ಬೇರೆ ರಾಜಕಾರಣ ಬೇರೆ. ನಮಗೂ ನಿಮಗೂ ಸ್ನೇಹ ಇದೆ ಆದರೆ ನೀವು ಆರ್ ಎಸ್ ಎಸ್ ಹಿನ್ನೆಲೆಯಿಂದ ಬಂದರೆ ನಾನು ಬೇರೆ ಹಿನ್ನೆಲೆಯಿಂದ ಬಂದವರು. ನಮಗೂ ನಿಮಗೂ ವೈಚಾರಿಕ ಭಿನ್ನಾಭಿಪ್ರಾಯ ಇದೆ. ಆದರೆ ಮನುಷ್ಯತ್ವ ಸ್ನೇಹ ಮುಖ್ಯ. ನಾನು ನಿಮ್ಮನ್ನು ಪ್ರೀತಿಸುತ್ತೇನೆ ನೀವು ನನ್ನನ್ನು ಪ್ರೀತಿಸುತ್ತೀರಿ ಎಂದರು.

ಇದನ್ನೂ ಓದಿ : ಮೇಕೆದಾಟು ಯೋಜನೆಗೆ ಅನುಮೋದನೆ ನೀಡಲು ಕೇಂದ್ರಕ್ಕೆ ಮನವಿ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಯಡಿಯೂರಪ್ಪ ದಾರಿ ಬಿಟ್ಟು ಬೇರೆ ದಾರಿಯಿಂದ ಬಂದವರು ಬಸವರಾಜ ಬೊಮ್ಮಾಯಿ(Basavaraj Bommai). ಯಡಿಯೂರಪ್ಪ ಆರ್‌ಎಸ್‌ಎಸ್ ಹಿನ್ನೆಲೆಯಿಂದ ಬಂದವರು. ಆದರೆ ಸ್ವಲ್ಪ ದಿನ ಕೋಪದಿಂದ ಹೊರ ಹೋಗಿದ್ದರು. ಆದರೆ ಬೊಮ್ಮಾಯಿ 2008 ರಲ್ಲಿ ಬಿಜೆಪಿ ಗೆ ಹೋದವರು. ಈ ಕಾರಣಕ್ಕಾಗಿ ಇವರಿಗೆ ಎಸ್ ಆರ್ ಬೊಮ್ಮಾಯಿ ಪ್ರಭಾವ ಇದೆ ಎಂಬುವುದು ನನ್ನ ಅನಿಸಿಕೆ ಎಂದರು.

ಹಾಗಿದ್ದರೂ ಬಜೆಟ್(Karnataka Budget 2022) ನೋಡಿದರೆ ಆರ್‌ಎಸ್‌ಎಸ್ ಪ್ರಭಾವದಿಂದ ಸೋತು ಬಿಟ್ಟಿದ್ದಾರೆ ಎಂದರು. ಈ ವೇಳೆ ಮಧ್ಯಪ್ರವೇಶ ಮಾಡಿದ ಕಂದಾಯ ಸಚಿವ ಆರ್ ಅಶೋಕ್, ನಾನು ಯಡಿಯೂರಪ್ಪ ಅವರು ಆರ್‌ಎಸ್‌ಎಸ್ ನಿಂದ ಬಂದವರು. ಆದರೆ ಇದೀಗ ನಮಗಿಂತ ಜಾಸ್ತಿ ಆರ್ ಎಸ್ ಎಸ್ ಆಗಿದ್ದಾರೆ ಬೊಮ್ಮಾಯಿ ಅವರು. ಆರ್‌ಎಸ್‌ಎಸ್ ಸಂಸ್ಕಾರ ಕೊಡುವ ಸಂಸ್ಥೆ.‌ಅಲ್ಲಿಂದ ಬಂದವರು ಒಳ್ಳೆಯ ಬಜೆಟ್ ಕೊಡುತ್ತಾರೆ ಎಂದರು.

ಇದಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ, ಆರ್‌ಎಸ್‌ಎಸ್(RSS) ನಿಂದ ಬಂದವರು ಇಂತಹ ಬಜೆಟ್ ಕೊಟ್ಟರೆ ನನಗೆ ಅಘಾತ ಇಲ್ಲ ಆದರೆ ಬೊಮ್ಮಾಯಿ ಮಂಡಿಸಿದರೆ ಅಘಾತವಾಗಿದೆ ಎಂದರು.  

ಇದನ್ನೂ ಓದಿ : ಬಾಲ್ಯ ವಿವಾಹ ನಿಷೇಧ ಜಾಗೃತಿ ಅಭಿಯಾನ ವಿಡಿಯೋ ಆನ್‌ವೀಲ್ಸ್‌ಗೆ ಚಾಲನೆ

ಇದಕ್ಕೆ ಅಶೋಕ್(R Ashok) ಪ್ರತಿಕ್ರಿಯೆ ನೀಡಿ, ಜೆಡಿಎಸ್ ನಿಂದ ಬಂದ ನೀವು ಸಿಎಂ ಆಗಿಲ್ವಾ? ಇದೀಗ ಬಸವರಾಜ ಬೊಮ್ಮಾಯಿಗೆ ಅವಕಾಶ ಸಿಕ್ಕಿದೆ ಆಗಿದ್ದಾರೆ. ನಮಗಿಂತ ಚೆನ್ನಾಗಿ ಬಿಜೆಪಿ ಪಾಲಿಸುತ್ತಾರೆ ಎಂದರು. ಈ ವೇಳೆ ಆರ್ ಅಶೋಕ್ ಕಾಲೆಳೆದ ಸಿದ್ದರಾಮಯ್ಯ, ನೀವೆಲ್ಲಾ ಟ್ರೈ ಮಾಡಿದ್ದೀರಾ, ಸಿಕ್ಕಿಲ್ಲ ಅದಕ್ಕೆ ಹೀಗೆ ಹೇಳ್ತೀರಿ. ನನಗೆ ಗೊತ್ತಿಲ್ಲವೇ ಎಂದು ಉತ್ತರಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News