ಶ್ರವಣಬೆಳಗೊಳ ತಲುಪಿದ ಪ್ರಧಾನಿ ಮೋದಿ

ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ 88ನೇ ಬಾಹುಬಲಿ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಮಿಸಿದ್ದಾರೆ. 

Last Updated : Feb 19, 2018, 01:56 PM IST
ಶ್ರವಣಬೆಳಗೊಳ ತಲುಪಿದ ಪ್ರಧಾನಿ ಮೋದಿ title=

ಹಾಸನ : ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ 88ನೇ ಬಾಹುಬಲಿ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಮಿಸಿದ್ದಾರೆ. 

ಫೆ.17 ರಿಂದ ಫೆ.26ರವರೆಗೆ ನಡೆಯಲಿರುವ ಕಾರ್ಯಕ್ರಮದ ಮೂರನೇ ದಿನವಾದ ಇಂದು, ಹೆಲಿಕಾಪ್ಟರ್ ಮೂಲಕ ರಾಚೆನಹಳ್ಳಿ ಹೆಲಿಪ್ಯಾಡ್ ತಲುಪಿದ ಮೋದಿ, ವಿಶೇಷ ವಾಹನದಲ್ಲಿ ಶ್ರವಣಬೆಳಗೊಳಕ್ಕೆ ತೆರಳಿದ್ದಾರೆ. 

ಬಾಹುಬಲಿ ಮೂರ್ತಿಗೆ ಪುಷ್ಪ ಅರ್ಪಿಸಲಿರುವ ಮೋದಿ, ಚಾವುಂಡರಾಯ ವೇದಿಕೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

Trending News