ಮೈಸೂರು-ಬೆಂಗಳೂರು ದ್ವಿಮುಖ ವಿದ್ಯುತ್ ರೈಲು ಮಾರ್ಗಕ್ಕೆ ಮೋದಿ ಚಾಲನೆ

ವಿಶ್ವದರ್ಜೆಯ ವೈಶಿಷ್ಟ್ಯತೆಗಳುಳ್ಳ ಹಾಗೂ ಹವಾನಿಯಂತ್ರಿತ ಬೋಗಿಗಳನ್ನು ಮಾತ್ರ ಹೊಂದಿರುವ ಭರ್ಜರಿ ರೈಲು.

Last Updated : Feb 19, 2018, 04:52 PM IST
ಮೈಸೂರು-ಬೆಂಗಳೂರು ದ್ವಿಮುಖ ವಿದ್ಯುತ್ ರೈಲು ಮಾರ್ಗಕ್ಕೆ ಮೋದಿ ಚಾಲನೆ title=
Pic: ANI

ಮೈಸೂರು: ಮೈಸೂರು-ಬೆಂಗಳೂರು ನಡುವೆ ನೂತನವಾಗಿ ನಿರ್ಮಾಣವಾಗಿರುವ ಜೋಡಿ ಹಳಿ ವಿದ್ಯುದೀಕರಣ ಹಾಗೂ ಮೈಸೂರು-ಉದಯಪುರ ನಡುವೆ ಪ್ಯಾಲೆಸ್ ಕ್ವೀನ್ ಹಮ್ ಸಫರ್ ಎಕ್ಸ್ಪ್ರೆಸ್ ರೈಲಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದರು.

ಮೈಸೂರು ರೈಲ್ವೆ ನಿಲ್ದಾಣಕ್ಕೆ ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಮದುವಣಗಿತ್ತಿಯಂತೆ ತಯಾರಾಗಿದ್ದ ರೈಲ್ವೇ ನಿಲ್ದಾಣದ ಪ್ಲಾಟ್ ಫಾರ್ಮ್ ನಂ. 1ಕ್ಕೆ ಮಧ್ಯಾಹ್ನ 3 ಗಂಟೆಗೆ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಮೈಸೂರು-ಬೆಂಗಳೂರು ಜೋಡಿ ರೈಲ್ವೆ ಮಾರ್ಗದ ವಿದ್ಯುತೀಕರಣ ಮತ್ತು ಮೈಸೂರು-ಉದಯ್‌ಪುರ್ ನಡುವೆ ನೂತನ ರೈಲ್ವೆ ಮಾರ್ಗಕ್ಕೆ ಹಸಿರು ನಿಶಾನೆ ತೋರಿದರು.

990 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಜೋಡಿ ರೈಲ್ವೆ ಮಾರ್ಗ ಹಾಗೂ 208 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ವಿದ್ಯುತೀಕರಣ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ನಿರ್ಮಾಣಗೊಂಡಿವೆ.

ಮೈಸೂರು-ಉದಯಪುರ ಎಕ್ಸ್ಪ್ರೆಸ್ ರೈಲಿನ ವಿಶೇಷತೆ;

* ಈ ರೈಲು ತನ್ನ ಮಾರ್ಗದಲ್ಲಿ 30 ಲೋಕಸಭಾ ಕ್ಷೇತ್ರಗಳನ್ನು ಸಂಪರ್ಕಿಸುತ್ತದೆ.
* ಪ್ರವಾಸೋದ್ಯಮದಲ್ಲಿ ಹೊಸ ಆಯಾಮಗಳನ್ನು ಕಲ್ಪಿಸುತ್ತದೆ.
* ವಿಶ್ವದರ್ಜೆಯ ವೈಶಿಷ್ಟ್ಯತೆಗಳುಳ್ಳ ಹಾಗೂ ಹವಾನಿಯಂತ್ರಿತ ಬೋಗಿಗಳನ್ನು ಮಾತ್ರ ಹೊಂದಿರುವ ಭರ್ಜರಿ ರೈಲು.
* ಇದು ಪಶ್ಚಿಮ ಭಾರತದ ಐದು ರಾಜ್ಯಗಳಿಗೆ ಸಂಪರ್ಕ ಒದಗಿಸುತ್ತದೆ.

Trending News