ಬಿಜೆಪಿಯ 'ಮಂಗಳೂರು ಚಲೋ' ವಿಚಾರಕ್ಕೆ ನೋಟಿಸ್ ನೀಡಿದ ಪೋಲೀಸ್..

'ಮಂಗಳೂರು ಚಲೋ' ಅನುಮತಿ ವಿಚಾರ ವಾಗಿ ಸರ್ಕಾರದ ಸೂಚನೆಯಂತೆ ಬಿಜೆಪಿ ಯುವ ಮೋರ್ಚಾಗೆ ಕೆಲವು ಸ್ಪಷ್ಟೀಕರಣ ಕೋರಿ ಬೆಂಗಳೂರು ಪಶ್ಚಿಮ ವಿಭಾಗದ ಉಪ ಪೋಲಿಸ್ ಆಯುಕ್ತರು ನೋಟಿಸ್ ನೀಡಿದ್ದಾರೆ. 

Last Updated : Sep 4, 2017, 03:36 PM IST
ಬಿಜೆಪಿಯ 'ಮಂಗಳೂರು ಚಲೋ' ವಿಚಾರಕ್ಕೆ ನೋಟಿಸ್ ನೀಡಿದ ಪೋಲೀಸ್.. title=

ಬೆಂಗಳೂರು: 'ಮಂಗಳೂರು ಚಲೋ' ವಿಚಾರಕ್ಕೆ ಸಂಬಂಧ ಪಟ್ಟಂತೆ ಬಿಜೆಪಿ ಯುವ ಮೋರ್ಚಾಕ್ಕೆ ಪೊಲೀಸ್ ನೋಟೀಸ್ ನೀಡಿದ್ದಾರೆ. 'ಮಂಗಳೂರು ಚಲೋ' ಅನುಮತಿ ವಿಚಾರ ವಾಗಿ ಸರ್ಕಾರದ ಸೂಚನೆಯಂತೆ ಬಿಜೆಪಿ ಯುವ ಮೋರ್ಚಾಗೆ ಕೆಲವು ಸ್ಪಷ್ಟೀಕರಣ ಕೋರಿ ಬೆಂಗಳೂರು ಪಶ್ಚಿಮ ವಿಭಾಗದ ಉಪ ಪೋಲಿಸ್ ಆಯುಕ್ತರು ನೋಟಿಸ್ ನೀಡಿದ್ದಾರೆ. 
 
ನೋಟೀಸ್ ನಲ್ಲಿ ಪ್ರಮುಖ ಮೂರು ವಿಚಾರಗಳ ಕುರಿತು ಪ್ರಸ್ತಾಪಿಸಲಾಗಿದೆ:

* ಪ್ರತಿಭಟನಾ ಸಭೆ ನಡೆಸಲು ಮಂಗಳೂರಿನಲ್ಲಿ  ಅನುಮತಿ ಪಡೆಯಲಾಗಿದೆಯೇ? ಅನುಮತಿ ಪಡೆದಿದ್ದರೆ ಅನುಮತಿ ಪತ್ರ ತಲುಪಿಸಿ..
* ಬೆಂಗಳೂರಿನಲ್ಲಿ ಬೈಕ್ ರ್ಯಾಲಿ ನಡೆಸಲು ನಗರ ಸಂಚಾರ ವಿಭಾಗದಿಂದ ಅನುಮತಿ ಪಡೆಯಲಾಗಿದೆಯೇ?.. ಅನುಮತಿ ಪಡೆದಿದ್ದರೆ ಅನುಮತಿ ಪತ್ರ ಒದಗಿಸಿ‌..
* ಬೈಕ್ ರ್ಯಾಲಿಯಲ್ಲಿ ಪಾಲ್ಗೊಳ್ಳುವ ವ್ಯಕ್ತಿಗಳ ಸಂಪೂರ್ಣ ವಿವರ ನೀಡಿ..
ಹೀಗೆ ಸರಣಿ ಪ್ರಶ್ನೆಗಳನ್ನ ಹಾಕಿ ಬಿಜೆಪಿ ಯುವ ಮೋರ್ಚಾಗೆ ಪೊಲೀಸ್ ಇಲಾಖೆ ನೋಟಿಸ್ ನೀಡಿದೆ. 

ಕರಾವಳಿಯಲ್ಲಿ ನಡೆಯುತ್ತಿರುವ ಹಿಂದೂ ಯುವಕರ ಹತ್ಯೆಯ ವಿರುದ್ಧ ಈ ಶಾಂತಿಯುತ ರ್ಯಲಿಯನ್ನು ಪೋಲೀಸರ ಮೂಲಕ ಹತ್ತಿಕ್ಕುವ ಪ್ರಯತ್ನಕ್ಕೆ ಬೆದರುವುದಿಲ್ಲ ಮತ್ತು ಜಗ್ಗುವುದು ಇಲ್ಲ. ಮಂಗಳೂರು ಚಲೋ ಕಾರ್ಯಕ್ರಮ ಸರಕಾರದ ವಿರೋಧದ ನಡುವೆಯೂ ನಡದೇ ನಡೆಯುತ್ತೆ ಎಂದು ಆರ್.ಅಶೋಕ್ ಹೇಳಿದ್ದರು. 

ಅಷ್ಟೇ ಅಲ್ಲದೆ ರ್ಯಲಿಯನ್ನು ತಡೆಯುವ ಪ್ರಜಾತಂತ್ರ ವಿರೋಧಿ ಕ್ರಮಕ್ಕೆ ತಕ್ಕ ಉತ್ತರ ಯುವ ಮೋರ್ಚಾ ಕಾರ್ಯಕರ್ತರು ನೀಡುತ್ತಾರೆ. ಶಾಂತಿಯುತವಾಗಿ ನಡೆಸಲು ಉದ್ದೇಶಿಸಿರುವ ರ್ಯಲಿಯನ್ನು ತಡೆಯುವ ಕುತಂತ್ರ ನಡೆಸಿದರೆ ಮುಂದಾಗುವ ಪರಿಣಾಮಕ್ಕೆ ರಾಜ್ಯ ಸರ್ಕಾರವೇ ಹೊಣೆಯಾಗುತ್ತದೆ ಎಂದೂ ಸಹ ಆರ್. ಅಶೋಕ್ ತಿಳಿಸಿದ್ದರು. 

ಇದೊಂದು ಧರ್ಮ ಯುದ್ಧ. ಯಾವುದೇ ಕಾರಣಕ್ಕೂ ಹಿಂದೂ ವಿರೋಧಿ ಸರಕಾರದ ವಿರುದ್ಧ ನಮ್ಮ ಹೋರಾಟ ನಿಲ್ಲುವುದಿಲ್ಲ. ನ್ಯಾಯಯುತ ಧ್ವನಿಯನ್ನು ದಮನಿಸುವ ಸರ್ಕಾರದ  ಪ್ರಯತ್ನಕ್ಕೆ ಸೋಲು ಖಚಿತ ಎಂದು ಪತ್ರಿಕಾ ಪ್ರಕಟಣೆ ಮೂಲಕ ಈ ರ್ಯಲಿಯ ನೇತ್ರತ್ವ ವಹಿಸಿದ್ದ ಮಾಜಿ ಗೃಹ ಸಚಿವ ಆರ್.ಅಶೋಕ್ ಎಚ್ಚರಿಕೆ ನೀಡಿದ್ದರು.

Trending News