ಪ್ರಾಜೆಕ್ಟ್‌ ವಿಷನ್‌ ವತಿಯಿಂದ ಕಣ್ಣಿನ ಆಸ್ಪತ್ರೆ ಕಟ್ಟುತ್ತಿರುವುದು ಶ್ಲಾಘನೀಯ: ಡಿಸಿಎಂ ಡಾ.ಜಿ. ಪರಮೇಶ್ವರ

ಅರಸಾಪುರದಲ್ಲಿ ಕಣ್ಣಿನ ಆಸ್ಪತ್ರೆ ಶಂಕುಸ್ಥಾಪನೆ‌ ನೆರವೇರಿಸಿದ ಡಿಸಿಎಂ ಡಾ.ಜಿ. ಪರಮೇಶ್ವರ  

Last Updated : Jun 24, 2019, 08:19 AM IST
ಪ್ರಾಜೆಕ್ಟ್‌ ವಿಷನ್‌ ವತಿಯಿಂದ ಕಣ್ಣಿನ ಆಸ್ಪತ್ರೆ ಕಟ್ಟುತ್ತಿರುವುದು ಶ್ಲಾಘನೀಯ: ಡಿಸಿಎಂ ಡಾ.ಜಿ. ಪರಮೇಶ್ವರ title=

ಕೊರಟಗೆರೆ: ಪ್ರಾಜೆಕ್ಟ್‌ ವಿಷನ್‌ ವತಿಯಿಂದ ಕಣ್ಣಿನ ಆಸ್ಪತ್ರೆ ಕಟ್ಟುತ್ತಿರುವುದು ಶ್ಲಾಘನೀಯ. ಖಾಸಗಿ ಸಂಸ್ಥೆ, ಎನ್‌ಜಿಒಗಳಿಂದ ಇಂಥ ಕಾರ್ಯಗಳು ಹೆಚ್ಚು ನೆರವೇರಬೇಕು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಹೇಳಿದರು.

ಕೊರಟಗೆರೆಯ ಅರಸಾಪುರದಲ್ಲಿ ಸುಸಜ್ಜಿತ ಕಣ್ಣಿನ ಆಸ್ಪತ್ರೆ ಕಟ್ಟಡ ನಿರ್ಮಾಣ ಶಂಕುಸ್ಥಾಪನೆ‌ ನೆರವೇರಿಸಿ, ಕಣ್ಣಿನ ತಪಾಸಣೆ ಕ್ಯಾಂಪ್‌ ಉದ್ಘಾಟಿಸಿ ಪರಮೇಶ್ವರ ಮಾತನಾಡಿದರು. 

ಪ್ರಾಜೆಕ್ಟ್‌ ವಿಷನ್‌ ಅವರ ಈ ಪ್ರಯತ್ನ ಶ್ಲಾಘನೀಯ. ಸರಕಾರ ಕೂಡ ಬಡವರಿಗಾಗಿ ಯಶಸ್ವಿನಿ, ಆರೋಗ್ಯ ಭಾಗ್ಯ ಯೋಜನೆಯನ್ನು ನೀಡಿದೆ. ಕ್ರಿಶ್ಚಿಯನ್‌ ಮಿಷನರಿಗಳಿಂದ ಶಿಕ್ಷಣ ಸಂಸ್ಥೆಗಳು ಹೆಚ್ಚು ಇವೆ. ಈ ಸಂದರ್ಭದಲ್ಲಿ ಆರೋಗ್ಯ ಸಂಸ್ಥೆಗಳು, ಕಣ್ಣಿನ ತಪಾಸಣಾ ಕೇಂದ್ರ ತೆರೆಯುತ್ತಿರುವುದು ಉತ್ತಮ ಕೆಲಸ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಮ್ಮ ಸರಕಾರ ಕೂಡ ಸಾಕಷ್ಟು ಸುಸಜ್ಜಿತ ಆಸ್ಪತ್ರೆ ನಿರ್ಮಿಸಿ ಬಡವರಿಗಾಗಿ ಅನೇಕ ಆರೋಗ್ಯ ಭಾಗ್ಯದಂಥ ಕಾರ್ಯಕ್ರಮವನ್ನು ಘೋಷಿಸಿದೆ ಎಂದರು.
 
ಸರಕಾರಿ ಸಂಸ್ಥೆಗಳ ಜೊತೆಗೆ ಖಾಸಗಿಯವರು ಸಹ ಉಚಿತ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಹೆಜ್ಜೆ ಇಡಬೇಕು. ಈ‌ ನಿಟ್ಟಿನಲ್ಲಿ ಪ್ರಾಜೆಕ್ಟ್‌ ವಿಷನ್ ಅವರ ಹೆಜ್ಜೆ ಶ್ಲಾಘನೀಯ ಎಂದು ಅವರು ತಿಳಿಸಿದರು.

Trending News