Love jihad: 7 ವರ್ಷದ ಮಗು ಬಿಟ್ಟು ನಾಪತ್ತೆಯಾಗಿದ್ದ ಶಿಕ್ಷಕಿ ಪತ್ತೆ, ಪೋಷಕರಿಗೆ ಒಪ್ಪಿಸಿದ ಪೊಲೀಸರು!

ಇದೇ ಅಕ್ಟೋಬರ್ 20ರಂದು ಶಿಕ್ಷಕಿ ಸುಹಾಸಿನಿ ತರಕಾರಿ ವ್ಯಾಪಾರಿ ಸಲೀಂ ಎಂಬಾತನ ಜೊತೆಗೆ ನಾಪತ್ತೆಯಾಗಿದ್ದ ಬಗ್ಗೆ ಶಂಕೆ ವ್ಯಕ್ತವಾಗಿತ್ತು.

Written by - Puttaraj K Alur | Last Updated : Nov 18, 2022, 12:57 PM IST
  • 7 ವರ್ಷದ ಮಗುವನ್ನೂ ತೊರೆದು ನಾಪತ್ತೆಯಾಗಿದ್ದ ರಾಯಚೂರಿನ ಶಿಕ್ಷಕಿ ಮಂತ್ರಾಲಯದಲ್ಲಿ ಪತ್ತೆ
  • ‘ಜೀ ಕನ್ನಡ ನ್ಯೂಸ್’ ವರದಿ ಬೆನ್ನಲ್ಲೇ ಶಿಕ್ಷಕಿ ಸುಹಾಸಿನಿಯನ್ನು ಠಾಣೆಗೆ ಕರೆತಂದ ಪೊಲೀಸರು
  • ಶಿಕ್ಷಕಿ ಸುಹಾಸಿನಿ‌ ಮಿಸ್ಸಿಂಗ್ ಕೇಸ್‍ ಸಂಬಂಧಿಸಿದಂತೆ ಲವ್ ಜಿಹಾದ್ ಅನುಮಾನ ವ್ಯಕ್ತವಾಗಿತ್ತು
Love jihad: 7 ವರ್ಷದ ಮಗು ಬಿಟ್ಟು ನಾಪತ್ತೆಯಾಗಿದ್ದ ಶಿಕ್ಷಕಿ ಪತ್ತೆ, ಪೋಷಕರಿಗೆ ಒಪ್ಪಿಸಿದ ಪೊಲೀಸರು! title=
ರಾಯಚೂರಿನ ಶಿಕ್ಷಕಿ ಮಂತ್ರಾಲಯದಲ್ಲಿ ಪತ್ತೆ!

ರಾಯಚೂರು: 7 ವರ್ಷದ ಮಗುವನ್ನೂ ತೊರೆದು ಪ್ರಿಯಕರನ ಜೊತೆಗೆ ನಾಪತ್ತೆಯಾಗಿದ್ದಳು ಎನ್ನಲಾಗಿದ್ದ ರಾಯಚೂರಿನ ಶಿಕ್ಷಕಿ ಮಂತ್ರಾಲಯದಲ್ಲಿ ಪತ್ತೆಯಾಗಿದ್ದಾಳೆ. ‘ಜೀ ಕನ್ನಡ ನ್ಯೂಸ್’ ವರದಿ ಬೆನ್ನಲ್ಲೇ ಶಿಕ್ಷಕಿ ಸುಹಾಸಿನಿ ಯನ್ನು ಪೊಲೀಸರು ಠಾಣೆಗೆ ಕರೆತಂದಿದ್ದಾರೆ.

ರಾಯಚೂರಿನಲ್ಲಿ ಶಿಕ್ಷಕಿ ಸುಹಾಸಿನಿ‌ ಮಿಸ್ಸಿಂಗ್ ಕೇಸ್‍ಗೆ ಸಂಬಂಧಿಸಿದಂತೆ ಆಕೆಯ ತಾಯಿ ಲವ್ ಜಿಹಾದ್ ಅನುಮಾನ ವ್ಯಕ್ತಪಡಿಸಿದ್ದರು. ‘ಜೀ ಕನ್ನಡ  ನ್ಯೂಸ್’ ವರದಿ ಬೆನ್ನಲ್ಲೇ ಪೊಲೀಸರು ‌ಫುಲ್ ಅಲರ್ಟ್ ಆಗಿದ್ದರು. ಶಿಕ್ಷಕಿಯನ್ನು ಪತ್ತೆ ಹಚ್ಚಿ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಗೆ ಪೊಲೀಸರು ಕರೆತಮದಿದ್ದಾರೆ.  

ಇದೇ ಅಕ್ಟೋಬರ್ 20ರಂದು ಶಿಕ್ಷಕಿ ಸುಹಾಸಿನಿ ತರಕಾರಿ ವ್ಯಾಪಾರಿ ಸಲೀಂ ಎಂಬಾತನ ಜೊತೆಗೆ ನಾಪತ್ತೆಯಾಗಿದ್ದ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಶಿಕ್ಷಕಿಯನ್ನು ಪುಸಲಾಯಿಸಿ ಕರೆದೊದ್ದ ಹಿನ್ನೆಲೆ ಸಲೀಂ ವಿರುದ್ಧ ಲವ್ ಜಿಹಾದ್ ಆರೋಪ ಮಾಡಲಾಗಿತ್ತು. ಈ ಬಗ್ಗೆ ಅಜ್ಞಾತ ಸ್ಥಳದಲ್ಲಿಟ್ಟು ಶಿಕ್ಷಕಿ ಸುಹಾಸಿಯನಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಮಂತ್ರಾಲಯದಲ್ಲಿ ವಾಸವಿದ್ದ ಬಗ್ಗೆ ಸುಹಾಸಿನಿ ಹೇಳಿಕೆ ನೀಡಿದ್ದಾಳೆ. ಸಲೀಂ ಜೊತೆಗಿನ ಸ್ನೇಹದ ಬಗ್ಗೆಯೂ ಆಕೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.

ಇದನ್ನೂ ಓದಿ: ಅತಿವೇಗದ ಪರಿಣಾಮ ನಿಯಂತ್ರಣಕ್ಕೆ ಸಿಗದೆ ರಸ್ತೆಯಲ್ಲೇ ಪಲ್ಟಿಯಾದ ಟಾಟಾ ಏಸ್

ಸಲೀಂ ಬಗ್ಗೆ ಸುಹಾಸಿನಿಯಿಂದ ವಿಡಿಯೋ ರೆಕಾರ್ಡ್ ಮೂಲಕ‌ ಪೊಲೀಸರು‌ ಮಾಹಿತಿ ಕಲೆ ಹಾಕಿದ್ದಾರೆ. ಬಳಿಕ ಮುಚ್ಚಳಿಕೆ ಬರೆಸಿಕೊಂಡು ಶಿಕ್ಷಕಿಯನ್ನು ಪೋಷಕರಿಗೆ ಒಪ್ಪಿಸಲಾಗಿದೆ. ಈ ಹಿನ್ನೆಲೆ ಶಿಕ್ಷಕಿ ಸುಹಾಸಿನಿ ಮನೆಗೆ ಹಿಂದೂಪರ ಸಂಘಟನೆಗಳ ಸದಸ್ಯರು ಭೇಟಿ ನೀಡಿದ್ದಾರೆ. ಗುರುವಾರ ರಾತ್ರಿಯೇ ಮನೆಗೆ ಭೇಟಿ ನೀಡಿ ಶಿಕ್ಷಕಿಯ ಮನವೊಲಿಸಲು ಯತ್ನಿಸಲಾಗಿದೆ.

ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಕಾರ್ಯಕರ್ತರು, ‘ಮೊಬೈಲ್, ಫ್ರೆಂಡ್ ಶಿಪ್‍ಗಳ ಮೂಲಕ ಗಾಳ ಹಾಕುತ್ತಾರೆ. ಈ ರೀತಿಯ ಕೃತ್ಯ ಎಸಗಲು ಅವರದ್ದು ಒಂದು ಟೀಂ ಇರುತ್ತದೆ. ಮಹಿಳೆಯರ ವೀಕ್ ಪಾಯಿಂಟ್ ತಿಳಿದುಕೊಂಡು ಮೋಸ ಮಾಡುತ್ತಾರೆ. ಆರ್ಥಿಕವಾಗಿ, ಮಾನಸಿಕವಾಗಿ ವೀಕ್ ಆಗಿದ್ದಾರಾ..? ಅಂತೆಲ್ಲಾ ಸರ್ಚ್ ಮಾಡಿಯೇ ಈ ರೀತಿ ಕೃತ್ಯ ಎಸಗುತ್ತಾರೆ. ಹಿಂದೂ ಮಹಿಳೆಯರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು’ ಅಂತಾ ಹೇಳಿದ್ದಾರೆ.

ಇನ್ನು ಶಿಕ್ಷಕಿ ಸುಹಾಸಿನಿ ಮನೆ ಸೇರಿದ ಬಳಿಕ ತಾಯಿ ನಿರ್ಮಲಾ ಅವರು ಹಿಂದೂಪರ ಸಂಘಟನೆಗಳಿಗೆ ಧನ್ಯವಾದ ತಿಳಿಸಿದ್ದಾರೆ. ಪುನಃ ನಮ್ಮ ಮಗಳು ಮನೆಗೆ ಬಂದಿದ್ದು ಖುಷಿಯಾಗಿದೆ. ಮನೆಗೆ ಬಂದ ಬಳಿಕ ನಾವು ಯಾವುದೇ ವಿಚಾರವನ್ನು ಪ್ರಸ್ತಾಪಿಸಿಲ್ಲ. ಸುಹಾಸಿನಿ ಮಗ ಫುಲ್ ಖುಷಿಯಾಗಿದ್ದಾನೆ ಅಂತಾ ಅವರು ಹೇಳಿದ್ದಾರೆ.  

ಇದನ್ನೂ ಓದಿ: Bangalore Population: ‘10 ವರ್ಷಗಳಲ್ಲಿ ಬೆಂಗಳೂರಿನ ಜನಸಂಖ್ಯೆ ದುಪ್ಪಟ್ಟು’

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News