ಸಚಿವರಾಗಿ‌ 100 ದಿನದ 10 ಪ್ರಮುಖ ಸಾಧನೆ ಪಟ್ಟಿ ಬಿಡುಗಡೆ ಮಾಡಿದ ರಮೇಶ್ ಜಾರಕಿಹೊಳಿ

ಕೃಷ್ಣಾ ಮೇಲ್ದಂಡೆ ಯೋಜನೆಯ ಆಲಮಟ್ಟಿ ಜಲಾಶಯದ ಅಣೆಕಟ್ಟು ಎತ್ತರಿಸುವಿಕೆ. ನ್ಯಾಯಾಧಿಕರಣದಿಂದ ಆದೇಶ.  

Last Updated : May 25, 2020, 06:37 AM IST
ಸಚಿವರಾಗಿ‌ 100 ದಿನದ 10 ಪ್ರಮುಖ ಸಾಧನೆ ಪಟ್ಟಿ ಬಿಡುಗಡೆ ಮಾಡಿದ ರಮೇಶ್ ಜಾರಕಿಹೊಳಿ title=
File Image

ಬೆಂಗಳೂರು: ರಾಜ್ಯ ಜಲಸಂಪನ್ಮೂಲ ಸಚಿವರಾಗಿ ನೂರು ದಿನ ಪೂರೈಸಿರುವ ರಮೇಶ್ ಜಾರಕಿಹೊಳಿ (Ramesh Jarakiholi) ಅಧಿಕಾರ ವಹಿಸಿಕೊಂಡ ಬಳಿಕ ನೂರು‌ ದಿನದಲ್ಲಿ 10 ಪ್ರಮುಖ ಸಾಧನೆ ಮಾಡಿರುವುದಾಗಿ ಪಟ್ಟಿ ಬಿಡುಗಡೆ ಮಾಡಿದರೆ. ಅವುಗಳು ಕೆಳಗಿ‌ನಂತಿವೆ.

1. ಮಹದಾಯಿ (Mahadayi) ಕುಡಿಯುವ ನೀರಿನ ಯೋಜನೆಗೆ ಕೇಂದ್ರ ಸರ್ಕಾರದಿಂದ ಅನುಮೋದನೆ.
2. ಹೂಳು ತುಂಬಿರುವ ತುಂಗಭದ್ರಾ ಅಣೆಕಟ್ಟೆಗೆ ಸಮಾನಾಂತರವಾಗಿ ನವಲಿ ಎಂಬಲ್ಲಿ ಜಲಾಶಯ ನಿರ್ಮಿಸಲು ವಿಸ್ತೃತ ಯೋಜನಾ ವರದಿ ಸಿದ್ದಪಡಿಸಲು ಆಡಳಿತಾತ್ಮಕ ಅನುಮೋದನೆ.
3. ಎತ್ತಿನಹೊಳೆ (Ettinahole) ಯೋಜನೆಯ ಮೊದಲ ಹಂತ ಮುಂದಿನ ಮಳೆಗಾಲ ಆರಂಭದೊಳಗೆ ಪೂರ್ಣ ; ಭೂಸ್ವಾಧೀನಕ್ಕಾಗಿ ₹100 ಕೋಟಿ ರೂ. ಹಣ ಬಿಡುಗಡೆ.
4. ಭದ್ರಾ ಮೇಲ್ದಂಡೆ ಯೋಜನೆ : 2021 ರ ಮಳೆಗಾಲದ ಒಳಗೆ 60 ಕಿ‌ಮೀ ವರೆಗೆ ಪ್ರಾಯೋಗಿಕ ಚಾಲನೆ ; ಹಂತಹಂತವಾಗಿ ಯೋಜನೆ ಸಂಪೂರ್ಣಗೊಳಿಸುವ ಸಂಕಲ್ಪ.
5. ಕೃಷ್ಣಾ ಮೇಲ್ದಂಡೆ ಯೋಜನೆಯ ಆಲಮಟ್ಟಿ ಜಲಾಶಯದ ಅಣೆಕಟ್ಟು ಎತ್ತರಿಸುವಿಕೆ. ನ್ಯಾಯಾಧಿಕರಣದಿಂದ ಆದೇಶ.
6. ಭೂಸ್ವಾಧೀನಕ್ಕಾಗಿ ಏಕರೂಪದ ದರ ನಿಗದಿ.
7. ವಾಣಿವಿಲಾಸ ಸಾಗರದಿಂದ ಚಿತ್ರದುರ್ಗ ಜಿಲ್ಲೆಯ ಕೆರೆಗಳ ತುಂಬಿಸುವಿಕೆ.
8. ಇಲಾಖೆಯಲ್ಲಿ ಯೋಜನೆಗಳಿಗಾಗಿ ಮಾಡುತ್ತಿದ್ದ ವೆಚ್ಚದಲ್ಲಿ ಶಿಸ್ತು ತರುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದು, ಈ ಮೂಲಕ ಹಣ ಪೋಲಾಗುವುದನ್ನು ತಡೆಯಲಾಗುತ್ತಿದೆ.
9. ಮೈಕ್ರೋ ಇರಿಗೇಶನ್ ಮತ್ತು ಪಂಪ್ಸ್, ಮೋಟಾರ್ಸ್‌ಗಳ ನಿರ್ವಹಣೆಗಾಗಿ ಹೊಸ ನೀತಿ.
10. ಸಾಮರ್ಥ್ಯಯುಳ್ಳ ಯೋಜನೆಗಳಿಗೆ ಆದ್ಯತೆ.

Trending News