ಗ್ರಾಮೀಣ ಕಥನದ ಜಾಡು ಅರಿಯಲು ಯುವಜನರಿಗೆ ಗ್ರಾಮೀಣ ಇಂಟರ್ನ್ಶಿಪ್ ಕಾರ್ಯಕ್ರಮ

   

Last Updated : Jun 11, 2018, 11:45 PM IST
ಗ್ರಾಮೀಣ ಕಥನದ ಜಾಡು ಅರಿಯಲು ಯುವಜನರಿಗೆ ಗ್ರಾಮೀಣ ಇಂಟರ್ನ್ಶಿಪ್ ಕಾರ್ಯಕ್ರಮ title=
Photo courtesy:Facebook

ಯೂತ್ ಫಾರ್ ಸ್ವರಾಜ್ (Y4S) ನಿಮ್ಮನ್ನು ಸ್ವಾಗತಿಸುತ್ತದೆ.

ಗ್ರಾಮೀಣ ಭಾರತ ಈ ಹಿಂದೆ ಕಥೆ ಕಾದಂಬರಿಗಳಲ್ಲಿ ವರ್ಣಿಸುತ್ತಿದ್ದಂತಹ ರಮ್ಯ ಕಥನವಾಗಿ ಉಳಿದಿಲ್ಲ. ಬದಲಾಗಿ ಅದು ಪ್ರತಿದಿನವೂ ಹಲವು ಆತಂಕಗಳು ಮಧ್ಯ ಬದುಕುವಂತಾಗಿದೆ. ಕಾರಣ ಈಗ ಹಳ್ಳಿಯ ಬಹುತೇಕ ಸಂಪನ್ಮೂಲಗಳು ಖಾಸಗಿಯ ಸ್ವತ್ತುಗಳಾಗಿವೆ, ಬುಡುಕಟ್ಟು ಜನರು ಒಂದೆಡೆ ತಮ್ಮ ಹಾಡಿಗಳನ್ನು ಬಿಟ್ಟು ಗೂಳೆ ಹೋಗಬೇಕಾಗಿದೆ. ಇನ್ನೊಂದೆಡೆ ನವಉದಾರೀಕರಣದ ಮೂಲಕ ಬೆಳೆದು ಬಂದಂತಹ ಎಲ್ಲ ಬದಲಾವಣೆಗಳು ಈಗ ಗ್ರಾಮೀಣ ಭಾರತದಲ್ಲಿ ಕೃತಕ ಒತ್ತಡವನ್ನು ಸೃಷ್ಟಿಸಿವೆ.

ಇದರ ಭಾಗವಾಗಿಯೇ ರೈತರ ಭೂಮಿಯನ್ನು ಹೊಕ್ಕಂತಹ ಮಾನ್ಸಂಟೋದಂತಹ ಜಾಗತಿಕ ಕಂಪನಿಗಳು ಈಗ ಭೂಮಿಯನ್ನು ಬರಡಾಗಿ ಪರಿವರ್ತಿಸಿವೆ. ಇನ್ನೊಂದೆಡೆ ಕೃಷಿ ಬಿಕ್ಕಟ್ಟು ದಿನೇ ದಿನೇ ಅಧಿಕಗೊಳ್ಳುತ್ತಿದೆ. ಇದರ ಫಲವಾಗಿ ರೈತ ಬೆಳೆದ ಬೆಳೆಗಳಿಗೆ ಬೆಲೆ ಸಿಗದೆ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರಂತರವಾಗಿ ಹೆಚ್ಚುತ್ತಿದೆ. 

ಇಂತಹ ಹತ್ತು ಹಲವು ಕಥನಗಳಿಗೆ ಉತ್ತರದಾಯಿಯಾಗುವಂತಹ ಚಿಂತನೆಗಳು ನಮ್ಮ ಮಧ್ಯ ವೃದ್ದಿಗೊಳಿಸುವ ನಿಟ್ಟಿನಲ್ಲಿ ಯೂತ್ ಫಾರ್ ಸ್ವರಾಜ್ ಸಂಘಟನೆ 2016 ರಿಂದಲೂ ಮಾಡುತ್ತಿದೆ. ಅದರ ಭಾಗವಾಗಿ ಈ ಬಾರಿಯು ಸಹಿತ ಗ್ರಾಮೀಣ ಭಾರತದ ಜಾಡು ಹಿಡಿದು ಅಲ್ಲಿ ಹುಟ್ಟುವ ಪ್ರರ್ಶ್ನೆಗಳಿಗೆ ಉತ್ತರ ಹುಡುಕುವಂತಹ ಸಣ್ಣ ಪ್ರಯತ್ನಕ್ಕೆ ಮತ್ತೆ ಚಾಲನೆ ನೀಡಿದ್ದಾರೆ. ಆ ಮೂಲಕ ಈ ಗ್ರಾಮೀಣ ಇಂಟರ್ನ್ಶಿಪ್ ಕಾರ್ಯಕ್ರಮದ ಮೂಲಕ ಜ್ವಲಂತ ವಿಷಯಗಳಿಗೆ ಮುಖಾಮುಖಿಯಾಗುವಂತಹ ಪ್ರಕ್ರಿಯೆಗೆ ಮತ್ತೆ ಯುವಜನರು ಮತ್ತು ವಿದ್ಯಾರ್ಥಿಗಳು ಕೈಜೋಡಿಸಬೇಕಾಗಿದೆ.

ಬ್ಯಾಚಗಳು :

2018 ರ ಜೂನ್ 15 ರಿಂದ 21ರವರೆಗೆ
2018 ರ ಜೂನ್ 24 ರಿಂದ 29 ರವರೆಗೆ

ಹೆಚ್ಚಿನ ಮಾಹಿತಿಗಾಗಿ, ಸಂಪರ್ಕಿಸಿ:

ಕೃಷ್ಣಮೂರ್ತಿ : 8884869602
ಮಹೇಶ್ ದೇಶಪಾಂಡೆ :  9743372486

 

 

Trending News