ಸಂವಿಧಾನವನ್ನು ರಕ್ಷಿಸಲು ತ್ಯಾಗವನ್ನು ಮಾಡಬೇಕಾಗುತ್ತದೆ- ಮಲ್ಲಿಕಾರ್ಜುನ್ ಖರ್ಗೆ

    

Last Updated : Jun 9, 2018, 07:15 PM IST
ಸಂವಿಧಾನವನ್ನು ರಕ್ಷಿಸಲು ತ್ಯಾಗವನ್ನು ಮಾಡಬೇಕಾಗುತ್ತದೆ- ಮಲ್ಲಿಕಾರ್ಜುನ್ ಖರ್ಗೆ  title=

ಬೆಂಗಳೂರು: ಕೆಲವು ಸನ್ನಿವೇಶಗಳಲ್ಲಿ ಪ್ರಜಾಪ್ರಬುತ್ವ ಮತ್ತು ಸಂವಿಧಾನವನ್ನು ರಕ್ಷಿಸಲು ತ್ಯಾಗವನ್ನು ಮಾಡಬೇಕಾಗುತ್ತದೆ ಎಂದು ಲೋಕಸಭೆಯಲ್ಲಿನ ಕಾಂಗ್ರೆಸ್ ನ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅಭಿಪ್ರಾಯಪಟ್ಟರು.  

ಕರ್ನಾಟಕದ ಕಾಂಗ್ರೆಸ್ ಪಕ್ಷದಲ್ಲಿ ಸಚಿವ ಸಂಪುಟದ ಸ್ಥಾನಮಾನದ ವಿಚಾರವಾಗಿ ಎದ್ದಿರುವ ಭಿನ್ನಮತದ ಕುರಿತು ಖರ್ಗೆ" ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುವ ನಿಟ್ಟಿನಲ್ಲಿ ನಾವು ತ್ಯಾಗ ಮಾಡಬೇಕಾಗುತ್ತದೆ. ಕೆಲವು ಪಕ್ಷದ ಸದಸ್ಯರು ಅಸಮಾಧಾನಗೊಂಡಿದ್ದಾರೆ. ಅವರ ಜೊತೆ ಹೈಕಮಾಂಡ್ ತನ್ನ ಪ್ರತಿನಿಧಿಗಳ ಮೂಲಕ  ಮತಾನಾಡುತ್ತದೆ ಎಂದು ತಿಳಿಸಿದರು.

"ಅವರೆಲ್ಲರಿಗೂ ಈ ನಿರ್ಧಾರದ ಕುರಿತಾಗಿ ಗೊತ್ತಿದೆ ಅವರೇ ಹೇಳುವಂತೆ ತಾವು ಪಕ್ಷಕ್ಕೆ ನಿಷ್ಟರಾಗಿದ್ದು ಪಕ್ಷ ಬಿಡುವ ಯಾವುದೇ ಸಾಧ್ಯತೆ ಇಲ್ಲ ಆದರೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು" ಎಂದು ಖರ್ಗೆ ಅಭಿಪ್ರಾಯಪಟ್ಟರು.

Trending News