'ಬಟ್ಟೆ ವ್ಯಾಪಾರದಲ್ಲಾದರೂ ಯಶಸ್ಸು ಸಿಗಲಿ' - ಶ್ರೀ ರಾಮುಲು ಹಾರೈಕೆ

ನಮ್ಮ ಪಕ್ಷ ಬಿಡಿ, 90 ಜೊತೆ ಬಟ್ಟೆಗಳಲ್ಲಿ ನಿಮ್ಮ ಪಕ್ಷದ ಹಿರಿಯ ತಲೆಗಳಾದ ಮೇಟಿಗೆ ಮತ್ತು ಅಭಿಷೇಕ್ ಮನು ಸಿಂಘ್ವಿಗೆ  ಎಷ್ಟು ಕೊಟ್ಟಿದ್ದೀರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಎಂದು  ಶ್ರೀ ರಾಮುಲು ಪ್ರಶ್ನಿಸಿದ್ದಾರೆ. 

Written by - Ranjitha R K | Last Updated : Mar 22, 2021, 01:14 PM IST
  • ಮುಂದುವರಿಯುತ್ತಲೇ ಇದೆ ಬಿಜೆಪಿ ಕಾಂಗ್ರೆಸ್ ಟ್ವೀಟ್ ವಾರ್
  • ಸಿದ್ದರಾಮಯ್ಯ ಟ್ವೀಟ್ ಗೆ ಶ್ರೀ ರಾಮುಲು ಟಾಂಗ್
  • 'ಬಟ್ಟೆ ವ್ಯಾಪಾರದಲ್ಲಾದರೂ ಯಶಸ್ಸು ಸಿಗಲಿ' ಎಂದು ಹಾರೈಕೆ
'ಬಟ್ಟೆ ವ್ಯಾಪಾರದಲ್ಲಾದರೂ ಯಶಸ್ಸು ಸಿಗಲಿ' - ಶ್ರೀ ರಾಮುಲು ಹಾರೈಕೆ  title=
ಸಿದ್ದರಾಮಯ್ಯ ಟ್ವೀಟ್ ಗೆ ಶ್ರೀ ರಾಮುಲು ಟಾಂಗ್ (file photo)

ಬೆಂಗಳೂರು :  ಬಿಜೆಪಿ  ಕಾಂಗ್ರೆಸ್ (Congress) ನಡುವೆ ಟ್ವೀಟ್ ವಾರ್ ನಡೆಯುತ್ತಲೇ ಇದೆ. ನಳಿನ್ ಕುಮಾರ್ ಕಟೀಲ್ ಅವರಿಗೂ ಒಂದೆರಡು ಜೊತೆ ಬಟ್ಟೆ ದಾನ ಮಾಡ್ತೀನಿ ಎಂದಿರುವ ಸಿದ್ದರಾಮಯ್ಯ (Siddaramaiah) ಹೇಳಿಕೆಗೆ ಇದೀಗ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಉತ್ತರಿಸಿದ್ದಾರೆ. ಟ್ವೀಟ್ (Tweet) ಮಾಡುವ ಮೂಲಕ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದಾರೆ.

ನಮ್ಮ ಪಕ್ಷ ಬಿಡಿ, 90 ಜೊತೆ ಬಟ್ಟೆಗಳಲ್ಲಿ ನಿಮ್ಮ ಪಕ್ಷದ ಹಿರಿಯ ತಲೆಗಳಾದ ಮೇಟಿಗೆ ಮತ್ತು ಅಭಿಷೇಕ್ ಮನು ಸಿಂಘ್ವಿಗೆ (Abhishek Manu Singhvi) ಎಷ್ಟು ಕೊಟ್ಟಿದ್ದೀರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ (Siddaramaiah)ಎಂದು ಶ್ರೀ ರಾಮುಲು  ಪ್ರಶ್ನಿಸಿದ್ದಾರೆ. 

ಇದನ್ನೂ ಓದಿ :  19 ಸಿಡಿ ಇದೆಯಂತೆ, ಎಲ್ಲವೂ ಹಿಡಿತದಲ್ಲಿರಲಿ - ಸಿದ್ದರಾಮಯ್ಯ ಎಚ್ಚರಿಕೆ

ಚಾಮುಂಡೇಶ್ವರಿ ಕ್ಷೇತ್ರದಿಂದ ಓಡಿ ಹೋದ ನಾಯಕನಿಗೆ ಜನತೆ, ಸ್ವಂತ ಪಕ್ಷವೇ ಕೈ ಹಿಡಿಯಲಿಲ್ಲ. ಬಟ್ಟೆ ವ್ಯಾಪಾರದಲ್ಲಾದರೂ ಯಶಸ್ಸು ಕಾಣಲೆಂದು ಹಾರೈಸುತ್ತೇನೆ ಎಂದು ಶ್ರೀರಾಮುಲು (Sriramulu) ಹೇಳಿದ್ದಾರೆ. 

ಎಲ್ಲೆಲ್ಲೋ ಹೋಗಿ ಬಟ್ಟೆಬಿಚ್ಚಿ ಮರ್ಯಾದೆ ಕಳೆಯುತ್ತಿರುವ ಬಿಜೆಪಿ (BJP)  ನಾಯಕರಿಗೆ ದಾನ ಮಾಡೋಣ ಎಂದು 90 ಜೊತೆ ಬಟ್ಟೆ ಖರೀದಿ ಮಾಡಿದ್ದೇನೆ. ಬೇಕಿದ್ದರೆ ನಳಿನ್ ಕುಮಾರ್ ಕಟೀಲ್ ಅವರಿಗೂ ಒಂದೆರಡು ಜೊತೆ ಬಟ್ಟೆ ದಾನ ಮಾಡ್ತೀನಿ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು. ಅಲ್ಲದೆ ಇನ್ನೂ 19 ಸಿಡಿ (CD) ಇದೆಯಂತೆ, ಎಲ್ಲವೂ ಹಿಡಿತದಲ್ಲಿರಲಿ, ನಾಲಗೆ ಕೂಡಾ ಎಂದಿದ್ದರು.  

ಇದನ್ನೂ ಓದಿ :  Lockdown: ರಾಜ್ಯದಲ್ಲಿ ಸೆಮಿ ಲಾಕ್‌ಡೌನ್‌ ಬಗ್ಗೆ ಆರೋಗ್ಯ ಸಚಿವರು ಹೇಳಿದ್ದೇನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News