ಫೆಬ್ರುವರಿ 27 ರಿಂದ ಸ್ವರಾಜ್ ಇಂಡಿಯಾ ಪಕ್ಷದ ಯೋಗೇಂದ್ರ ಯಾದವ್ ರಿಂದ ರಾಜ್ಯ ಪ್ರವಾಸ

     

Last Updated : Feb 10, 2018, 12:04 PM IST
ಫೆಬ್ರುವರಿ 27 ರಿಂದ ಸ್ವರಾಜ್ ಇಂಡಿಯಾ ಪಕ್ಷದ ಯೋಗೇಂದ್ರ ಯಾದವ್ ರಿಂದ ರಾಜ್ಯ ಪ್ರವಾಸ title=

ಬೆಂಗಳೂರು: ಪರ್ಯಾಯ ರಾಜಕಾರಣದ ಆಶಯದೊಂದಿಗೆ ಚುನಾವಣಾ ರಾಜಕೀಯಕ್ಕೆ ದಾಪುಗಾಲು ಇಟ್ಟಿರುವ ಸ್ವರಾಜ ಇಂಡಿಯಾ ಪಕ್ಷ ಈ ಬಾರಿ ಕರ್ನಾಟಕದಲ್ಲಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ.

ಈ ಹಿನ್ನಲೆಯಲ್ಲಿ ಚುನಾವಣೆಗೆ ಪೂರ್ವಭಾವಿಯಾಗಿ ಪಕ್ಷದ ರೂಪುರೇಷೆಗಳನ್ನು ಸಿದ್ದಪಡಿಸಲು ಸ್ವರಾಜ್ ಇಂಡಿಯಾ ಪಕ್ಷದ ರಾಷ್ಟ್ರೀಯ ನಾಯಕರಾದ ಯೋಗೇಂದ್ರ ಯಾದವ್ ರವರು ಇದೆ ಫೆಬ್ರುವರಿ 27 ರಿಂದ ಮಾರ್ಚ್ 1 ರವರೆಗೆ ಮೂರು ದಿನಗಳ ರಾಜ್ಯ ಪ್ರವಾಸವನ್ನು ಕೈಗೊಳ್ಳಲಿದ್ದಾರೆ. ಇದೆ ಸಂದರ್ಭದಲ್ಲಿ ಮೈಸೂರಿನಲ್ಲಿ ನಡೆಯುವ ರೈತ ಸಂಘದ ನಾಯಕರಾಗಿದ್ದ ಪ್ರೊ,ಎಂ,ಡಿ ನಂಜುಂಡಸ್ವಾಮಿಯವರ ಸ್ಮರಣೆಯ ಕಾರ್ಯಕ್ರಮದಲ್ಲಿಯೂ ಕೂಡಾ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಸ್ವರಾಜ ಇಂಡಿಯಾ ಪಕ್ಷದ ಮೂಲಗಳು ತಿಳಿಸಿವೆ.

ಯೋಗೇಂದ್ರ ಯಾದವ್ ಮೂರು ದಿನಗಳ ರಾಜ್ಯ ಪ್ರವಾಸ ಪಟ್ಟಿ
 
27 ಫೆಬ್ರುವರಿ - ಬೆಂಗಳೂರಿನ ಕಚೇರಿಯ ಉದ್ಘಾಟನೆ, ಪ್ರಣಾಳಿಕೆ ಬಿಡುಗಡೆ 
28 ಫೆಬ್ರುವರಿ  - ತುಮಕೂರು ಜಿಲ್ಲಾ ಸಮಿತಿಯ ರಚನೆ (ಖಚಿತವಾಗಿಲ್ಲ)
1 ಮಾರ್ಚ್ - ಮೈಸೂರು. ಪ್ರೊ ನಂಜುಂಡಸ್ವಾಮಿ ಅವರ ನೆನಪಿನಲ್ಲಿ ಕಾರ್ಯಕ್ರಮ

 

Trending News