The Kerala Story: ದಿ ಕೇರಳ ಸ್ಟೋರಿ ಸಿನಿಮಾ ವೀಕ್ಷಣೆಗಾಗಿ ಕ್ಲಾಸ್ ಸಮಯ ಬದಲಾವಣೆ ಮಾಡಿ ಆದೇಶಿಸಿದ್ದ ಪ್ರಿನ್ಸಿಪಾಲ್..!

The Kerala Story: ದಿ ಕೇರಳ ಸ್ಟೋರಿ ಸಿನಿಮಾ ವೀಕ್ಷಣೆಗಾಗಿ ಕ್ಲಾಸ್ ಸಮಯ ಬದಲಾವಣೆ ಮಾಡಲು ಪ್ರಿನ್ಸಿಪಾಲ್ ಆದೇಶಿಸಿದ ಘಟನೆ  ಇಲಕಲ್ ನ ವಿಜಯ ಮಹಾಂತೇಶ್ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ನಲ್ಲಿ ನಡೆದಿದೆ.

Written by - Manjunath N | Last Updated : May 25, 2023, 04:14 PM IST
  • ಇದಾದ ನಂತರ ಇಲಕಲ್ ನಗರದ ಶ್ರೀನಿವಾಸ್ ಟಾಕೀಜ್ ನಲ್ಲಿ ಉಚಿತವಾಗಿ ದಿ ಕೇರಳ ಸ್ಟೋರಿ ಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು
  • ಈ ಆದೇಶದ ಪ್ರತಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಪ್ರಿನ್ಸಿಪಾಲ್ ಕ್ಷಮೆಕೋರಿ ಆದೇಶವನ್ನು ಹಿಂಪಡೆದಿದ್ದಾರೆ.
The Kerala Story: ದಿ ಕೇರಳ ಸ್ಟೋರಿ ಸಿನಿಮಾ ವೀಕ್ಷಣೆಗಾಗಿ ಕ್ಲಾಸ್ ಸಮಯ ಬದಲಾವಣೆ ಮಾಡಿ ಆದೇಶಿಸಿದ್ದ ಪ್ರಿನ್ಸಿಪಾಲ್..! title=

ಬಾಗಲಕೋಟೆ: ದಿ ಕೇರಳ ಸ್ಟೋರಿ ಸಿನಿಮಾ ವೀಕ್ಷಣೆಗಾಗಿ ಕ್ಲಾಸ್ ಸಮಯ ಬದಲಾವಣೆ ಮಾಡಲು ಪ್ರಿನ್ಸಿಪಾಲ್ ಆದೇಶಿಸಿದ ಘಟನೆ  ಇಲಕಲ್ ನ ವಿಜಯ ಮಹಾಂತೇಶ್ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ನಲ್ಲಿ ನಡೆದಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಈಗ ಆದೇಶ ಈಗ ವೈರಲ್ ಆಗಿರುವ ಬೆನ್ನಲ್ಲೇ ಕಾಲೇಜಿನ ಪ್ರಿನ್ಸಿಪಾಲ್ ಕ್ಷಮೆಕೋರಿ ಆದೇಶವನ್ನು ಹಿಂಪಡೆದಿದ್ದಾರೆ.ಕಾಲೇಜು ವಿದ್ಯಾರ್ಥಿಗಳಿಗೆ ದಿ ಕೇರಳ  ಸ್ಟೋರಿ ಸಿನಿಮಾ ವೀಕ್ಷಣೆಗಾಗಿ ಕ್ಲಾಸ್ ಗಳ ಅವಧಿ ಬದಲಾವಣೆ ಮಾಡಿ ನೋಟಿಸ್  ಜಾರಿ ಮಾಡಿದ್ದರು.No description available.

ಇದನ್ನೂ ಓದಿ- Indira Canteens: ಶೀಘ್ರವೇ ಇಂದಿರಾ ಕ್ಯಾಂಟೀನ್ಗಳಲ್ಲಿ ಅತ್ಯುತ್ತಮ ಆಹಾರ- ಕಾಂಗ್ರೆಸ್

ಇದಾದ ನಂತರ ಇಲಕಲ್ ನಗರದ ಶ್ರೀನಿವಾಸ್ ಟಾಕೀಜ್ ನಲ್ಲಿ ಉಚಿತವಾಗಿ ದಿ ಕೇರಳ ಸ್ಟೋರಿ ಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.ಈ ಹಿನ್ನೆಲೆಯಲ್ಲಿ ದಿನಾಂಕ 24 ರಂದು ಬೆಳಗ್ಗೆ 9 ರಿಂದ 11 ಗಂಟೆಯವರೆಗೆ ತರಗತಿಗಳನ್ನು ನಡೆಸಿ ಮಧಾಹ್ನ 12 ರಿಂದ ಮೂರು ಗಂಟೆಯ ಶೋ ಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕಾಲೇಜಿನ ಪ್ರಿನ್ಸಿಪಾಲ್ ಡಾ.ಕೆ.ಸಿ ದಾಸ್ ಅವರು ಆದೇಶ ಹೊರಡಿಸಿದ್ದರು.ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಈ ಆದೇಶದ ಪ್ರತಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಪ್ರಿನ್ಸಿಪಾಲ್ ಕ್ಷಮೆಕೋರಿ ಆದೇಶವನ್ನು ಹಿಂಪಡೆದಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News