ಬಿಗ್ ರಿಲೀಫ್! ಈ ವಾರವೇ ಅಂತ್ಯಗೊಳ್ಳುತ್ತಾ ನೈಟ್ ಮತ್ತು ವೀಕೆಂಡ್ ಕರ್ಫ್ಯೂ?

BBMP Commissioner Gaurav Gupta: ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಸೇರಿದಂತೆ ಈಗಿರುವ ಎಲ್ಲಾ ನಿರ್ಬಂಧಗಳನ್ನು ಈ ವಾರಕ್ಕೆ ಅಂತ್ಯಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ.

Edited by - Zee Kannada News Desk | Last Updated : Jan 18, 2022, 04:15 PM IST
  • ಕೊರೊನಾ ರೋಗ ತಡೆಯಲು ವ್ಯವಸ್ಥೆ ಸದೃಢವಾಗಿದೆ
  • ಮಾಸ್ಕ್ ಆಚರಣೆ ಮಾಡಲೇಬೇಕು, ಔಷಧಿ ಕೊರತೆ ಕಾಣ್ತಾಯಿಲ್ಲ
  • ಈ ಹಿನ್ನೆಲೆ ಒಂದು ವಾರಕ್ಕಷ್ಟೇ ಈಗಿರುವ ರೂಲ್ಸ್ ಸಾಕು
  • ನೈಟ್ , ವೀಕೆಂಡ್ ಕರ್ಫ್ಯೂ ಈ ವಾರಕ್ಕೆ ಅಂತ್ಯಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ
  • ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿಕೆ
ಬಿಗ್ ರಿಲೀಫ್! ಈ ವಾರವೇ ಅಂತ್ಯಗೊಳ್ಳುತ್ತಾ ನೈಟ್ ಮತ್ತು ವೀಕೆಂಡ್ ಕರ್ಫ್ಯೂ?  title=
ವೀಕೆಂಡ್ ಕರ್ಫ್ಯೂ

ಬೆಂಗಳೂರು: ಕೋವಿಡ್-19 (Covid19) ಮೂರನೇ ಅಲೆ ಅತಿ ವೇಗವಾಗಿ ಹರಡುತ್ತಿದ್ದು, ವಿಶ್ವಾದ್ಯಂತ ಪ್ರತಿ ನಿತ್ಯ ಲಕ್ಷಾಂತರ ಒಮಿಕ್ರಾನ್ ರೂಪಾಂತರಿ ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿವೆ. ಆದರೆ ತಜ್ಞರು ಹೇಳುವ ಪ್ರಕಾರ ಜನವರಿ 25ರ ನಂತರ ಕೋವಿಡ್  ಪ್ರಕರಣಗಳ ಸಂಖ್ಯೆ ಕಡಿಮೆ ಆಗುವ ಸಾಧ್ಯತೆ ಇದೇ ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆ ಇದೆ ವಾರಕ್ಕೆ ಕೊರೊನಾ (Corona) ನಿರ್ಬಂಧಗಳು ಅಂತ್ಯಗೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ. 

ಈ ಬಗ್ಗೆ ಮಾತನಾಡಿರುವ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ (Gaurav Gupta), ಸದ್ಯ ಇರುವ  ನೈಟ್ ಕರ್ಫ್ಯೂ ರೂಲ್ಸ್ ಅನ್ನು ಒಂದು ವಾರ ಪಾಲಿಸಬೇಕು. ಒಂದು ವಾರ ಮುಂದುವರೆಸಿದರೆ ಸಾಕು ಎಂದು ನಿನ್ನೆ ಸಭೆಯಲ್ಲಿ ತೀರ್ಮಾನ ಆಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Covid-19: ಜ. 25ರ ನಂತರ ಕೋವಿಡ್ ಸಂಖ್ಯೆಯಲ್ಲಿ ಇಳಿಮುಖ ಸಾಧ್ಯತೆ

23 ಸಾವಿರ ಸರಾಸರಿಯಲ್ಲಿ ಹೊಸ ಕೇಸ್ ಗಳು (New Corona cases) ಬರುತ್ತಿವೆ. ಈಗ ಪ್ರತಿದಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಎರಡನೇ ಅಲೆಗಿಂತ ಸೋಂಕು ಹರಡುವುದು ತೀವ್ರವಾಗಿದೆ. ಈಗಿನ ಕೊರೊನಾ ರೋಗ ಲಕ್ಷಣ ತೀವ್ರತೆ ಇಲ್ಲ ಎಂದು ಹೇಳಿದರು.

ಕಂಟ್ರೋಲ್ ರೂಂ‌ನಿಂದ ಎಲ್ಲಾ  ಮಾನಿಟರ್ ಮಾಡುತ್ತಿದ್ದೇವೆ. ಖಾಸಗಿ ಆಸ್ಪತ್ರೆಗಳಲ್ಲೂ ದಾಖಲಾಗಿರುವ ಸೋಂಕಿತರಿಗೆ ಯಾವುದೇ ಸಮಸ್ಯೆ ಇಲ್ಲ. ಸೋಂಕಿನ ಸಂಖ್ಯೆ ಹೆಚ್ಚಿದ್ರೂ 1600 ಮಂದಿ ಮಾತ್ರ ಹಾಸ್ಪಿಟಲ್‌ ನಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರ್ಕಾರದ ಕಡೆಯಿಂದ 600 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 1000 ಜನ ಸ್ವಂತ ಖರ್ಚಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಂದು ತಿಳಿಸಿದರು.

ಕೊರೊನಾ ರೋಗ ತಡೆಯಲು ವ್ಯವಸ್ಥೆ ಸದೃಢವಾಗಿದೆ. ಮಾಸ್ಕ್ (Mask) ಆಚರಣೆ ಮಾಡಲೇಬೇಕು. ಔಷಧಿ ಕೊರತೆ ಕಾಣ್ತಾಯಿಲ್ಲ. ಈ ಹಿನ್ನೆಲೆ ಒಂದು ವಾರಕ್ಕಷ್ಟೇ ಈಗಿರುವ ರೂಲ್ಸ್ ಸಾಕು ಎಂದರು. 

ನೈಟ್ ಕರ್ಫ್ಯೂ (Night Curfew), ವೀಕೆಂಡ್ ಕರ್ಫ್ಯೂ (Weekend curfew) ಸೇರಿದಂತೆ ಈಗಿರುವ ಎಲ್ಲಾ ನಿರ್ಬಂಧಗಳನ್ನು ಈ ವಾರಕ್ಕೆ ಅಂತ್ಯಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ. 

ಇದನ್ನೂ ಓದಿ: "ಬಾಬ್ರಿ ಮಸೀದಿ ರೀತಿ ಶ್ರೀರಂಗಪಟ್ಟಣದ ಮಸೀದಿ ಒಡೆಯಬೇಕು" ಎಂದ ಕಾಳಿ ಸ್ವಾಮೀಜಿ ಬಂಧನ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News