ನಗರಸಭೆ ಸದಸ್ಯರಿಗೆ ಚಿನ್ನ, ಬೆಳ್ಳಿ, 1 ಲಕ್ಷ ರೂ. ನಗದು: ದೀಪಾವಳಿಗೆ ಸಚಿವ ಆನಂದ್ ಸಿಂಗ್ ಭರ್ಜರಿ ಗಿಫ್ಟ್!

ಹೊಸಪೇಟೆ ನಗರಸಭೆ ಸದಸ್ಯರು, ವಿಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರಿಗೆ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ದೀಪಾವಳಿ ಹಬ್ಬದ ಬಂಪರ್‌ ಕೊಡುಗೆ ನೀಡಿದ್ದಾರೆ. ಹೊಸಪೇಟೆ ನಗರಸಭೆ ಮತ್ತು ಕಮಲಾಪುರ ಪಟ್ಟಣ ಪಂಚಾಯತಿ ಮತ್ತು 10 ಗ್ರಾಮ ಪಂಚಾಯ್ತಿಗಳ ಚುನಾಯಿತ ಸದಸ್ಯರಿಗೆ ಸಚಿವ ಆನಂದ್ ಸಿಂಗ್ ಗಿಫ್ಟ್ ನೀಡಿದ್ದಾರೆ.

Written by - Puttaraj K Alur | Last Updated : Oct 23, 2022, 09:41 AM IST
  • ವಿಜಯನಗರ ವಿಧಾನಸಭಾ ಕ್ಷೇತ್ರದ ಚುನಾಯಿತ ಸದಸ್ಯರಿಗೆ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್‍ರಿಂದ ದೀಪಾವಳಿ ಗಿಫ್ಟ್
  • ಹೊಸಪೇಟೆ ನಗರಸಭೆ, ಕಮಲಾಪುರ ಪಪಂ ಮತ್ತು 10 ಗ್ರಾಪಂಗಳ ಚುನಾಯಿತ ಸದಸ್ಯರಿಗೆ ಗಿಫ್ಟ್
  • ನಗರಸಭೆ & ಪಪಂ ಸದಸ್ಯರಿಗೆ 144 ಗ್ರಾಂ ಚಿನ್ನ, ಲಕ್ಷಕ್ಕೂ ಹೆಚ್ಚು ಹಣ, ರೇಷ್ಮೆ ಬಟ್ಟೆ, ಡ್ರೈ ಫ್ರೂಟ್ಸ್ ಕೊಡುಗೆ
ನಗರಸಭೆ ಸದಸ್ಯರಿಗೆ ಚಿನ್ನ, ಬೆಳ್ಳಿ, 1 ಲಕ್ಷ ರೂ. ನಗದು: ದೀಪಾವಳಿಗೆ ಸಚಿವ ಆನಂದ್ ಸಿಂಗ್ ಭರ್ಜರಿ ಗಿಫ್ಟ್!  title=
ಸಚಿವ ಆನಂದ್ ಸಿಂಗ್‍ರಿಂದ ದೀಪಾವಳಿ ಗಿಫ್ಟ್!

ಹೊಸಪೇಟೆ: ಹೊಸಪೇಟೆ ನಗರಸಭೆ ಸದಸ್ಯರು, ವಿಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರಿಗೆ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ದೀಪಾವಳಿ ಹಬ್ಬದ ಬಂಪರ್‌ ಕೊಡುಗೆ ನೀಡಿದ್ದಾರೆ. ಹೊಸಪೇಟೆ ನಗರಸಭೆ ಮತ್ತು ಕಮಲಾಪುರ ಪಟ್ಟಣ ಪಂಚಾಯತಿ ಮತ್ತು 10 ಗ್ರಾಮ ಪಂಚಾಯ್ತಿಗಳ ಚುನಾಯಿತ ಸದಸ್ಯರಿಗೆ ಸಚಿವ ಆನಂದ್ ಸಿಂಗ್ ಗಿಫ್ಟ್ ನೀಡಿದ್ದಾರೆ.

ಇದನ್ನೂ ಓದಿ: ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ, ರಾಜ್ಯ ಕುರುಬರ ಸಂಘದ ನಿರ್ದೇಶಕ ಪಿ.ರಾಜಕುಮಾರ ನಿಧನ

ನಗರಸಭೆ ಮತ್ತು ಪಟ್ಟಣ ಪಂಚಾಯ್ತಿ ಸದಸ್ಯರಿಗೆ ತಲಾ 1 ಲಕ್ಷ ರೂ. ನಗದು, 144 ಗ್ರಾಂ ಚಿನ್ನ, 1 ಕೆಜಿ ಬೆಳ್ಳಿ, ರೇಷ್ಮೆ ಸೀರೆ, ಪಂಚೆ, ಅಂಗಿ, ಮುತ್ತಿನ ಹಾರ ಹಾಗೂ ಡ್ರೈ ಫ್ರೂಟ್ಸ್ ಡಬ್ಬಿ ಒಳಗೊಂಡ ಕಿಟ್‌ ನೀಡಿದ್ದಾರೆ.

ಅದೇ ರೀತಿ ಹೊಸಪೇಟೆಯ ಎಲ್ಲಾ ಗ್ರಾಮ ಪಂಚಾಯತಿ ಸದಸ್ಯರಿಗೆ ಸಚಿವ ಆನಂದ್ ಸಿಂಗ್ ದೀಪಾವಳಿ ಕೊಡುಗೆ ನೀಡಿದ್ದಾರೆ. ಪಂಚಾಯಯ್ತಿಯ ಸದಸ್ಯರಿಗೆ ತಲಾ 27 ಸಾವಿರ ರೂ. ನಗದು, 500 ಗ್ರಾಂ ಬೆಳ್ಳಿ, ರೇಷ್ಮೆ ಸೀರೆ, ಪಂಚೆ, ರೇಷ್ಮೆ ಶರ್ಟ್ ಹಾಗೂ ಮುತ್ತಿನ ಹಾರ ಮತ್ತು ಡ್ರೈಫೂರ್ಟ್ಸ್ ಕಿಟ್‍ಅನ್ನು ಕೊಡುಗೆ ನೀಡಿದ್ದಾರೆ.

ಗಿಫ್ಟ್ ಜೊತೆಗೆ ಸಚಿವ ಆನಂದ್ ಸಿಂಗ್ ಅವರು ದೀಪಾವಳಿ ಹಬ್ಬದ ಶ್ರೀ ಲಕ್ಷ್ಮಿ ಪೂಜಾ ಆಮಂತ್ರಣ ಪತ್ರಿಕೆ ಎಂದು ಬರೆದಿರುವ ಆಹ್ವಾನ ಪತ್ರಿಕೆಯನ್ನೂ ನೀಡಿದ್ದಾರೆ. ಸಚಿವರು ನೀಡಿರುವ ಗಿಫ್ಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಇದನ್ನೂ ಓದಿ: ವಿಧಾ‌ನಸಭೆಯ ಉಪ ಸಭಾಧ್ಯಕ್ಷ ಆನಂದ ಚಂದ್ರಶೇಖರ ಮಾಮನಿ ವಿಧಿವಶ

ಮಾಹಿತಿ ಪ್ರಕಾರ, ಹೊಸಪೇಟೆ ನಗರಸಭೆಯಲ್ಲಿ 35 ಸದಸ್ಯರು, 5 ಜನ ನಾಮನಿರ್ದೇಶಿತ ಸದಸ್ಯರಿದ್ದಾರೆ. ತಾಲೂಕಿನಲ್ಲಿ ಒಟ್ಟು 14 ಗ್ರಾಮ ಪಂಚಾಯಿತಿಗಳಿದ್ದು, 282 ಸದಸ್ಯರಿದ್ದಾರೆ. ವಿಜಯನಗರ ಕ್ಷೇತ್ರ ವ್ಯಾಪ್ತಿಯಲ್ಲಿ 10 ಗ್ರಾಮ ಪಂಚಾಯ್ತಿಯ 182 ಸದಸ್ಯರಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News