Vijayapura: ಚಾಲಕನಿಲ್ಲದ ಕಾರಣ ಟಾಂಗಾದಲ್ಲಿ ಪಾಲಿಕೆಗೆ ಬಂದ ಮೇಯರ್!

Vijayapura mayor: ವಾಹನ ಚಾಲಕನಿಗೆ ಸಂಬಳ ಕೊಟ್ಟಿಲ್ಲ ಎಂಬ ಕಾರಣಕ್ಕೆ ಆತ ಬಂದಿಲ್ಲ. ಹೀಗಾಗಿ ಟಾಂಗಾ ಮೂಲಕ ಸಾಮಾನ್ಯ ಸಭೆಗೆ ಮೇಯರ್ ಆಗಮಿಸಿದ್ದಾರೆಂದು ತಿಳಿದುಬಂದಿದೆ. 

Written by - Puttaraj K Alur | Last Updated : Feb 29, 2024, 04:42 PM IST
  • ವಾಹನ ಚಾಲಕನಿಲ್ಲದ ಕಾರಣ ಟಾಂಗಾದಲ್ಲಿ ಪಾಲಿಕೆಗೆ ಆಗಮಿಸಿದ ಮೇಯರ್‌
  • ಟಾಂಗಾದಲ್ಲಿ ಬಂದ ವಿಜಯಪುರದ ಮೇಯರ್‌ ಮೆಹಜಬೀನ್ ಅಬ್ದುಲ್ ರಜಾಕ್ ಹೊರ್ತಿ
  • ಬೆಳಗ್ಗೆ 11 ಗಂಟೆಗೆ ನಡೆಯಬೇಕಿದ್ದ ಸಭೆಗೆ ಟಾಂಗಾದಲ್ಲಿ 11.30ಕ್ಕೆ ಆಗಮಿಸಿದ ಮೇಯರ್
Vijayapura: ಚಾಲಕನಿಲ್ಲದ ಕಾರಣ ಟಾಂಗಾದಲ್ಲಿ ಪಾಲಿಕೆಗೆ ಬಂದ ಮೇಯರ್! title=
ಟಾಂಗಾದಲ್ಲಿ ಆಗಮಿಸಿದ ಮೇಯರ್‌!

ವಿಜಯಪುರ: ವಾಹನ ಚಾಲಕನಿಲ್ಲದ ಕಾರಣ ವಿಜಯಪುರದ ಮೇಯರ್‌ ಟಾಂಗಾದಲ್ಲಿ ಪಾಲಿಕೆಗೆ ಆಗಮಿಸಿರುವ ಘಟನೆ ನಡೆದಿದೆ. ತಮ್ಮ ವಾಹನಕ್ಕೆ ಚಾಲಕ ಇರದ ಕಾರಣ ಮಹಾಪೌರರಾದ ಮೆಹಜಬೀನ್ ಅಬ್ದುಲ್ ರಜಾಕ್ ಹೊರ್ತಿ ಅವರು ಟಾಂಗಾದ ಮೂಲಕ ಪಾಲಿಕಗೆ ಆಗಮಿಸಿದ್ದಾರೆ. 

ವಿಜಯಪುರದ ಪಾಲಿಕೆ ಮಹಾಪೌರರ ವಾಹನಕ್ಕೆ ಚಾಲಕರು ಇರಲಿಲ್ಲ. ವಾಹನ ಚಾಲಕ ಇರದ ಕಾರಣ ಟಾಂಗಾದ ಮೂಲಕ ಪಾಲಿಕೆಯ ಸಾಮಾನ್ಯ ಸಭೆಗೆ ಮಹಾಪೌರರು ಆಗಮಿಸಿದ್ದಾರೆ. 

ಇದನ್ನೂ ಓದಿ: Chamarajanagar: ಜೋಳದ ಫಸಲು ತಿಂದ ಎತ್ತುಗಳ ಕಾಲು ಕತ್ತರಿಸಿದ ಟಿಬೆಟಿಯನ್ನರು!

ವಾಹನ ಚಾಲಕನಿಗೆ ಸಂಬಳ ಕೊಟ್ಟಿಲ್ಲ ಎಂಬ ಕಾರಣಕ್ಕೆ ಆತ ಬಂದಿಲ್ಲ. ಹೀಗಾಗಿ ಟಾಂಗಾ ಮೂಲಕ ಸಾಮಾನ್ಯ ಸಭೆಗೆ ಮೇಯರ್ ಆಗಮಿಸಿದ್ದಾರೆಂದು ತಿಳಿದುಬಂದಿದೆ. 

ಗುರುವಾರ ಬೆಳಗ್ಗೆ 11 ಗಂಟೆಗೆ ನಡೆಯಬೇಕಿದ್ದ ಸಭೆಗೆ ಮಹಾಪೌರರು 11.30ಕ್ಕೆ ಆಗಮಿಸಿದ್ದಾರೆ. ಚಾಲಕ ಇರದ ಕಾರಣ ತಡವಾಗಿ ಟಾಂಗಾ ಮೂಲಕ ಪಾಲಿಕೆಗೆ ಮೇಯರ್ ಆಗಮಿಸಿದ್ದಾರೆ. ಈ ಸುದ್ದಿ ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. 

ಇದನ್ನೂ ಓದಿ: ಪಡಿತರ ವಿತರಕರಿಗೆ ಪ್ರತಿ ಕೆಜಿ ಅಕ್ಕಿಗೆ ಕಮಿಷನ್ ಮೊತ್ತ 1.5 ರೂಪಾಯಿಗೆ ಹೆಚ್ಚಳ: ಸಿಎಂ ಮಹತ್ವದ ಘೋಷಣೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News