Viral Photo: ಮಣ್ಣಿನಲ್ಲೇ ಸಿದ್ದಪಡಿಸಿದ ಮಕ್ಕಳ 5G ಸ್ಮಾರ್ಟ್ ಫೋನ್...!

ಭಾರತದಲ್ಲಿ ಅಧಿಕೃತವಾಗಿ 5 G ನೆಟ್ ವರ್ಕ್ ಗೆ ಇನ್ನೂ ಚಾಲನೆ ದೊರೆತಿಲ್ಲ, ಆಗಲೇ 5G ಸ್ಮಾರ್ಟ್ ಫೋನ್ ಹೇಗೆ ಬಂತು ಅಂತೀರಾ.ಹೌದು ನೀವು ನಂಬಲೇ ಬೇಕು, ಹಳ್ಳಿಮಕ್ಕಳು ಈಗ ತಮ್ಮದೇ ಮಾದರಿಯಲ್ಲಿ 5 ಜಿ ಫೋನ್ ವೊಂದನ್ನು ಸಿದ್ಧಪಡಿಸಿ ಸಾಮಾಜಿಕ ಮಾಧ್ಯಮದಲ್ಲಿ ಮೆಚ್ಚುಗೆ ಗಳಿಸಿದ್ದಾರೆ.

Last Updated : Jun 25, 2021, 05:08 PM IST
  • ಭಾರತದಲ್ಲಿ ಅಧಿಕೃತವಾಗಿ 5 G ನೆಟ್ ವರ್ಕ್ ಗೆ ಇನ್ನೂ ಚಾಲನೆ ದೊರೆತಿಲ್ಲ, ಆಗಲೇ 5G ಸ್ಮಾರ್ಟ್ ಫೋನ್ ಹೇಗೆ ಬಂತು ಅಂತೀರಾ.ಹೌದು ನೀವು ನಂಬಲೇ ಬೇಕು,
  • ಹಳ್ಳಿಮಕ್ಕಳು ಈಗ ತಮ್ಮದೇ ಮಾದರಿಯಲ್ಲಿ 5 ಜಿ ಫೋನ್ ವೊಂದನ್ನು ಸಿದ್ಧಪಡಿಸಿ ಸಾಮಾಜಿಕ ಮಾಧ್ಯಮದಲ್ಲಿ ಮೆಚ್ಚುಗೆ ಗಳಿಸಿದ್ದಾರೆ.
Viral Photo: ಮಣ್ಣಿನಲ್ಲೇ ಸಿದ್ದಪಡಿಸಿದ ಮಕ್ಕಳ 5G ಸ್ಮಾರ್ಟ್ ಫೋನ್...!   title=
Photo Courtesy: Facebook

ಗದಗ: ಭಾರತದಲ್ಲಿ ಅಧಿಕೃತವಾಗಿ 5 G ನೆಟ್ ವರ್ಕ್ ಗೆ ಇನ್ನೂ ಚಾಲನೆ ದೊರೆತಿಲ್ಲ, ಆಗಲೇ 5G ಸ್ಮಾರ್ಟ್ ಫೋನ್ ಹೇಗೆ ಬಂತು ಅಂತೀರಾ.ಹೌದು ನೀವು ನಂಬಲೇ ಬೇಕು, ಹಳ್ಳಿಮಕ್ಕಳು ಈಗ ತಮ್ಮದೇ ಮಾದರಿಯಲ್ಲಿ 5 ಜಿ ಫೋನ್ ವೊಂದನ್ನು ಸಿದ್ಧಪಡಿಸಿ ಸಾಮಾಜಿಕ ಮಾಧ್ಯಮದಲ್ಲಿ ಮೆಚ್ಚುಗೆ ಗಳಿಸಿದ್ದಾರೆ.

ಆದರೆ ಸತ್ಯ ಸಂಗತಿ ಎಂದರೆ ಇವುಗಳನ್ನು ನೀವು ಪೋನ್ ಗಳಂತೆ ಬಳಕೆ ಮಾಡಲು ಬರುವುದಿಲ್ಲ..! ಹೌದು, ಈಗ ಮಕ್ಕಳು ಮಣ್ಣಿನಿಂದ ತಯಾರಿಸಿದ 5 ಸ್ಮಾರ್ಟ್ ಫೋನ್ (5G smartphone) ಫೋಟೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.ಯಲ್ಲಪ್ಪ ಹಂದ್ರಾಳ ಎನ್ನುವವರು ಈ ಫೋಟೋ ವನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಈ ಚಿತ್ರದಲ್ಲಿ ಮಕ್ಕಳು ಸ್ಮಾರ್ಟ್ ಪೋನ್ ಪ್ರತಿರೂಪವನ್ನು ಮಣ್ಣಿಂದ ನಿರ್ಮಿಸಿದ್ದಾರೆ. "5G smartphones launched by our village kids.
😍😍😍😍😍😍😍😍😍😍😍😍😍😍😍😍 ನಮ್ ಓಣಿ ಹುಡ್ರು ಏನಾರ ಒಂದು ಮಾಡ್ತಾ ಹಿಂಗ್ ಖುಷಿ ಕೊಡ್ತಾರ" ಎಂದು ಅವರು ಬರೆದುಕೊಂಡಿದ್ದಾರೆ.

ಈಗ ವೈರಲ್ ಆಗಿರುವ ಈ ಫೋಟೋದಲ್ಲಿರುವ ಮಕ್ಕಳು ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಮೇವುಂಡಿ ಗ್ರಾಮದವರು ಎನ್ನಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಪ್ರವೀಣ್ ದೇಶಪಾಂಡೆ ಎನ್ನುವರು ಖರೆ ಮೊಬೈಲ್ ಹಿಡದ city ಮಕ್ಕಳು ಕಳಕೊಂಡ್ Creativity ಹಳ್ಳಿ ಮಕ್ಕಳ ಕಣ್ಣಾಗ Simpli...city. ಎಂದು ಪ್ರತಿಕ್ರಿಯಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News