Isha Foundation : ಕರ್ನಾಟಕ ಸರ್ಕಾರದಿಂದ ನಾವು ಯಾವುದೇ ಹಣ ಪಡೆದಿಲ್ಲ : ಈಶ ಫೌಂಡೇಶನ್

ರಾಜ್ಯ ಪರಿಸರ ಬಜೆಟ್ ಮತ್ತು ಚಿಕ್ಕಬಳ್ಳಾಪುರದಲ್ಲಿ ಈಶ ಫೌಂಡೇಶನ್ ನ ಜಮೀನಿಗೆ ಸಂಬಂಧಿಸಿದ ವಿಷಯಗಳಲ್ಲಿ ಹರಡುತ್ತಿರುವ ಕೆಲವು ಸುಳ್ಳು ಮಾಹಿತಿಗಳಿಂದ ನಮಗೆ ತೀವ್ರ ನೋವಾಗಿದೆ. ನಮ್ಮ ಮೇಲೆ ಮಾಡಲಾದ ಆರೋಪಗಳು ಮತ್ತು ತಪ್ಪು ಮಾಹಿತಿಗಳು ಸಂಪೂರ್ಣವಾಗಿ ಆಧಾರರಹಿತ ಮತ್ತು ವಾಸ್ತವಿಕವಾಗಿ ಅಸತ್ಯವಾಗಿವೆ ಎಂದು ಫೌಂಡೇಶನ್ ಸ್ಪಷ್ಟಪಡಿಸಿದೆ.

Written by - Channabasava A Kashinakunti | Last Updated : Feb 6, 2023, 09:15 PM IST
  • ಕೆಲವು ಸುಳ್ಳು ಮಾಹಿತಿಗಳಿಂದ ನಮಗೆ ತೀವ್ರ ನೋವಾಗಿದೆ
  • ಈಶ ಫೌಂಡೇಶನ್ ನ ಜಮೀನಿಗೆ ಸಂಬಂಧಿಸಿದ ವಿಷಯ
  • ಈಗಿನ ಸರ್ಕಾರ ಅಥವಾ ಹಿಂದಿನ ಯಾವುದೇ ಸರ್ಕಾರಗಳಿಂದ ಹಣ ಪಡೆದಿಲ್ಲ
Isha Foundation : ಕರ್ನಾಟಕ ಸರ್ಕಾರದಿಂದ ನಾವು ಯಾವುದೇ ಹಣ ಪಡೆದಿಲ್ಲ : ಈಶ ಫೌಂಡೇಶನ್ title=

ಬೆಂಗಳೂರು : ರಾಜ್ಯ ಪರಿಸರ ಬಜೆಟ್ ಮತ್ತು ಚಿಕ್ಕಬಳ್ಳಾಪುರದಲ್ಲಿ ಈಶ ಫೌಂಡೇಶನ್ ನ ಜಮೀನಿಗೆ ಸಂಬಂಧಿಸಿದ ವಿಷಯಗಳಲ್ಲಿ ಹರಡುತ್ತಿರುವ ಕೆಲವು ಸುಳ್ಳು ಮಾಹಿತಿಗಳಿಂದ ನಮಗೆ ತೀವ್ರ ನೋವಾಗಿದೆ. ನಮ್ಮ ಮೇಲೆ ಮಾಡಲಾದ ಆರೋಪಗಳು ಮತ್ತು ತಪ್ಪು ಮಾಹಿತಿಗಳು ಸಂಪೂರ್ಣವಾಗಿ ಆಧಾರರಹಿತ ಮತ್ತು ವಾಸ್ತವಿಕವಾಗಿ ಅಸತ್ಯವಾಗಿವೆ ಎಂದು ಫೌಂಡೇಶನ್ ಸ್ಪಷ್ಟಪಡಿಸಿದೆ.

ಈ ಬಗ್ಗೆ ಮಧ್ಯ ಪ್ರಕಟಣೆ ಹೊರಡಿಸಿರುವ ಫೌಂಡೇಶನ್, ಈಶ ಫೌಂಡೇಶನ್ ಅಥವಾ ಸದ್ಗುರು ಅವರು, ಈಗಿನ ಸರ್ಕಾರದಿಂದ ಅಥವಾ ಕರ್ನಾಟಕದ ಹಿಂದಿನ ಯಾವುದೇ ಸರ್ಕಾರಗಳಿಂದ ಯಾವುದೇ ಹಣವನ್ನು ಪಡೆದಿಲ್ಲ. ಈಶ ಫೌಂಡೇಶನ್ ಕರ್ನಾಟಕ ಸರ್ಕಾರದ ಜೊತೆ ನೇರವಾಗಿ ಅಥವಾ ಪರೋಕ್ಷವಾಗಿ ಯಾವುದೇ ಹಣಕಾಸಿನ ವಹಿವಾಟುಗಳಲ್ಲಿ ಭಾಗಿಯಾಗಿಲ್ಲ ಎಂದು ತಿಳಿಸಿದೆ.

ಇದನ್ನೂ ಓದಿ : ಫೆ.7 ಕ್ಕೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಏಕಕಾಲಕ್ಕೆ 108  ನಮ್ಮ ಕ್ಲಿನಿಕ್' ಗಳಿಗೆ ಚಾಲನೆ

ಸಿಎಂ ಬಸವರಾಜ ಬೊಮ್ಮಾಯಿ ಅವರು ಅರಣ್ಯ ಇಲಾಖೆಗೆ ಮಣ್ಣಿನ ಸಂರಕ್ಷಣೆಗೆ ಒತ್ತು ನೀಡಿ ರಾಜ್ಯ ಪರಿಸರ ಚಟುವಟಿಕೆಗಳಿಗೆ 100 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ ಎಂದು ಘೋಷಿಸಿದ್ದರು. ಕೆಲವು ಮಾಧ್ಯಮಗಳು ಅದನ್ನೇ ತಪ್ಪಾಗಿ ವರದಿ ಮಾಡಿದ್ದವು ಮತ್ತು ನಂತರ ಯಾವುದೇ ರೀತಿಯಲ್ಲೂ ಈಶ ಫೌಂಡೇಶನ್ ಅಥವಾ ಸದ್ಗುರು, ಸರ್ಕಾರದಿಂದ ನೇರವಾಗಿ ಹಣವನ್ನು ಪಡೆದಿಲ್ಲ ಎಂದು ಸ್ಪಷ್ಟಪಡಿಸುವ ಕಾರಿಜೆಂಡಮ್‌ನೊಂದಿಗೆ ಲೇಖನವನ್ನು ಹಿಂತೆಗೆದುಕೊಂಡಿವೆ ಎಂದು ತಿಳಿಸಿದೆ.

ಈಶ ಫೌಂಡೇಶನ್ ಚಿಕ್ಕಬಳ್ಳಾಪುರದಲ್ಲಿ ಅಥವಾ ಕರ್ನಾಟಕ ರಾಜ್ಯದ ಬೇರೆಲ್ಲಿಯೂ ಪ್ರಸ್ತುತ ಸರ್ಕಾರದಿಂದ ಅಥವಾ ಹಿಂದಿನ ಸರ್ಕಾರಗಳಿಂದ ಯಾವುದೇ ಭೂಮಿಯನ್ನು ಪಡೆದಿಲ್ಲ. ಚಿಕ್ಕಬಳ್ಳಾಪುರದ ಎಲ್ಲಾ ಜಮೀನುಗಳನ್ನು ಸೂಕ್ತ ಮಾರಾಟ ಪತ್ರಗಳ ಮೂಲಕ ಅದರ ಮಾಲೀಕರಿಂದ ಖರೀದಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ದಾನಿಗಳ ಮತ್ತು ಸ್ವಯಂಸೇವಕರ ಸ್ವಯಂಪ್ರೇರಿತ ಕೊಡುಗೆಗಳ ಮೂಲಕ ಜಮೀನಿನ ಮಾಲೀಕರಿಂದ ಈಶ ಫೌಂಡೇಶನ್ ನೇರವಾಗಿ ಖರೀದಿಸಿದೆ. ಈಶ ಫೌಂಡೇಶನ್ ಕರ್ನಾಟಕ ಸರ್ಕಾರದಿಂದ ಯಾವುದೇ ಭೂಮಿಯನ್ನು ಪಡೆದಿಲ್ಲ ಎಂದು ತಿಳಿಸಿದೆ.

ಈಶ ಯೋಗ ಕೇಂದ್ರದಲ್ಲಿರುವ ಆದಿಯೋಗಿಯು ನಂದಿ ಬೆಟ್ಟಗಳಿಂದ 31 ಕಿಮೀ ದೂರದಲ್ಲಿದೆ. ನಂದಿ ಬೆಟ್ಟ ಚಿಕ್ಕಬಳ್ಳಾಪುರದ ನಂದಿ ಹೋಬಳಿಯಲ್ಲಿದ್ದರೆ, ಆದಿಯೋಗಿಯು ಚಿಕ್ಕಬಳ್ಳಾಪುರ ತಾಲೂಕಿನ ಕಸಬಾ ಹೋಬಳಿಯಲ್ಲಿದೆ. ನಮ್ಮ ಜಮೀನುಗಳು ಅರಣ್ಯದಲ್ಲಿ ಇಲ್ಲ ಏಕೆಂದರೆ ಅವು ಕಂದಾಯ ಭೂಮಿಯನ್ನು ಪರಿಗಣಿಸಿ ಭೂ ಮಾಲೀಕರಿಂದ ಖರೀದಿಸಿ ಯಥಾವತ್ತಾಗಿ ಪರಿವರ್ತಿಸಲಾಗಿದೆ ಎಂದು ಹೇಳಿದೆ.

ಈ ಸುಳ್ಳು ಆರೋಪಗಳು ಹಾಗು ತಪ್ಪು ಮಾಹಿತಿಯು ಪ್ರಸಾರದಿಂದ ಸ್ವಯಂಸೇವಕರು ಮತ್ತು ಈಶ ಅನುಯಾಯಿಗಳಿಗೆ ತುಂಬಾ ನೋವಾಗಿದೆ. ಯಾರೋ ಉದ್ದೇಶಪೂರ್ವಕವಾಗಿ ನಮ್ಮ ವಿರುದ್ಧ ತಪ್ಪು ಮಾಹಿತಿಯನ್ನು ಹರಡುವ ಉದ್ದೇಶದಿಂದ ಹೀಗೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಮೈಸೂರಿನಲ್ಲಿ ಜನಿಸಿದ ಸದ್ಗುರು ಅವರು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಜ್ಞಾನೋದಯವನ್ನು ಪಡೆದು ಅಂತರರಾಷ್ಟ್ರೀಯ ಆಧ್ಯಾತ್ಮಿಕ ನಾಯಕರಾಗಿ ಗುರುತಿಸಲ್ಪಟ್ಟಿದ್ದಾರೆ. ಸದ್ಗುರುಗಳ ಮಾರ್ಗದರ್ಶನದಲ್ಲಿ ಪ್ರಾರಂಭವಾದ ಕಾವೇರಿ ಕೂಗು ಯೋಜನೆಯು ಕಾವೇರಿ ನದಿಯನ್ನು ಪುನರುಜ್ಜೀವನಗೊಳಿಸುವ ಅಭಿಯಾನವಾಗಿದೆ, ಇದು ಜಲಾನಯನ ಪ್ರದೇಶದ ರೈತರು ತಮ್ಮ ಸ್ವಂತ ಜಮೀನುಗಳಲ್ಲಿ 242 ಕೋಟಿ ಮರಗಳನ್ನು ನೆಡಲು ಅನುವು ಮಾಡಿಕೊಟ್ಟಿದೆ. ಇದು ನದಿ ಜಲಾನಯನ ಪ್ರದೇಶದಲ್ಲಿ 9 ರಿಂದ 12 ಟ್ರಿಲಿಯನ್ ಲೀಟರ್ ನೀರನ್ನು ಹಿಡಿದಿಟ್ಟುಕೊಳ್ಳುತ್ತದೆ ಮತ್ತು ಮೂಲದಲ್ಲಿ ಕಾವೇರಿಯ ಹರಿವನ್ನು ಹೆಚ್ಚಿಸುತ್ತದೆ ಎಡನು ಮಾಹಿತಿ ನೀಡಿದ್ದಾರೆ.

ಕರ್ನಾಟಕದಲ್ಲಿ  ಕಾವೇರಿ ಕೂಗಿನ ನೇರ ಪರಿಣಾಮದ ಕುರಿತು ಇತ್ತೀಚಿನ ಮಾಹಿತಿ ಬಗ್ಗೆ ಹೇಳುವುದಾದರೆ, 2020 ರಿಂದ, ಕರ್ನಾಟಕ ಸರ್ಕಾರವು 9 ಕಾವೇರಿ ನದಿ ಜಲಾನಯನ ಜಿಲ್ಲೆಗಳಲ್ಲಿ 41,000 ಕ್ಕೂ ಹೆಚ್ಚು ರೈತರಿಗೆ 22 ಮಿಲಿಯನ್ ಸಸಿಗಳನ್ನು ವಿತರಿಸಿದೆ. ಎಸ್‌.ಎಂಇ ಗಳು (Subject Matter Experts), ಮಾದರಿ ರೈತರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ತಾಂತ್ರಿಕ ಕಾರ್ಯಾಗಾರಗಳನ್ನು ನಡೆಸುವುದು ಸೇರಿದಂತೆ 1800 ಕ್ಕೂ ಹೆಚ್ಚು ಕಾರ್ಯಕ್ರಮಗಳ ಮೂಲಕ ಜನ ಜಾಗೃತಿ ಮೂಡಿಸುವಲ್ಲಿ ಕಾವೇರಿ ಕೂಗು ತಂಡಕ್ಕೆ ಕರ್ನಾಟಕ ಸರ್ಕಾರದೊಂದಿಗೆ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಕಾವೇರಿ ಕೂಗು ಅಭಿಯಾನ ರೈತ ಸಹಾಯವಾಣಿ ಮತ್ತು ವಾಟ್ಸಾಪ್ ಗುಂಪುಗಳ ಮೂಲಕ  51,500 ಕ್ಕೂ ಹೆಚ್ಚು ರೈತರಿಗೆ ಬೆಂಬಲ ನೀಡುತ್ತಿದೆ ಎಡನು ಹೇಳಿದ್ದಾರೆ.

ಇದನ್ನೂ ಓದಿ : KSRTC ಚಾಲಕನ ಮಗನಿಗೆ ಏಕಲವ್ಯ ಪ್ರಶಸ್ತಿ : ನಿಗಮದಿಂದ ಗೌರವ ಸನ್ಮಾನ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - https://bit.ly/3AClgDd Apple Link - https://apple.co/3wPoNgr ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News