Akshaya Tritiya 2022: ಈ ನಾಲ್ಕು ರಾಶಿಗಳ ಜನರ ಮೇಲಿರಲಿದೆ ದೇವಿ ಲಕ್ಷ್ಮಿಯ ವಿಶೇಷ ಕೃಪೆ, ನಿಮ್ಮ ರಾಶಿ ಇದರಲ್ಲಿದೆಯಾ?

Akshaya Tritiya 2022 Date - ಪ್ರತಿ ವರ್ಷದ ವೈಶಾಖ ಶುಕ್ಲ ಪಕ್ಷದ ತೃತಿಯಾ ತಿಥಿಯಲ್ಲಿ ಅಕ್ಷಯ ತೃತಿಯಾ ಮಹಾಪರ್ವವನ್ನು ಆಚರಿಸಲಾಗುತ್ತದೆ. ಹಿಂದೂ ಧರ್ಮ ಶಾಸ್ತ್ರಗಳಲ್ಲಿ ಈ ಹಬ್ಬವನ್ನು ತುಂಬಾ ಪವಿತ್ರ ಎಂದು ಪರಿಗಣಿಸಲಾಗುತ್ತದೆ. 

Written by - Nitin Tabib | Last Updated : May 2, 2022, 12:01 PM IST
  • ಪ್ರತಿ ವರ್ಷದ ವೈಶಾಖ ಶುಕ್ಲ ಪಕ್ಷದ ತೃತಿಯಾ ತಿಥಿಯಲ್ಲಿ ಅಕ್ಷಯ ತೃತಿಯಾ ಮಹಾಪರ್ವವನ್ನು ಆಚರಿಸಲಾಗುತ್ತದೆ.
  • ಹಿಂದೂ ಧರ್ಮ ಶಾಸ್ತ್ರಗಳಲ್ಲಿ ಈ ಹಬ್ಬವನ್ನು ತುಂಬಾ ಪವಿತ್ರ ಎಂದು ಪರಿಗಣಿಸಲಾಗುತ್ತದೆ.
  • ಅಕ್ಷಯ ತೃತಿಯಾ ದಿನ ಪೂಜೆ, ದಾನ, ಹೋಮ-ಹವನ ಇತ್ಯಾದಿಗಳಿಗೆ ತುಂಬಾ ಮಹತ್ವವಿದೆ.
Akshaya Tritiya 2022: ಈ ನಾಲ್ಕು ರಾಶಿಗಳ ಜನರ ಮೇಲಿರಲಿದೆ ದೇವಿ ಲಕ್ಷ್ಮಿಯ ವಿಶೇಷ ಕೃಪೆ, ನಿಮ್ಮ ರಾಶಿ ಇದರಲ್ಲಿದೆಯಾ? title=
Akshaya Tritiya 2022

Akshaya Tritiya 2022 Date - ಪ್ರತಿ ವರ್ಷದ ವೈಶಾಖ ಶುಕ್ಲ ಪಕ್ಷದ ತೃತಿಯಾ ತಿಥಿಯಲ್ಲಿ ಅಕ್ಷಯ ತೃತಿಯಾ ಮಹಾಪರ್ವವನ್ನು ಆಚರಿಸಲಾಗುತ್ತದೆ. ಹಿಂದೂ ಧರ್ಮ ಶಾಸ್ತ್ರಗಳಲ್ಲಿ ಈ ಹಬ್ಬವನ್ನು ತುಂಬಾ ಪವಿತ್ರ ಎಂದು ಪರಿಗಣಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಅಕ್ಷಯ ತೃತಿಯಾ ದಿನದಂದು ಪೂಜೆ, ದಾನ, ಹೋಮ-ಹವನ ಇತ್ಯಾದಿಗಳನ್ನು ನೆರವೇರಿಸುವುದರಿಂದ ಸಾಕಷ್ಟು ಲಾಭ ಸಿಗುತ್ತದೆ ಎನ್ನಲಾಗುತ್ತದೆ. ಈ ದಿನ ವಿಶೇಷವಾಗಿ ಚಿನ್ನವನ್ನು ಖರೀದಿಸಲಾಗುತ್ತದೆ. ಏಕೆಂದರೆ, ಈ ದಿನ ಚಿನ್ನವನ್ನು ಖರೀದಿಸುವುದರಿಂದ ವಿಶೇಷ ಲಾಭ ಸಿಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ಈ ವರ್ಷದ ಅಕ್ಷಯ ತೃತಿಯಾ ಮಹಾಪರ್ವದಂದು ಯಾವ ರಾಶಿಗಳ ಮೇಲೆ ದೇವಿ ಲಕ್ಷ್ಮಿಯ ವಿಶೇಷ ಕೃಪೆ ಇರಲಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ವೃಷಭ: ಅಕ್ಷಯ ತೃತೀಯ ದಿನದಂದು, ನಿಮಗೆ ದೇವಿ ಲಕ್ಷ್ಮಿಯ ವಿಶೇಷ ಆಶೀರ್ವಾದ ಲಭಿಸಲಿದೆ. ಹಲವು ದಿನಗಳಿಂದ ನೆನೆಗುದಿಗೆ ಬಿದ್ದ ನಿಮ್ಮ ಎಲ್ಲಾ ಕೆಲಸಗಳು ಪೂರ್ಣಗೊಳ್ಳಲಿವೆ. ಇದಲ್ಲದೆ, ಯಾವುದೇ ಹೊಸ ಕಾರ್ಯವನ್ನು ಆರಂಭಿಸಲು ಈ ಸಮಯ ತುಂಬಾ ಅನುಕೂಲಕರವಾಗಿದೆ. ಧನಪ್ರಾಪ್ತಿಯಾಗಲಿದೆ. ನಿಂತು ಹೋಗಿರುವ ಮತ್ತು ನಿಮಗೆ ಸಲ್ಲಬೇಕಿರುವ ಹಣ ನಿಮಗೆ ಸಿಗಲಿದೆ.

ಕರ್ಕ: ಕರ್ಕ ರಾಶಿಯ ಜನರಿಗೆ ಈ ಬಾರಿಯ ಅಕ್ಷಯ ತೃತಿಯಾ ಲಾಭದಾಯಕ ಸಾಬೀತಾಗಲಿದೆ. ಈ ದಿನ ನಿಮಗೆ ಯಾವುದಾದರೊಂದು ಕಾರ್ಯದಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ. ನಿಮಗೆ ಅದೃಷ್ಟದ ಸಂಪೂರ್ಣ ಸಾಥ್ ಸಿಗಲಿದೆ. ನೌಕರಿಯಲ್ಲಿ ವೇತನ ಹೆಚ್ಚಾಗುವ ಸಾಧ್ಯತೆ ಇದೆ. ಯಾತ್ರೆಯಿಂದ ಧನಲಾಭದ ಲಕ್ಷಣಗಳು ಗೋಚರಿಸುತ್ತಿವೆ.ಆರ್ಥಿಕ ಮುಗ್ಗಟ್ಟಿನಿಂದ ಮುಕ್ತಿ ಸಿಗಲಿದೆ.

ಇದನ್ನೂ ಓದಿ-Zodiac Sign: ಈ ನಾಲ್ಕು ರಾಶಿಗಳ ಯುವತಿಯರು ತುಂಬಾ ಛಲವಾದಿಗಳಾಗಿರುತ್ತಾರೆ

ಧನು: ಧನು ರಾಶಿಯ ಜನರ ಪಾಲಿಗೂ ಕೂಡ ಅಕ್ಷಯ ತೃತಿಯಾ ಶುಭವಾಗಿರಲಿದೆ. ಅದೃಷ್ಟದ ಸಾಥ್ ಸಿಗುವ ಕಾರಣ ನಿಮ್ಮ ನೆನೆಗುದಿಗೆ ಬಿದ್ದ ಎಲ್ಲಾ ಕೆಲಸಗಳು ಪೂರ್ಣಗೊಳ್ಳಲಿವೆ. ಮನೆ ಹಾಗೂ ವಾಹನ ಸುಖ ಪ್ರಾಪ್ತಿಯಾಗಲಿದೆ. ದೇವಿ ಲಕ್ಷ್ಮಿಯ ವಿಶೇಷ ಕೃಪೆ ನಿಮ್ಮ ಮೇಲಿರುವ ಕಾರಣ ಧನಲಾಭದ ಎಲ್ಲಾ ಸಂಕೇತಗಳು ಗೋಚರಿಸುತ್ತಿವೆ.

ಇದನ್ನೂ ಓದಿ-Astrology: ನೀವು ಮಲಗುವ ವಿಧಾನ ನಿಮ್ಮ ಭವಿಷ್ಯ ಹೇಳುತ್ತದೆ

ಮಕರ: ಮಕರ ರಾಶಿಯ ಜನರ ಪಾಲಿಗೆ ಅಕ್ಷಯ ತೃತಿಯಾ ದಿನ ಶುಭ ಫಲದಾಯಕ ಸಾಬೀತಾಗಲಿದೆ. ವೃತ್ತಿಜೀವನದಲ್ಲಿ ನಿಮಗೆ ಜಬರ್ದಸ್ತ್ ಯಶಸ್ಸು ಲಭಿಸಲಿದೆ. ಹಳೆ ವಿವಾದಗಳಿಂದ ಮುಕ್ತಿ ಸಿಗಲಿದೆ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಶತ್ರುಗಳ ಮೇಲೆ ಹಿಡಿತ ಸಾಧಿಸುವಿರಿ. ಕೌಟುಂಬಿಕ ವಿಷಯದಲ್ಲಿ ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News