Diwali 2021 Remedies: ಕುಂಕುಮ-ಸಾಸಿವೆ ಎಣ್ಣೆಯ ಈ ಸುಲಭ ಪರಿಹಾರವನ್ನು ಅನುಸರಿಸಿ ದೇವಿ ಲಕ್ಷಿ ಕೃಪೆಗೆ ಪಾತ್ರರಾಗಿ

Diwali 2021 Remedies: - ದೀಪಾವಳಿಯ (Diwali) ದಿನದಂದು ಮಾಡಲಾಗುವ ಕೆಲ ಉಪಾಯಗಳಿಂದ  (Remedy) ತುಂಬಾ ಪರಿಣಾಮಕಾರಿ ಫಲಿತಾಂಶಗಳು ಲಭಿಸುತ್ತವೆ. ಈ ದಿನ ನೀವು ಕುಂಕುಮ ಮತ್ತು ಸಾಸಿವೆ ಎಣ್ಣೆಯ ಸುಲಭ ಪರಿಹಾರವನ್ನು ಅನುಸರಿಸಿದರೆ, ವರ್ಷವಿಡೀ ಅನೇಕ ತೊಂದರೆಗಳಿಂದ ಪಾರಾಗಬಹುದು ಮತ್ತುನಿಮ್ಮ ಅದೃಷ್ಟ ಬಲವು ಕೂಡ ಹೆಚ್ಚಾಗಲಿದೆ.

Written by - Nitin Tabib | Last Updated : Oct 30, 2021, 11:18 AM IST
  • ದೀಪಾವಳಿಯ (Diwali) ದಿನದಂದು ಮಾಡಲಾಗುವ ಕೆಲ ಉಪಾಯಗಳಿಂದ (Remedy) ತುಂಬಾ ಪರಿಣಾಮಕಾರಿ ಫಲಿತಾಂಶಗಳು ಲಭಿಸುತ್ತವೆ.
  • ಈ ದಿನ ನೀವು ಕುಂಕುಮ ಮತ್ತು ಸಾಸಿವೆ ಎಣ್ಣೆಯ ಸುಲಭ ಪರಿಹಾರವನ್ನು ಅನುಸರಿಸಿದರೆ, ವರ್ಷವಿಡೀ ಅನೇಕ ತೊಂದರೆಗಳಿಂದ ಪಾರಾಗಬಹುದು ಮತ್ತುನಿಮ್ಮ ಅದೃಷ್ಟ ಬಲವು ಕೂಡ ಹೆಚ್ಚಾಗಲಿದೆ.
Diwali 2021 Remedies: ಕುಂಕುಮ-ಸಾಸಿವೆ ಎಣ್ಣೆಯ ಈ ಸುಲಭ ಪರಿಹಾರವನ್ನು ಅನುಸರಿಸಿ ದೇವಿ ಲಕ್ಷಿ ಕೃಪೆಗೆ ಪಾತ್ರರಾಗಿ title=
Diwali 2021 Remedies (File Photo)

Diwali 2021 Remedies: ವರ್ಷದ ಮಹಾಪರ್ವ ದೀಪಾವಳಿಗೆ (Diwali 2021) ಕ್ಷಣಗಣನೆ ಆರಂಭವಾಗಿದೆ. ಕಾರ್ತಿಕ ಮಾಸದ ಅಮಾವಾಸ್ಯೆಯಂದು ಆಚರಿಸಲಾಗುವ ದೀಪಾವಳಿಯನ್ನು ಗುರುವಾರ, 4 ನವೆಂಬರ್ 2021 ರಂದು ಆಚರಿಸಲಾಗುತ್ತಿದೆ. ಈ ದಿನ ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯ ಜೊತೆಗೆ ಗಣೇಶ ಮತ್ತು ಸರಸ್ವತಿ ದೇವಿಯನ್ನು ಪೂಜಿಸಲಾಗುತ್ತದೆ. ದೀಪಾವಳಿಯ ದಿನವನ್ನು ಧರ್ಮ ಶಾಸ್ತ್ರಗಳಿಂದ ಹಿಡಿದು ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದವರೆಗೆ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಈ ದಿನ ನೀವು ಮಾಡುವ ಕೆಲ ಉಪಾಯಗಳು ಅತ್ಯಂತ ಪರಿಣಾಮಕಾರಿ ಫಲಿತಾಂಶಗಳನ್ನು ನೀಡುತ್ತವೆ. ದೀಪಾವಳಿಯ ದಿನದಂದು ಈ ಕ್ರಮಗಳನ್ನು ಅನುಸರಿಸುವ ಮೂಲಕ ನೀವು ವರ್ಷವಿಡೀ ಸಂತೋಷ ಮತ್ತು ಸಮೃದ್ಧಿಯನ್ನು (Prosperity) ಪಡೆಯಬಹುದು, ಜೊತೆಗೆ ನಿಮ್ಮ ಕುಟುಂಬವನ್ನು ಎಲ್ಲಾ ತೊಂದರೆಗಳಿಂದ (Health) ರಕ್ಷಿಸಬಹುದು.

ಕೆಟ್ಟ ದೃಷ್ಟಿಯಿಂದ ರಕ್ಷಿಸುತ್ತದೆ ಕುಂಕುಮ ಹಾಗೂ ಸಾಸಿವೆ ಎಣ್ಣೆಯ ಉಪಾಯ 
ದೀಪಾವಳಿಯ (Diwali 2021) ದಿನದಂದು ಕುಂಕುಮ ಮತ್ತು ಸಾಸಿವೆ ಎಣ್ಣೆಯಿಂದ (Sindoor And Mustard Oil ) ಮಾಡಲಾಗುವ ಈ ಉಪಾಯವನ್ನು ಅನುಸರಿಸುವ ಮೂಲಕ ಮನೆಯ ಅನೇಕ ವಾಸ್ತು ದೋಷಗಳನ್ನು (Vastu Dosh) ನೀವು ನಿವಾರಿಸಬಹುದು. ಅಲ್ಲದೆ, ಇದು ಮುಂಬರುವ ತೊಂದರೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಇದಲ್ಲದೆ, ಈ ಉಪಾಯ ಅನುಸರಿಸುವುದರಿಂದ ನೀವು ದೇವಿ ಲಕ್ಷ್ಮಿ (Goddess Lakshmi) ಹಾಗೂ  ಶನಿದೇವರ (Shani Dev) ಅನುಗ್ರಹ ಒಟ್ಟಿಗೆ ಪಡೆಯಬಹುದು. ಇದಕ್ಕಾಗಿ ಸಾಸಿವೆ ಎಣ್ಣೆ ಮತ್ತು ಕುಂಕುಮವನ್ನು ಬೆರೆಸಿ ದೀಪಾವಳಿಯ ದಿನದಂದು ಮನೆಯ ಮುಖ್ಯ ದ್ವಾರಕ್ಕೆ ತಿಲಕವನ್ನು ಹಚ್ಚಿ. ನೀವು ಬಯಸಿದರೆ, ಅದರಿಂದ ಸ್ವಸ್ತಿಕವನ್ನು ಮಾಡಿ. ಇದನ್ನು ಮಾಡುವುದರಿಂದ ಮನೆಯನ್ನು ದುಷ್ಟ ಕಣ್ಣುಗಳಿಂದ ರಕ್ಷಿಸಬಹುದು. ಅಲ್ಲದೆ ಇದು ಮನೆಯಲ್ಲಿ ಅದೃಷ್ಟವನ್ನು ತರುತ್ತದೆ.

ಮನೆಯ ಜನರ ಅಭಿವೃದ್ಧಿಯಾಗುತ್ತದೆ
ಕುಂಕುಮ ಮತ್ತು ಸಾಸಿವೆ ಎಣ್ಣೆಯಿಂದ ಮಾಡಲಾಗುವ ಈ ಉಪಾಯ ಮನೆಯ ಸದಸ್ಯರಿಗೆ ಪ್ರಗತಿ ನೀಡುತ್ತದೆ. ಜೊತೆಗೆ ಇದು ಶನಿಯ ಕೆಟ್ಟ ಪರಿಣಾಮಗಳಿಂದ  ಮನೆಯನ್ನು ರಕ್ಷಿಸುತ್ತದೆ. ವಿಶೇಷವಾಗಿ ಶನಿಯ ಎರಡೂವರೆ ವರ್ಷ ಅಥವಾ ಸಾಡೇ ಸತಿ ಯಾರ ಮೇಲೆ ನಡೆಯುತ್ತಿದೆಯೋ ಅವರು ಈ ಪರಿಹಾರವನ್ನು ಖಂಡಿತವಾಗಿ ಅನುಸರಿಸಬೇಕು. ಶನಿಯ ಮಹಾದಶಾ ಸಮಯದಲ್ಲಿ ಜನರು ವೃತ್ತಿ, ಆರ್ಥಿಕ ಸ್ಥಿತಿ, ವೈವಾಹಿಕ ಜೀವನ, ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಕ್ರಮವು ಅವರ ಸಂಕಷ್ಟಗಳನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ-Conch Amazing Uses: ಶಂಖದ ಈ ಲಾಭಗಳ ಕುರಿತು ನಿಮಗೆ ತಿಳಿದಿದೆಯಾ? ಈ ರೀತಿ ಮನೆಯಲ್ಲಿಟ್ಟರೆ ಚಮತ್ಕಾರ ನಡೆಯಲಿದೆ

ಶನಿ ಮಹಾದೆಸೆ  ಎದುರಿಸುತ್ತಿರುವವರು ಈ ದಿನ ಆಂಜನೇಯ ಸ್ವಾಮಿಯ ದೇವಸ್ಥಾನದಲ್ಲಿ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಯೂ ಕೂಡ  ಸಾಕಷ್ಟು ಪರಿಹಾರವನ್ನು ಪಡೆಯಬಹುದು. ಆಂಜನೇಯನ ಆರಾಧನೆಯು ಶನಿಯ ಕೆಟ್ಟ ಪರಿಣಾಮಗಳನ್ನು ಕಡಿಮೆ ಮಾಡಿ ಉತ್ತಮ ಪ್ರಭಾವವನ್ನು ಬೀರುತ್ತದೆ.

ಇದನ್ನೂ ಓದಿ-Dhanteras 2021: ಧನತ್ರಯೋದಶಿಯಲ್ಲಿ ಶಾಪಿಂಗ್ ಮಾಡಲು ಯೋಜಿಸುತ್ತಿರುವಿರಾ? ಇಲ್ಲಿದೆ ಶುಭ ಮುಹೂರ್ತ

(ಸೂಚನೆ -  ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಝೀ ಹಿಂದುಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವುದಕ್ಕು ಮುನ್ನ ವಿಷಯ ತಜ್ಞರ ಸಲಹೆ ಪಡೆಯಲು ಮರೆಯಬೇಡಿ)

ಇದನ್ನೂ ಓದಿ-Venus Transit October 2021: ದೀಪಾವಳಿಗೂ ಮೊದಲು ತೆರೆಯಲಿದೆ ಈ 5 ರಾಶಿಯವರ ಅದೃಷ್ಟದ ಬಾಗಿಲು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News