ನೋಟು ಎಣಿಕೆ ಮಾಡುವಾಗ ತಪ್ಪಿಯೂ ಈ ತಪ್ಪು ಮಾಡದಿರಿ, ಶಾಶ್ವತವಾಗಿ ದೂರವಾಗುತ್ತಾಳೆ ಲಕ್ಷ್ಮೀ

ಕೆಲವೊಂದು ವಿಷಯಗಳಿಂದ ಬೇಸತ್ತು ಲಕ್ಷ್ಮೀ ಮನೆಯಿಂದ ನಿರ್ಗಮಿಸಿದರೆ ಜೀವನವಿಡೀ, ಬಡತನ ಅನುಭವಿಸಬೇಕಾಗುತ್ತದೆ.   ನಾವು ಮಾಡುವ ಕೆಲವು ಕೆಲಸಗಳೇ ಮಹಾಲಕ್ಷ್ಮೀಯ ಕೋಪಕ್ಕೆ ಕಾರಣವಾಗುತ್ತದೆ.

Written by - Zee Kannada News Desk | Last Updated : Feb 8, 2022, 02:33 PM IST
  • ಲಕ್ಷ್ಮೀ ಗೆ ಅಗೌರವ ತೋರಬಾರದು
  • ಹೀಗಾದರೆ ಶಾಶ್ವತವಾಗಿ ದೂರವಾಗುತ್ತಾಳೆ ಲಕ್ಷ್ಮೀ
  • ಮನೆಯಲ್ಲಿ ನೆಲೆಯಾಗುತ್ತದೆ ಬಡತನ
ನೋಟು ಎಣಿಕೆ ಮಾಡುವಾಗ ತಪ್ಪಿಯೂ ಈ ತಪ್ಪು ಮಾಡದಿರಿ,  ಶಾಶ್ವತವಾಗಿ ದೂರವಾಗುತ್ತಾಳೆ ಲಕ್ಷ್ಮೀ  title=
ಲಕ್ಷ್ಮೀ ಗೆ ಅಗೌರವ ತೋರಬಾರದು (file photo)

ನವದೆಹಲಿ : ಧಾರ್ಮಿಕ ನಂಬಿಕೆಗಳ ಪ್ರಕಾರ ಲಕ್ಷ್ಮೀ  ದೇವಿ (Godess Lakshmi) ಸಂಪತ್ತಿನ ಅಧಿದೇವತೆ. ಲಕ್ಷ್ಮೀಯ ಕೃಪೆಗೆ ಪಾತ್ರರಾದರೆ, ಜೀವನದಲ್ಲಿ ಸಂಪತ್ತು ಮತ್ತು ಸಮೃದ್ಧಿಗೆ ಕೊರತೆಯಿರುವುದಿಲ್ಲ. ಆದರೆ, ಕೆಲವೊಂದು ವಿಷಯಗಳಿಂದ ಬೇಸತ್ತು ಲಕ್ಷ್ಮೀ ಮನೆಯಿಂದ ನಿರ್ಗಮಿಸಿದರೆ ಜೀವನವಿಡೀ, ಬಡತನ ಅನುಭವಿಸಬೇಕಾಗುತ್ತದೆ.   ನಾವು ಮಾಡುವ ಕೆಲವು ಕೆಲಸಗಳೇ ಮಹಾಲಕ್ಷ್ಮೀಯ ಕೋಪಕ್ಕೆ ಕಾರಣವಾಗುತ್ತದೆ.  ನೋಟುಗಳನ್ನು ಎಣಿಸುವಾಗ ಅಥವಾ ಹಣವನ್ನು ನಿರ್ವಹಿಸುವಾಗ ಮಾಡುವ ಕೆಲ ತಪ್ಪುಗಳಿಂದಾಗಿ (Mistakes During Counting Notes), ಲಕ್ಷ್ಮೀ ಶಾಶ್ವತವಾಗಿ ದೂರವಾಗಿ ಬಿಡುತ್ತಾಳೆ.  

ನೋಟುಗಳನ್ನು ಎಣಿಸುವಾಗ ಎಂಜಲು ಬಳಸಬೇಡಿ :
ಅನೇಕ ಜನರು ನೋಟುಗಳನ್ನು (Note counting) ಎಣಿಸುವಾಗ ಎಂಜಲು ಬಳಸುತ್ತಾರೆ.  ನೋಟು ಎಂದರೆ ಅದು ಲಕ್ಷ್ಮೀ (Godess Lakshmi). ಹಾಗಾಗಿ ನೋಟಿಗೆ ಎಂಜಲು ಬಳಸುವುದು ಎಂದರೆ ತಾಯಿ ಲಕ್ಷ್ಮೀ ಗೆ ಅಗೌರವ ತೋರಿದಂತೆ.   ಈ ರೀತಿ ಮಾಡಿದಾಗ ಲಕ್ಷ್ಮೀ ಕೋಪಗೊಂಡು ಹೊರಟು ಹೋಗುತ್ತಾಳೆ. ಆದ್ದರಿಂದ, ನೋಟು ಎಣಿಸುವಾಗ ಈ ತಪ್ಪನ್ನು ಮಾಡಲೇ ಬೇಡಿ. 

ಇದನ್ನೂ ಓದಿ : ಮೂಗಿನ ವಿನ್ಯಾಸದ ಮೂಲಕ ತಿಳಿದುಕೊಳ್ಳಬಹುದು ವ್ಯಕ್ತಿಯ ಗುಣ ಸ್ವಭಾವ ಮತ್ತು ಭವಿಷ್ಯ

ಹಣವನ್ನು ಎಲ್ಲಿ ಇಡುವುದು ಎನ್ನುವುದು ಕೂಡಾ ಮುಖ್ಯ : 
ಕೆಲವರು ಹಣವನ್ನು ಪಕ್ಕದಲ್ಲಿ ಇಟ್ಟುಕೊಂಡೇ ಮಲಗುತ್ತಾರೆ.  ಇನ್ನು ಕೆಲವರು ಅಸ್ತವ್ಯಸ್ತವಾಗಿರುವ ರೀತಿಯಲ್ಲಿ  ಹಣವನ್ನು ಹಾಸಿಗೆ ಅಥವಾ ಮೇಜಿನ ಮೇಲೆ ಹರಡಿಕೊಂಡು ಇಡುತ್ತಾರೆ. ಹಣ ಮತ್ತು ಒಡವೆಗಳನ್ನು ಯಾವಾಗಲೂ ಬೀರು ಅಥವಾ ಸ್ವಚ್ಛ ಸ್ಥಳದಲ್ಲಿ ಇಡಬೇಕು.

ಹಣವನ್ನು ಎಸೆಯುವುದು : 
ಕೆಲವರು ಯಾವಾಗಲೂ ಹಣವನ್ನು ಇತರರಿಗೆ ಎಸೆಯುವ ಮೂಲಕ ನೀಡುತ್ತಾರೆ. ಈ ರೂಪದಲ್ಲಿ ಹಣದ ವಿನಿಮಯ ಒಳ್ಳೆಯದಲ್ಲ. ಹೀಗೆ ಮಾಡುವುದರಿಂದ ತಾಯಿ ಲಕ್ಷ್ಮೀಗೆ (Lakshmi) ಅಪಮಾನವಾಗುತ್ತದೆ. 

ಇದನ್ನೂ ಓದಿ : Vastu Shastra: ಮನೆಯಲ್ಲಿರುವ ಇಂತಹ ವಸ್ತುಗಳಿಂದ ಧನಹಾನಿ

 ಹಣ ಕೆಳಗೆ ಬಿದ್ದರೆ ? :
ಕೆಲವು ಕಾರಣಗಳಿಂದ ಹಣವು ನೆಲದ ಮೇಲೆ ಬಿದ್ದರೆ, ಅದನ್ನು ಮೇಲಕ್ಕೆತ್ತಿ ಅದಕ್ಕೆ ನಮಸ್ಕರಿಸಬೇಕು.  ಧಾರ್ಮಿಕ ನಂಬಿಕೆಗಳ ಪ್ರಕಾರ,  ಲಕ್ಷ್ಮೀ ಹಣದಲ್ಲಿ ನೆಲೆಸಿರುತ್ತಾಳೆ (blessings of Lakshmi). ಈ ಕಾರಣಕ್ಕಾಗಿಯೇ ಲಕ್ಷ್ಮೀ ಪೂಜೆಯ ಸಂದರ್ಭಗಳಲ್ಲಿ ಹಣವನ್ನು ಇಟ್ಟು ಪೂಜಿಸಲಾಗುತ್ತದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News