Health Tips: ಕಷಾಯ ಮಾಡುವಾಗ ಈ ತಪ್ಪನ್ನು ಮಾಡಲೇಬೇಡಿ, ಏನೆಂದು ತಿಳಿಯಿರಿ..!

ಕಷಾಯ ಮಾಡುವಾಗ ಜನರು ಅನೇಕ ತಪ್ಪುಗಳನ್ನು ಮಾಡುತ್ತಾರೆ, ಇದರಿಂದ ಅದು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲು ಪ್ರಾರಂಭಿಸುತ್ತದೆ ಎಂದು ವೈದ್ಯರು ಹೇಳುತ್ತಾರೆ.

Written by - Puttaraj K Alur | Last Updated : Jan 10, 2022, 05:15 PM IST
  • ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕಷಾಯವು ತುಂಬಾ ಪರಿಣಾಮಕಾರಿಯಾಗಿದೆ
  • ಕಷಾಯ ತಯಾರಿಸುವಾಗ ಬಳಸುವ ಪದಾರ್ಥಗಳು ಮತ್ತು ಕುದಿಸುವ ಸಮಯದ ಬಗ್ಗೆ ಗಮನವಹಿಸಬೇಕು
  • ಕರಿಮೆಣಸು, ದಾಲ್ಚಿನ್ನಿ, ಅರಿಶಿನ, ಅಶ್ವಗಂಧ, ಏಲಕ್ಕಿ ಮತ್ತು ಒಣ ಶುಂಠಿ ಸರಿಯಾದ ಪ್ರಮಾಣದಲ್ಲಿ ಬಳಸಬೇಕು
Health Tips: ಕಷಾಯ ಮಾಡುವಾಗ ಈ ತಪ್ಪನ್ನು ಮಾಡಲೇಬೇಡಿ, ಏನೆಂದು ತಿಳಿಯಿರಿ..!    title=
ಕಷಾಯವನ್ನು ತಯಾರಿಸುವ ಸರಿಯಾದ ವಿಧಾನ ತಿಳಿಯಿರಿ

ನವದೆಹಲಿ: ಭಾರತೀಯ ಆಯುರ್ವೇದ ಸಂಪ್ರದಾಯದ ಕಷಾಯವು ಕೊರೊನಾ ಅವಧಿಯಲ್ಲಿ ರೋಗನಿರೋಧಕ ಶಕ್ತಿ(Immunity Booster)ಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕಷಾಯ ಕುಡಿಯುವ ಟ್ರೆಂಡ್ ಹೆಚ್ಚಾದಾಗ ಅನೇಕ ಕಂಪನಿಗಳು ತಮ್ಮ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದವು. ಇದನ್ನು ತಯಾರಿಸುವ ವಿಧಾನವನ್ನು ಮಾರುಕಟ್ಟೆಯಲ್ಲಿ ಕಷಾಯ ಪ್ಯಾಕೆಟ್‌ನೊಳಗೆ ಚೀಟಿಯಲ್ಲಿ ಬರೆಯಲಾಗಿದೆ. ಜನರು ಮನೆಯಲ್ಲಿ ಇರುವ ಪದಾರ್ಥಗಳಿಂದ ಕಷಾಯವನ್ನು ತಯಾರಿಸುವಲ್ಲಿ ಅಥವಾ ಮಾರುಕಟ್ಟೆಯಿಂದ ಖರೀದಿಸಿದ ಕಷಾಯವನ್ನು ತಯಾರಿಸುವಲ್ಲಿ ಕೆಲ ತಪ್ಪುಗಳನ್ನು ಮಾಡುತ್ತಾರೆ. ಮುಂದೆ ಇದರ ಪರಿಣಾಮಗಳನ್ನು ಅನುಭವಿಸಬೇಕಾಗಬಹುದು. ಈ ಕಾರಣಕ್ಕೆ ದೇಹಕ್ಕೆ ಸಿಗಬೇಕಾದ ಪ್ರಯೋಜನಗಳು ಅನೇಕ ಬಾರಿ ಲಭಿಸುವುದಿಲ್ಲ.

ಕಷಾಯ ಮಾಡುವಾಗಿನ ತಪ್ಪುಗಳು

ಕಷಾಯ ಮಾಡುವಾಗ ಜನರು ಅನೇಕ ತಪ್ಪುಗಳನ್ನು ಮಾಡುತ್ತಾರೆ. ಇದರಿಂದ ಅದು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲು ಪ್ರಾರಂಭಿಸುತ್ತದೆ ಎಂದು ವೈದ್ಯರು ಹೇಳುತ್ತಾರೆ. ಮೂಗು ಮುಚ್ಚಿಕೊಂಡು ಕುಡಿಯುವುದು ಆಯುರ್ವೇದದ ವಿಷಯ ಎಂದು ಹೇಳುವವರಿಗೆ ಯಾವುದೇ ಹಾನಿಯಾಗುವುದಿಲ್ಲ. ಆದರೆ ಕಷಾಯದಲ್ಲಿ ಸರಿಯಾದ ಪ್ರಮಾಣದ ಪ್ರಯೋಜನಕಾರಿ ಅಂಶಗಳ ಬಗ್ಗೆ ಕಾಳಜಿ ವಹಿಸದಿದ್ದರೆ ಅದರ ಅನನುಕೂಲಗಳನ್ನು ಸಹ ಅನುಭವಿಸಬೇಕಾಗಬಹುದು ಎಂಬುದನ್ನು ಮರೆಯಬಾರದು.

ಇದನ್ನೂ ಓದಿ: ಬಿಡಿ ಕೊರೊನಾ ಭಯ.. ಇಲ್ಲಿದೆ ಮನೆಯಲ್ಲಿಯೇ ಕುಳಿತು Covid ಪರೀಕ್ಷೆ ಮಾಡಿಕೊಳ್ಳುವ ಸರಳ ವಿಧಾನ!

ರೋಗನಿರೋಧಕ ಶಕ್ತಿ ವರ್ಧಕ ಕಷಾಯ

ನಮ್ಮ ರೋಗನಿರೋಧಕ ವ್ಯವಸ್ಥೆಯು ದೇಹಕ್ಕೆ ರೋಗಗಳ ವಿರುದ್ಧ ಹೋರಾಡುವ ಶಕ್ತಿ(Natural Immunity Booster)ಯನ್ನು ನೀಡುತ್ತದೆ. ಆದ್ದರಿಂದ ಕೊರೊನಾ ಸೋಂಕಿನ ಅಪಾಯ ಹೆಚ್ಚಾದ ತಕ್ಷಣ ಕಷಾಯವನ್ನು ಕುಡಿಯಲು ವೈದ್ಯರು ಶಿಫಾರಸು ಮಾಡುತ್ತಾರೆ. ಏಕೆಂದರೆ ಇದನ್ನು ಸೇವಿಸುವುದರಿಂದ ದೇಹದಲ್ಲಿ ಇರುವ ರೋಗಗಳ ವಿರುದ್ಧ ಹೋರಾಡುವ ಶಕ್ತಿ ಹೆಚ್ಚಾಗುತ್ತದೆ. ಅಂದರೆ ಕಷಾಯವು ನಮ್ಮ ದೇಹದ ಸ್ಥಿತಿಗತಿಯನ್ನು ಸುಧಾರಿಸುತ್ತದೆ. ವೈದ್ಯರು ಹೇಳುವ ಪ್ರಕಾರ ಕಷಾಯ ಮಾಡುವಾಗ ತಿಳಿಯದೆ ತಪ್ಪುಗಳನ್ನು ಮಾಡುವುದರಿಂದ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಸಮಸ್ಯೆಗಳ ಬಗ್ಗೆ ತಜ್ಞರು ಹೇಳುವುದೇನು..?

ಕಷಾಯವನ್ನು ಸೇವಿಸುವವರ ವಯಸ್ಸು, ಹವಾಮಾನ ಮತ್ತು ಆರೋಗ್ಯ(Health)ದ ಮೇಲೆ ನಿಗಾ ಇಡುವುದು ಬಹಳ ಮುಖ್ಯ ಎನ್ನುತ್ತಾರೆ ತಜ್ಞರು. ಕಷಾಯವನ್ನು ನಿಯಮಿತವಾಗಿ ಸೇವಿಸುವ ದುರ್ಬಲ ಆರೋಗ್ಯದ ಜನರು ಅನೇಕ ದೊಡ್ಡ ಸಮಸ್ಯೆಗಳನ್ನು ಎದುರಿಸುತ್ತಾರೆ. ಮೂಗಿನಲ್ಲಿ ರಕ್ತಸ್ರಾವ, ಬಾಯಿ ಹುಣ್ಣು, ಆಮ್ಲೀಯತೆ, ಮೂತ್ರ ವಿಸರ್ಜನೆಯ ಸಮಸ್ಯೆಗಳು ಮತ್ತು ಜೀರ್ಣಕ್ರಿಯೆಯ ಸಮಸ್ಯೆಗಳು ಸುತ್ತುವರೆದಿರುತ್ತವೆ. ಅಂತಹ ಪರಿಸ್ಥಿತಿಯಲ್ಲಿ ನೀವು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

ಕಷಾಯ ಮಾಡಲು ಜನರು ಸಾಮಾನ್ಯವಾಗಿ ಕರಿಮೆಣಸು, ದಾಲ್ಚಿನ್ನಿ, ಅರಿಶಿನ, ಅಶ್ವಗಂಧ, ಏಲಕ್ಕಿ ಮತ್ತು ಒಣ ಶುಂಠಿಯನ್ನು ಸೇರಿಸುತ್ತಾರೆ. ಈ ಎಲ್ಲಾ ಅಂಶಗಳು ನಿಮ್ಮ ದೇಹವನ್ನು ತುಂಬಾ ಬಿಸಿಯಾಗಿಸುತ್ತದೆ. ದೇಹದ ಉಷ್ಣಾಂಶದಲ್ಲಿ ಹಠಾತ್ ಏರಿಕೆಯು ಮೂಗಿನ ರಕ್ತಸ್ರಾವ ಅಥವಾ ಆಮ್ಲೀಯತೆಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು.

ಇದನ್ನೂ ಓದಿ: Facial In Winter: ಚಳಿಗಾಲದಲ್ಲಿ ಫೇಶಿಯಲ್ ಮಾಡುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ

ಕಷಾಯವನ್ನು ಸರಿಯಾಗಿ ತಯಾರಿಸಬೇಕು

ಕಷಾಯವನ್ನು ತಯಾರಿಸಲು ಬಳುಸವ ವಸ್ತುಗಳು ಸರಿಯಾದ ಪ್ರಮಾಣದಲ್ಲಿರಬೇಕು. ಕಷಾಯ ಕುಡಿಯುವುದರಿಂದ ನೀವು ಸಮಸ್ಯೆ ಎದುರಿಸುತ್ತಿದ್ದರೆ ದಾಲ್ಚಿನ್ನಿ, ಕರಿಮೆಣಸು, ಅಶ್ವಗಂಧ ಮತ್ತು ಒಣ ಶುಂಠಿಯ ಪ್ರಮಾಣವನ್ನು ಕಡಿಮೆ ಮಾಡಿ. ನಿಮಗೆ ಡಿಕಾಕ್ಷನ್ ಕುಡಿಯುವ ಅಭ್ಯಾಸವಿಲ್ಲದಿದ್ದರೆ ಆಗಾಗ ಕುಡಿಯುವವರು ಒಂದು ಕಪ್‌ಗಿಂತ ಹೆಚ್ಚು ಕಷಾಯವನ್ನು ಕುಡಿಯಬಾರದು. ಅದೇ ರೀತಿ ಪಿತ್ತದ ಸಮಸ್ಯೆ ಹೊಂದಿರುವ ಜನರು ಕರಿಮೆಣಸು ಮತ್ತು ದಾಲ್ಚಿನ್ನಿ ಬಳಸುವಲ್ಲಿ ವಿಶೇಷ ಕಾಳಜಿ ವಹಿಸಬೇಕು. ಕಷಾಯ ಮಾಡುವಾಗ ಪಾತ್ರೆಯಲ್ಲಿ ಕೇವಲ 100 ಮಿಲಿ ನೀರನ್ನು ಹಾಕಿ. ನಂತರ ಅಗತ್ಯ ವಸ್ತುಗಳನ್ನು ಬೆರೆಸಿದ ನಂತರ ಕಷಾಯ 50 ಮಿಲಿ ಅಂದರೆ ಅರ್ಧ ಆಗುವವರೆಗೆ ಕುದಿಸಬೇಕು(Kadha Making Process). ನಂತರ ಅದನ್ನು ಫಿಲ್ಟರ್ ಮಾಡಿ ಸೇವಿಸುವುದು ನಿಮ್ಮ ಆರೋಗ್ಯಕ್ಕೆ ಉತ್ತಮ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News