ಜನವರಿ 2023ರಿಂದ ಈ ರಾಶಿಯವರಿಗೆ ಆರಂಭವಾಗಲಿದೆ ಏಳೂವರೆ ವರ್ಷದ ಶನಿ ದೆಸೆ .!

ಶನಿಯು ಮಕರ ರಾಶಿಯನ್ನು ತೊರೆದು ಕುಂಭ ರಾಶಿಯನ್ನು ಪ್ರವೇಶಿಸುತ್ತಿದ್ದಂತೆ ಕೆಲವು ರಾಶಿಯವರು ಸಾಡೇಸಾತಿಯಿಂದ ಮುಕ್ತಿ ಪಡೆದರೆ, ಇನ್ನು ಕೆಲವು ರಾಶಿಯವರಿಗೆ ಏಳೂವರೆ  ವರ್ಷದ ಶನಿ ದೆಸೆ ಆರಂಭವಾಗಲಿದೆ.  

Written by - Ranjitha R K | Last Updated : Oct 17, 2022, 12:19 PM IST
  • ಶನಿಯನ್ನು ಅತ್ಯಂತ ಪ್ರಮುಖ ಗ್ರಹಗಳಲ್ಲಿ ಒಂದು ಎಂದು ಹೇಳಲಾಗುತ್ತದೆ.
  • ಶನಿಯು ಜನವರಿ 17, 2023 ರಂದು ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ.
  • ಕೆಲವು ರಾಶಿಯವರಿಗೆ ಏಳೂವರೆ ವರ್ಷದ ಶನಿ ದೆಸೆ ಆರಂಭವಾಗಲಿದೆ.
ಜನವರಿ 2023ರಿಂದ ಈ ರಾಶಿಯವರಿಗೆ ಆರಂಭವಾಗಲಿದೆ ಏಳೂವರೆ ವರ್ಷದ ಶನಿ ದೆಸೆ .!   title=
Saturn Transit 2023

ಬೆಂಗಳೂರು :  ಶನಿಯು ಒಂದು ಸ್ಥಾನದಲ್ಲಿ ದೀರ್ಘಕಾಲ ಉಳಿಯುವ ಕಾರಣ, ಜ್ಯೋತಿಷ್ಯದಲ್ಲಿ, ಶನಿಯನ್ನು ಅತ್ಯಂತ ಪ್ರಮುಖ ಗ್ರಹಗಳಲ್ಲಿ ಒಂದು ಎಂದು ಹೇಳಲಾಗುತ್ತದೆ. ಶನಿಗ್ರಹದ ಶುಭ ಮತ್ತು ಅಶುಭ ಪರಿಣಾಮಗಳು ವ್ಯಕ್ತಿಯ ಜೀವನದ ಮೇಲೆ ದೊಡ್ಡ ಪರಿಣಾಮವನ್ನೇ   ಬೀರುತ್ತವೆ. ಏಪ್ರಿಲ್ 2022 ರಲ್ಲಿ, ಶನಿ ಮಹಾತ್ಮ ತನ್ನ ರಾಶಿಯನ್ನು  ಬದಲಾಯಿಸಿದ್ದನು. ನಂತರ, ಜುಲೈ 2022 ರಲ್ಲಿ ಶನಿಯ ಹಿಮ್ಮುಖ ಚಲನೆ ಆರಂಭವಾಯಿತು. ಇದೀಗ 23 ಅಕ್ಟೋಬರ್ ನಿಂದ ಶನಿಯ ನೇರ ಚಲನೆ ಆರಂಭವಾಗಲಿದೆ. ನಂತರ ಶನಿಯು ಜನವರಿ 17, 2023 ರಂದು ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಶನಿಯು ಮಕರ ರಾಶಿಯನ್ನು ತೊರೆದು ಕುಂಭ ರಾಶಿಯನ್ನು ಪ್ರವೇಶಿಸುತ್ತಿದ್ದಂತೆ ಕೆಲವು ರಾಶಿಯವರು ಸಾಡೇಸಾತಿಯಿಂದ ಮುಕ್ತಿ ಪಡೆದರೆ, ಇನ್ನು ಕೆಲವು ರಾಶಿಯವರಿಗೆ ಏಳೂವರೆ  ವರ್ಷದ ಶನಿ ದೆಸೆ ಆರಂಭವಾಗಲಿದೆ.  

ಈ ರಾಶಿಯವರಿಗೆ  ಶನಿ ಸಾಡೇಸಾತಿ ಆರಂಭ : 
ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜನವರಿ 17, 2023 ರಂದು ಶನಿಯು ಕುಂಭ ರಾಶಿಯನ್ನು ಪ್ರವೇಶಿಸಿದ ಕೂಡಲೇ ಮಕರ, ಕುಂಭ ಮತ್ತು ಮೀನ ರಾಶಿಯವರಿಗೆ ಏಳೂವರೆ ವರ್ಷದ ಶನಿ ದೆಸೆ ಆರಂಭವಾಗಲಿದೆ. ಶನಿಸಾಡೇ ಸಾತಿ ಅನೇಕ ರೀತಿಯಲ್ಲಿ ದುಃಖವನ್ನು ಉಂಟುಮಾಡುತ್ತದೆ. ಸಾಡೇಸಾತಿ  ಸಮಯದಲ್ಲಿ ಉದ್ಯೋಗ-ವ್ಯವಹಾರದಲ್ಲಿ ನಷ್ಟ, ಅನಗತ್ಯ ಅಡೆತಡೆಗಳು,  ಹಣ ನಷ್ಟ, ಸಂಬಂಧಗಳಲ್ಲಿ ಬಿರುಕು ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಅಪಘಾತಗಳೂ ಸಂಭವಿಸುತ್ತವೆ. ಆದರೆ, ಯಾರ ಜಾತಕದಲ್ಲಿ ಶನಿಯ ಸ್ಥಾನವು ಮಂಗಳಕರವಾಗಿರುವುದೋ ಅವರು ಅಷ್ಟೊಂದು ತೊಂದರೆ ಅನುಭವಿಸುವುದಿಲ್ಲ. ಇದಲ್ಲದೇ ಈ ಸಂದರ್ಭದಲ್ಲಿ ಶನಿ ದೇವನಿಗೆ ಪ್ರಿಯವಾದ ಕೆಲಸಗಳನ್ನು ಮಾಡುತ್ತಾ ಬಂದರೆ ಶನಿದೇವನ ಕೃಪೆಗೆ ಪಾತ್ರರಾಗಬಹುದು.  

ಇದನ್ನೂ ಓದಿ : ಅಖಂಡ ಸಾಮ್ರಾಜ್ಯದ ಯೋಗ ರೂಪಿಸುತ್ತಿರುವ ಗುರು, ಕೋಟಿಗಳ ಒಡೆಯರಾಗುತ್ತಾರೆ ಈ ಮೂರು ರಾಶಿಯವರು .!

ಶನಿ ದೋಷದ ಪರಿಹಾರಕ್ಕೆ ಏನು ಮಾಡಬೇಕು ? : 
ಏಳೂವರೆ ವರ್ಷದ ಶನಿ ದೆಸೆ ಅಥವಾ ಎರಡೂವರೆ ವರ್ಷದ ಶನಿ ದೆಸೆಯಿಂದ ಉಂಟಾಗುವ ಸಂಕಟಗಳಿಂದ ಮುಕ್ತಿ ಪಡೆಯಲು ಕೆಲವು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಇದಕ್ಕಾಗಿ ಪ್ರತಿ ಶನಿವಾರ ಶನಿ ದೇವಾಲಯಕ್ಕೆ ಹೋಗಿ, ಶನಿದೇವನಿಗೆ ಎಣ್ಣೆಯನ್ನು ಅರ್ಪಿಸಬೇಕು.  ಅಶ್ವಥ ಮರದ ಕೆಳಗೆ  ಎಳ್ಳೆಣ್ಣೆ ದೀಪವನ್ನು ಬೆಳಗಬೇಕು. ಅಸಹಾಯಕ, ಬಡವರಿಗೆ ಸಹಾಯ ಮಾಡಬೇಕು. ಈ ವರ್ಗದ ಜನರಿಗೆ ದಾನ ಮಾಡಿದರೆ  ಇನ್ನೂ ಒಳ್ಳೆಯದು. ಮಹಿಳೆಯರನ್ನು ಗೌರವಿಸಿ. ಮೂಕ ಪ್ರಾಣಿಗಳಿಗೆ ಆಹಾರ ನೀಡಿ. ಅದರಲ್ಲೂ ನಾಯಿಗಳಿಗೆ ಆಹಾರ ನೀಡಿದರೆ ಶುಭ ಫಲ ಸಿಗುವುದು ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ : Solar Eclipse 2022: ಸೂರ್ಯಗ್ರಹಣದಂದು ರೂಪುಗೊಳ್ಳಲಿದೆ 'ಚತುರ್ಗ್ರಾಹಿ ಯೋಗ': ಈ 3 ರಾಶಿಗಳಿಗೆ ಭಾರೀ ಅಪಾಯ!

 

( ಸೂಚನೆ :  ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News