Hair Fall Remedy: ಕೂದಲುದುರುವಿಕೆ ಸಮಸ್ಯೆಗೆ ರಾಮಬಾಣ ಚಿಕಿತ್ಸೆ ಈ ಬಯೊಟಿನ್ ರಿಚ್ ಪೌಡರ್!

Biotine Powder For Hair Fall: ನಮ್ಮ ದೇಹದಲ್ಲಿ ಬಯೋಟಿನ್ ಗಳ ಕೊರತೆಯು ಕೂದಲು ಉದುರುವಿಕೆಗೆ ಕಾರಣವಾಗಬಹುದು (homemade biotin powder benefits), ಇದನ್ನು ತಪ್ಪಿಸಲು ಬಯೋಟಿನ್ ಸಮೃದ್ಧವಾಗಿರುವ ಈ ಪುಡಿಯನ್ನು ನಿಮ್ಮ ಆಹಾರದಲ್ಲಿ ಸೇರಿಸುವುದು ಮುಖ್ಯ (Lifestyle News In Kannada).  

Written by - Nitin Tabib | Last Updated : Mar 30, 2024, 01:13 PM IST
  • ಕೂದಲು ಉದುರುವಿಕೆಯ ಸಮಸ್ಯೆಯನ್ನು ಕಡಿಮೆ ಮಾಡಲು, ನಿಮ್ಮ ಆಹಾರದಲ್ಲಿ ಬಯೋಟಿನ್ ಸಮೃದ್ಧವಾಗಿರುವ ಪುಡಿಯನ್ನು ಸೇರಿಸಿಕೊಳ್ಳಬಹುದು.
  • ಇದರೊಂದಿಗೆ, ನಿಮ್ಮ ದಿನಚರಿಯಲ್ಲಿ ನೀವು ಪೌಷ್ಟಿಕಾಂಶದ ಆಹಾರಗಳು,
  • ಆವ್ಯಾಯಾಮ ಮತ್ತು ಕೂದಲಿನ ಆರೈಕೆಯನ್ನು ಸಹ ಸೇರಿಸಿಕೊಳ್ಳಬೇಕು.
Hair Fall Remedy: ಕೂದಲುದುರುವಿಕೆ ಸಮಸ್ಯೆಗೆ ರಾಮಬಾಣ ಚಿಕಿತ್ಸೆ ಈ ಬಯೊಟಿನ್ ರಿಚ್ ಪೌಡರ್! title=

Hair Fall Home Remedy: ಕೂದಲು ಉದುರುವಿಕೆಯ ಹೆಚ್ಚುತ್ತಿರುವ ಸಮಸ್ಯೆ ನಂತರದ ದಿನಗಳಲ್ಲಿ ಜನರಲ್ಲಿ ಬೋಳು ತಲೆ ಸಮಸ್ಯೆಗೆ ಕಾರಣವಾಗುತ್ತದೆ.  ಕೂದಲು ಸೀಳುವಿಕೆ ಮತ್ತು ಉದುರುವುದನ್ನು ತಡೆಯಲು, ಜನರು ಹೆಚ್ಚಾಗಿ ದುಬಾರಿ ಶಾಂಪೂಗಳು, ಕಂಡಿಷನರ್ಗಳು ಮತ್ತು ಹೇರ್ ಮಾಸ್ಕ್ಗಳನ್ನು ಬಳಸುತ್ತಾರೆ, ಆದರೂ ಕೂಡ ಕೆಲವರು ಈ ಸಮಸ್ಯೆಯಿಂದ ಹೊರಬರುವುದಿಲ್ಲ. ಬಾಸ್ತವದಲ್ಲಿ ಕೂದಲು ಉದುರುವಿಕೆ ನಿಮ್ಮ ದೇಹದಲ್ಲಿ ಬಯೋಟಿನ್ ಕೊರತೆಯಿಂದ ಕೂಡ ಉಂಟಾಗುತ್ತದೆ. ಬಯೋಟಿನ್ ಅನ್ನು ವಿಟಮಿನ್ ಬಿ 7 ಎಂದೂ ಕರೆಯುತ್ತಾರೆ, ಇದು ವಿಟಮಿನ್ ಬಿ ಯ ಒಂದು ವಿಧವಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಆರೋಗ್ಯಕರ ಆಹಾರ, ವ್ಯಾಯಾಮ ಮತ್ತು ಸರಿಯಾದ ಕೂದಲ ಆರೈಕೆಯ ನಂತರವೂ ಕೂದಲು ಉದುರುವಿಕೆಯ ಸಮಸ್ಯೆಯನ್ನು ಕಡಿಮೆ ಮಾಡಲು ನಿಮಗೆ ಸಾಧ್ಯವಾಗದಿದ್ದರೆ, ಬಯೋಟಿನ್ ಕೊರತೆಯಿಂದ ಕೂದಲು ಉದುರುವುದು ಇದಕ್ಕೆ ಒಂದು ಕಾರಣ. ಕೂದಲು ಉದುರುವಿಕೆಯ ಸಮಸ್ಯೆಯನ್ನು ಕಡಿಮೆ ಮಾಡಲು ಬಯೋಟಿನ್ ರಿಚ್ ಹೇಗೆ ತಯಾರಿಸಬೇಕು (how to prepare homemade biotin powder for hair growth) ಮತ್ತು ಇದರ ಸೇವನೆಯು ಕೂದಲು ಉದುರುವಿಕೆಯ ಸಮಸ್ಯೆಯನ್ನು ಹೇಗೆ ಕಡಿಮೆ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. (Lifestyle News In Kannada)

ಕೂದಲುದುರುವಿಕೆ ಸಮಸ್ಯೆ ಪರಿಹಾರಿಸಲು ಬಯೊಟಿನ್ ಪೌಡರ್ ಹೇಗೆ ತಯಾರಿಸಬೇಕು? (How to use homemade biotin powder for hair fall, )
ಬೇಕಾಗುವ ಸಾಮಗ್ರಿಗಳು (how to use biotin powder for hair growth)

>> ಬಾದಾಮಿ - 1/2 ಕಪ್
>> ಆಕರೋಟು - 1/2 ಕಪ್
>> ಕುಂಬಳಕಾಯಿ ಬೀಜಗಳು - 1/2 ಕಪ್
>> ಕರಿಬೇವಿನ ಪುಡಿ - 1/4 ಕಪ್
>> ಆಮ್ಲಾ ಪುಡಿ - 1/4 ಕಪ್

ತಯಾರಿಸುವ ವಿಧಾನ (Best homemade biotin powder for hair fall)
>> ಮಿಕ್ಸರ್ ಜಾರ್‌ನಲ್ಲಿ ಬಾದಾಮಿ ಮತ್ತು ವಾಲ್‌ನಟ್‌ಗಳನ್ನು ಹಾಕಿ ನುಣ್ಣಗೆ ಪುಡಿ ಮಾಡಿ.
>> ಈಗ ಕುಂಬಳಕಾಯಿ ಬೀಜಗಳನ್ನು ಸ್ವಲ್ಪ ಹುರಿದು ಮಿಕ್ಸರ್ ಜಾರ್‌ಗೆ ಹಾಕಿ ರುಬ್ಬಿಕೊಳ್ಳಿ.
>> ಕರಿಬೇವಿನ ಪುಡಿ, ಆಮ್ಲಾ ಪುಡಿ, ಕುಂಬಳಕಾಯಿ ಬೀಜಗಳು, ಬಾದಾಮಿ ಮತ್ತು ವಾಲ್‌ನಟ್‌ಗಳನ್ನು ತಯಾರಿಸಿದ ಪುಡಿಯನ್ನು ಒಂದು ಪಾತ್ರೆಯಲ್ಲಿ ಹಾಕಿ.

ವಾಲ್ನಟ್
ಒಮೆಗಾ 3 ಕೊಬ್ಬಿನಾಮ್ಲಗಳು ಇದರಲ್ಲಿ ಹೇರಳ ಪ್ರಮಾಣದಲಿ ಕಂಡುಬರುತ್ತವೆ, ಇದು ನಿಮ್ಮ ನೆತ್ತಿಯ ರಂಧ್ರಗಳನ್ನು ಪೋಷಿಸುತ್ತದೆ ಮತ್ತು ಕೂದಲು ಉದುರುವಿಕೆಯ ಸಮಸ್ಯೆಯನ್ನು ತೊಡೆದುಹಾಕುತ್ತದೆ.

ಕುಂಬಳಕಾಯಿ ಬೀಜಗಳು
ಕುಂಬಳಕಾಯಿ ಬೀಜಗಳಲ್ಲಿ ಸತುವು ಕಂಡುಬರುತ್ತದೆ, ಇದು ನಿಮ್ಮ ನೆತ್ತಿಯನ್ನು ಆರೋಗ್ಯಕರವಾಗಿಸುತ್ತದೆ ಮತ್ತು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.

ಕರಿಬೇವು
ಕರಿಬೇವಿನ ಎಲೆಗಳಲ್ಲಿ ಹೇರಳ ಪ್ರಮಾಣದ ಕಬ್ಬಿಣಾಂಶವಿದ್ದು, ಇವುಗಳ ಸೇವನೆಯು ನೆತ್ತಿಯ ರಂಧ್ರಗಳನ್ನು ಆರೋಗ್ಯಕರವಾಗಿಡಲು ಮತ್ತು ಬೇರುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ, ಇದು ಕೂದಲು ಉದುರುವಿಕೆಯ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.

ಆಮ್ಲಾ ಪುಡಿ
ವಿಟಮಿನ್ ಸಿ ಮತ್ತು ಆಂಟಿ-ಆಕ್ಸಿಡೆಂಟ್ ಗುಣಲಕ್ಷಣಗಳು ಆಮ್ಲಾ ಪುಡಿಯಲ್ಲಿ ಕಂಡುಬರುತ್ತವೆ, ಇದು ಕೂದಲನ್ನು ಬೇರುಗಳಿಂದ ಬಲಪಡಿಸುತ್ತದೆ, ಇದು ಕೂದಲು ಸೀಳುವಿಕೆ ಅಥವಾ ಉದುರುವಿಕೆಯನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ-Relationship Tips: ಮಹಿಳೆಯರು ನೀಡುವ ಈ ಸಂಕೇತಗಳು, ಶಾರೀರಿಕ ಸಂಬಂಧಕ್ಕೆ ರೆಡಿ ಎನ್ನುತ್ತವೆ!

ಕೂದಲು ಉದುರುವಿಕೆಯ ಸಮಸ್ಯೆಯನ್ನು ಕಡಿಮೆ ಮಾಡಲು, ನಿಮ್ಮ ಆಹಾರದಲ್ಲಿ ಬಯೋಟಿನ್ ಸಮೃದ್ಧವಾಗಿರುವ ಪುಡಿಯನ್ನು ಸೇರಿಸಿಕೊಳ್ಳಬಹುದು. ಇದರೊಂದಿಗೆ, ನಿಮ್ಮ ದಿನಚರಿಯಲ್ಲಿ ನೀವು ಪೌಷ್ಟಿಕಾಂಶದ ಆಹಾರಗಳು, ವ್ಯಾಯಾಮ ಮತ್ತು ಕೂದಲಿನ ಆರೈಕೆಯನ್ನು ಸಹ ಸೇರಿಸಿಕೊಳ್ಳಬೇಕು.

ಇದನ್ನೂ ಓದಿ-Wedding Tips: ಇಂತಹ ವ್ಯಕ್ತಿಯ ಜೊತೆಗೆ ವಿವಾಹವಾದ್ರೆ ಜೀವನವೇ ನರಕವಾಗುತ್ತದೆ

(Disclaimer- ಆತ್ಮೀಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮ್ಮಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀವು ಎಲ್ಲಾದರು ಓದಿದ್ದರೆ, ಅದನ್ನು ಅನುಸರಿಸುವ ಮುನ್ನ ವೈದ್ಯರನ್ನು ಅಥವಾ ವಿಷಯ ತಜ್ನರನ್ನು ಸಂಪರ್ಕಿಸಿ.)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News