ಬೇಸಿಗೆಯಲ್ಲಿ ಸೊಂಫು ಸೇವನೆಯಿಂದಾಗುವ ಈ 5 ಅದ್ಭುತ ಲಾಭಗಳು ನಿಮಗೆ ತಿಳಿದಿವೆಯೇ?

Fennel Seeds Benefits: ಬೇಸಿಗೆಯಲ್ಲಿ ಸೊಂಫು ಸೇವನೆಯು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಬನ್ನಿ ಅದರ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ,   

Written by - Nitin Tabib | Last Updated : Apr 28, 2024, 11:35 AM IST
  • ಜೀವಸತ್ವಗಳು, ಕ್ಯಾಲ್ಸಿಯಂ, ಫೈಬರ್, ಕಬ್ಬಿಣ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು
  • ಸತುವುಗಳಂತಹ ಅನೇಕ ಪೋಷಕಾಂಶಗಳು ಸೊಂಫಿನಲ್ಲಿ ಕಂಡುಬರುತ್ತವೆ, ಅ
  • ವು ಅನೇಕ ರೋಗಗಳನ್ನು ಗುಣಪಡಿಸಲು ಸಹಾಯ ಮಾಡುತ್ತವೆ. ಇದು ಬೇಸಿಗೆಯಲ್ಲಿ ದೇಹವನ್ನು ತೇವಾಂಶದಿಂದ ಇಡುತ್ತದೆ.
ಬೇಸಿಗೆಯಲ್ಲಿ ಸೊಂಫು ಸೇವನೆಯಿಂದಾಗುವ ಈ 5 ಅದ್ಭುತ ಲಾಭಗಳು ನಿಮಗೆ ತಿಳಿದಿವೆಯೇ? title=

Fennel Seeds Health Benefits: ಬೇಸಿಗೆಯಲ್ಲಿ, ಜನರು ದೇಹವನ್ನು ತಂಪಾಗಿಸಲು ಮತ್ತು ಶಾಖದ ಹೊಡೆತದಿಂದ ಪಾರಾಗಲು ವಿವಿಧ ರೀತಿಯ ಪದಾರ್ಥಗಳನ್ನು ಸೇವಿಸುತ್ತಾರೆ.  ಅವುಗಳಲ್ಲಿ ಸೊಂಫು ಕೂಡ ಒಂದಾಗಿದೆ. ಬೇಸಿಗೆಯಲ್ಲಿ ಸೋಂಪು ಸೇವನೆಯು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ವಾಸ್ತವದಲ್ಲಿ ಸೊಂಫು ತಣ್ಣನೆಯ ಗುಣಧರ್ಮ ಹೊಂದಿದೆ. ಹೀಗಾಗಿ ಇದು ದೇಹವನ್ನು ತಂಪಾಗಿರಿಸುತ್ತದೆ ಮತ್ತು ಹೊಟ್ಟೆಯಲ್ಲಿನ ಶಾಖವನ್ನು ಶಮನಗೊಳಿಸುತ್ತದೆ. ಜೀವಸತ್ವಗಳು, ಕ್ಯಾಲ್ಸಿಯಂ, ಫೈಬರ್, ಕಬ್ಬಿಣ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಸತುವುಗಳಂತಹ ಅನೇಕ ಪೋಷಕಾಂಶಗಳು ಸೊಂಫಿನಲ್ಲಿ ಕಂಡುಬರುತ್ತವೆ, ಅವು ಅನೇಕ ರೋಗಗಳನ್ನು ಗುಣಪಡಿಸಲು ಸಹಾಯ ಮಾಡುತ್ತವೆ. ಇದು ಬೇಸಿಗೆಯಲ್ಲಿ ದೇಹವನ್ನು ತೇವಾಂಶದಿಂದ ಇಡುತ್ತದೆ. ಇದರ ನಿಯಮಿತ ಸೇವನೆಯು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಬನ್ನಿ, ಈ ಲೇಖನದಲ್ಲಿ ಡಯೆಟಿಟ್‌ಫಿಟ್‌ನ ಡಯೆಟಿಷಿಯನ್ ಅಬರ್ನಾ ಮತಿವನನ್ ಅವರಿಂದ ಬೇಸಿಗೆಯಲ್ಲಿ ಸೊಂಫು ಸೇವನೆಯಿಂದ ಏನು ಪ್ರಯೋಜನಗಳು ಮತ್ತು ಅದನ್ನು ಆಹಾರದಲ್ಲಿ ಹೇಗೆ ಶಾಮೀಲುಗೊಳಿಸಬೇಕು ಎಂಬುದನ್ನೂ ತಿಳಿದುಕೊಳ್ಳೋಣ, 

ದೇಹ ತಂಪಾಗಿಸುತ್ತದೆ
ಬೇಸಿಗೆಯಲ್ಲಿ ಸೊಂಫು ಸೇವನೆಯಿಂದ ದೇಹ ತಂಪಾಗುತ್ತದೆ. ಇದು ಒಂದು ತಂಪು ಗುಣಧರ್ಮದ ಪದಾರ್ಥವಾಗಿದೆ, ಇದು ದೇಹವನ್ನು ಒಳಗಿನಿಂದ ತಂಪಾಗಿಡಲು ಸಹಾಯ ಮಾಡುತ್ತದೆ. ಇದಲ್ಲದೆ, ಇದು ಹೊಟ್ಟೆಯಲ್ಲಿನ ಶಾಖ ಮತ್ತು ಸುಡುವ ಸಂವೇದನೆಯನ್ನು ಶಾಂತಗೊಳಿಸುತ್ತದೆ. ಇದರ ಸೇವನೆಯು ಶಾಖದ ಹೊಡೆತವನ್ನು ತಡೆಯಲು ಸಹಾಯ ಮಾಡುತ್ತದೆ.

ಜೀರ್ಣಾಂಗ ವ್ಯವಸ್ಥೆ ಬಲಪಡಿಸುತ್ತದೆ 
ಬೇಸಿಗೆಯಲ್ಲಿ ಸೊಂಫು ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆ ಆರೋಗ್ಯಕರವಾಗಿರುತ್ತದೆ. ಇದರ ಸೇವನೆಯು ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸುತ್ತದೆ. ಇದರಲ್ಲಿ ಹೇರಳ ಪ್ರಮಾಣದ ಫೈಬರ್ ಇರುತ್ತದೆ, ಇದು ಜೀರ್ಣಕ್ರಿಯೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದನ್ನು ಸೇವಿಸುವುದರಿಂದ ಮಲಬದ್ಧತೆ, ಅಜೀರ್ಣ, ಗ್ಯಾಸ್ ಮತ್ತು ಅಸಿಡಿಟಿಯಂತಹ ಜೀರ್ಣಕಾರಿ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಸೊಂಫನ್ನು ನಿಯಮಿತವಾಗಿ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.  ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳು ಇದರಲ್ಲಿ ಹೇರಳ ಪ್ರಮಾಣದಲ್ಲಿರುತ್ತವೆ, ಅವು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತವೆ. ಹೇಗಿರುವಾಗ ಇದನ್ನು ಸೇವಿಸುವ ಮೂಲಕ ನೀವು ಅನೇಕ ರೀತಿಯ ಸೋಂಕುಗಳು ಮತ್ತು ರೋಗಗಳಿಗೆ ಗುರಿಯಾಗುವುದನ್ನು ತಪ್ಪಿಸಬಹುದು.

ರಕ್ತದೊತ್ತಡ ನಿಯಂತ್ರಿಸುತ್ತದೆ
ಬೇಸಿಗೆಯಲ್ಲಿ ಜನರಲ್ಲಿ ಅಧಿಕ ರಕ್ತದೊತ್ತಡದ ಸಮಸ್ಯೆ ಗಮನಾರ್ಹವಾಗಿ ಹೆಚ್ಚಾಗುತ್ತದೆ. ಹೀಗಿರುವಾಗ ಸೊಂಫು ಸೇವನೆಯು ಅಧಿಕ ಬಿಪಿಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ವಾಸ್ತವದಲ್ಲಿ, ಇದರಲ್ಲಿ ಪೊಟ್ಯಾಸಿಯಮ್ ಇರುತ್ತದೆ, ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ದೇಹ ನಿರ್ವಿಷಗೊಳಿಸುತ್ತದೆ
ಸೊಂಫಿನಲ್ಲಿ ಹೇರಳ ಪ್ರಮಾಣದಲ್ಲಿ ಆಂಟಿಆಕ್ಸಿಡೆಂಟ್ ಗಳಿವೆ, ಅವು ದೇಹದಲ್ಲಿರುವ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತವೆ. ಅವು ದೇಹವನ್ನು ನಿರ್ವಿಷಗೊಳಿಸುತ್ತವೆ. ಇದಲ್ಲದೆ  ಬೇಸಿಗೆಯಲ್ಲಿ ಇದರ ಸೇವನೆ ದೇಹ ತೇವಾಂಶದಿಂದ ಕೂಡಿರುವಂತೆ ನೋಡಿಕೊಳ್ಳುತ್ತದೆ..

ಆಹಾರದಲ್ಲಿ ಸೊಂಫು ಶಾಮೀಲುಗೊಳಿಸುವ ಮಾರ್ಗಗಳು
ಬೇಸಿಗೆಯಲ್ಲಿ, ನೀವು ಅನೇಕ ವಿಧಗಳಲ್ಲಿ ನಿಮ್ಮ ಆಹಾರದಲ್ಲಿ ಸೊಂಫನ್ನು ನೀವು ಶಾಮೀಲುಗೊಳಿಸಬಹುದು. ನೀವು ಸೊಂಫು ಸಿರಪ್, ಸೊಂಫು ನೀರು ಮತ್ತು ಸೊಂಫು ಚಹಾ ತಯಾರಿಸಿ ಸೇವಿಸಬಹುದು.  ಇದಲ್ಲದೆ, ಊಟದ ನಂತರ ನೀವು ಸೊಂಫನ್ನು  ಅನ್ನು ಮೌತ್ ಫ್ರೆಶ್ನರ್ ಆಗಿ ಬಳಸಬಹುದು.

ಇದನ್ನೂ ಓದಿ-Moringa Health Benefits: ಪೋಷಕಾಂಶಗಳ ನಿಧಿ ಈ ಗಿಡ, ಹೇಗೆ ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ ಇಲ್ಲಿ ತಿಳಿದುಕೊಳ್ಳಿ!

ಒಂದು ದಿನದಲ್ಲಿ ಪ್ರಮಾಣದಲ್ಲಿ ಸೊಂಫನ್ನು ಸೇವಿಸಬಹುದು?
ಸೊಂಫನ್ನು ಯಾವಾಗಲೂ ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು ಎಂಬುದನ್ನು ನೆನಪಿನಲ್ಲಿಡಿ, ಇಲ್ಲದಿದ್ದರೆ ಅದು ನಿಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಡಯೆಟಿಷಿಯನ್ ಅಬರ್ನಾ ಪ್ರಕಾರ, ನೀವು ದಿನಕ್ಕೆ ಒಂದರಿಂದ ಎರಡು ಚಮಚ ಸೊಂಫನ್ನು ಸೇವಿಸಬಹುದು. ಇದೇ ವೇಳೆ ನೀವು ಯಾವುದೇ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದರೆ, ಅದನ್ನು ಸೇವಿಸುವ ಮೊದಲು ಖಂಡಿತವಾಗಿಯೂ ನಿಮ್ಮ ವೈದ್ಯರು ಅಥವಾ ಆರೋಗ್ಯ ತಜ್ಞರಿಂದ ಸಲಹೆ ಪಡೆಯಿರಿ.

ಇದನ್ನೂ ಓದಿ-Hair Fall Remedy: ಕೂದಲುದುರುವ ಸಮಸ್ಯೆಗೆ ಈ ಎರಡು ಎಲೆಗಳ ಹೇಯರ್ ಮಾಸ್ಕ್ ರಾಮಬಾಣ ಉಪಾಯ!

(ಹಕ್ಕುತ್ಯಾಗ- ಆತ್ಮೀಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮ್ಮಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀವು ಎಲ್ಲಾದರು ಓದಿದ್ದರೆ, ಅದನ್ನು ಅನುಸರಿಸುವ ಮುನ್ನ ವೈದ್ಯರನ್ನು ಅಥವಾ ವಿಷಯ ತಜ್ನರನ್ನು  ಸಂಪರ್ಕಿಸಿ.)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News