ಇನ್ನು ಮೂರು ತಿಂಗಳಲ್ಲಿ ಶನಿ ದೆಸೆಯಿಂದ ಮುಕ್ತಿ ಪಡೆಯಲಿದ್ದಾರೆ ಈ ರಾಶಿಯವರು, ತೆರೆದುಕೊಳ್ಳುವುದು ಪ್ರಗತಿಯ ಹಾದಿ

ಶನಿಯು ಕುಂಭ ರಾಶಿಯಲ್ಲಿ ಸಂಕ್ರಮಿಸಿದಾಗ, ಕೆಲವು ರಾಶಿಯವರಿಗೆ ಸಾಡೇ ಸತಿ ಮತ್ತು ಧೈಯ್ಯಾದಿಂದ  ಮುಕ್ತಿ ಸಿಗಲಿದೆ. ಮತ್ತೊಂದೆಡೆ, ಕೆಲವು ರಾಶಿಯವರು ಶನಿಯ ಕೋಪವನ್ನು ಎದುರಿಸಬೇಕಾಗುತ್ತದೆ.

Written by - Ranjitha R K | Last Updated : Oct 3, 2022, 09:07 AM IST
  • ಕುಂಭ ರಾಶಿ ಪ್ರವೇಶಿಸಲಿರುವ ಶನಿದೇವ
  • ಈ ರಾಶಿಯವರು ಶನಿ ದೆಸೆಯಿಂದ ಪಡೆಯಲಿದ್ದಾರೆ
  • ಈ ರಾಶಿಯವರಿಗೆ ಕಷ್ಟದ ದಿನಗಳು ಆರಂಭ
ಇನ್ನು ಮೂರು ತಿಂಗಳಲ್ಲಿ ಶನಿ ದೆಸೆಯಿಂದ ಮುಕ್ತಿ ಪಡೆಯಲಿದ್ದಾರೆ ಈ ರಾಶಿಯವರು, ತೆರೆದುಕೊಳ್ಳುವುದು ಪ್ರಗತಿಯ ಹಾದಿ  title=
shani transit effect (file photo)

ಬೆಂಗಳೂರು : ವೈದಿಕ ಜ್ಯೋತಿಷ್ಯದ ಪ್ರಕಾರ, ಒಂದು ಗ್ರಹವು ರಾಶಿಯನ್ನು  ಬದಲಾಯಿಸಿದಾಗ ಅಥವಾ ಬೇರೆ ಗ್ರಹದೊಂದಿಗೆ ಸಂಯೋಗ ಹೊಂದಿದಾಗ, ಅದರ ನೇರ ಪರಿಣಾಮವು ಮಾನವ ಜೀವನದ ಮೇಲೆ ಆಗುತ್ತದೆ. ಅದೇ ರೀತಿ ಶನಿದೇವನು ರಾಶಿಯನ್ನು ಬದಲಾಯಿಸಿದಾಗ, ಶನಿ ಸಾಡೇಸಾತಿ ಮತ್ತು ಶನಿ ಧೈಯ್ಯಾ ಅಂದರೆ ಎರಡೂವರೆ ವರ್ಷದ ಶನಿ ದೆಸೆ ಕೆಲವರ ಜೀವನದಲ್ಲಿ ಆರಂಭವಾದರೆ ಇನ್ನು ಕೆಲವರು ಈ ದೆಸೆಯಿಂದ ಮುಕ್ತಿ ಹೊಂದುತ್ತಾರೆ.  ಶನಿದೇವನು ಜನವರಿ 17 ರಂದು ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಶನಿಯ ಕುಂಭ ರಾಶಿ ಪ್ರವೇಶದೊಂದಿಗೆ   ಕೆಲವು ರಾಶಿಯವರು ಏಳೂವರೆ ವರ್ಷದ ಶನಿ ಕಾಟ ಮತ್ತು ಎರಡೂವರೆ ವರ್ಷದ ಶನಿ ದೆಸೆಯಿಂದ ಬಿಡಿಗಡೆ ಹೊಂದಲಿದ್ದಾರೆ.  

ಕುಂಭ ರಾಶಿ ಪ್ರವೇಶಿಸಲಿರುವ ಶನಿದೇವ :
ಜುಲೈ 2022 ರಿಂದ ಶನಿಯು ಮಕರ ರಾಶಿಯಲ್ಲಿ ಶನಿಯು ಹಿಮ್ಮುಖ ಚಲನೆಯಲ್ಲಿದ್ದಾನೆ. ಅಕ್ಟೋಬರ್ 23, 2022 ರಂದು ಮಕರ ರಾಶಿಯಲ್ಲಿಯೇ ನೇರ ನಡೆ ಆರಂಭಿಸಲಿದ್ದಾನೆ. ಇದರೊಂದಿಗೆ  ಜನವರಿ 17, 2023 ರವರೆಗೆ ಶನಿದೇವನು ಮಕರ ರಾಶಿಯಲ್ಲಿ  ನೇರ ನಡೆಯಲ್ಲಿರುತ್ತಾನೆ. ನಂತರ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಶನಿಯು ಕುಂಭ ರಾಶಿಯಲ್ಲಿ ಸಂಕ್ರಮಿಸಿದಾಗ, ಕೆಲವು ರಾಶಿಯವರಿಗೆ ಸಾಡೇ ಸತಿ ಮತ್ತು ಧೈಯ್ಯಾದಿಂದ  ಮುಕ್ತಿ ಸಿಗಲಿದೆ. ಮತ್ತೊಂದೆಡೆ, ಕೆಲವು ರಾಶಿಯವರು ಶನಿಯ ಕೋಪವನ್ನು ಎದುರಿಸಬೇಕಾಗುತ್ತದೆ.

ಇದನ್ನೂ ಓದಿ : Peepal Tree : ಮನೆಯಲ್ಲಿ ಅರಳಿ ಮರ ಬೆಳೆದರೆ ತಪ್ಪಿದಲ್ಲ ಗಂಭೀರ ಸಮಸ್ಯೆ , ಅದಕ್ಕೆ ಈ 4 ಕೆಲಸ ಮಾಡಿ!

ಈ ರಾಶಿಯವರು ಸಾಡೇಸಾತಿ  ಮತ್ತು ಧೈಯ್ಯಾದಿಂದ ಮುಕ್ತಿ ಪಡೆಯಲಿದ್ದಾರೆ : 
ಜನವರಿ 17, 2023 ರಿಂದ, ತುಲಾ ಮತ್ತು ಮಿಥುನ ರಾಶಿಯವರು ಶನಿಯ ಧೈಯ್ಯಾದಿಂದ ಮುಕ್ತಿ ಪಡೆಯಲಿದ್ದಾರೆ. ಮತ್ತೊಂದೆಡೆ, ಧನು ರಾಶಿಯವರಿಗೆ ಸಾಡೇಸಾತಿಯಿಂದ ಮುಕ್ತಿ ಸಿಗಲಿದೆ. ಸಾಡೇಸಾತಿ ಮತ್ತು ಧೈಯಾದಿಂದ ಮುಕ್ತವಾದ ನಂತರ , ಈ ರಾಶಿಯವರಿಗೆ ಪ್ರಗತಿಯ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ಸ್ಥಗಿತಗೊಂಡಿದ್ದ ಕೆಲಸಗಳು ಮತ್ತೆ ಚುರುಕು ಪಡೆದುಕೊಳ್ಳುತ್ತವೆ. ಹೊಸ ಉದ್ಯೋಗ ಆಫರ್ ಬರಬಹುದು. ಅಲ್ಲದೆ, ಕೆಲಸ ಮಾಡುತ್ತಿದ್ದರೆ ಬಡ್ತಿ ಮತ್ತು ಇನ್ಕ್ರಿಮೆಂಟ್ ಸಿಗಬಹುದು. ವ್ಯಾಪಾರದಲ್ಲಿ ಉತ್ತಮ ಲಾಭ ಪಡೆಯಬಹುದು.

ಈ ರಾಶಿಯವರಿಗೆ ಕಷ್ಟದ ದಿನಗಳು ಆರಂಭ : 
ಮತ್ತೊಂದೆಡೆ , ಶನಿಯು  ಕುಂಭ ರಾಶಿಯಲ್ಲಿ ಸಂಕ್ರಮಿಸಿದಾಗ,  ಮೀನ ರಾಶಿಯವರಿಗೆ ಸಾಡೇಸಾತಿ ಆರಂಭವಾಗಲಿದೆ. ಅಂದರೆ, ಜನವರಿ 2023 ರಿಂದ, ಕುಂಭ, ಮಕರ ಮತ್ತು ಮೀನ ರಾಶಿಯವರಿಗೆ ಶನಿ ಸಾಡೇಸಾತಿ ಪ್ರಾರಂಭವಾಗುತ್ತದೆ. ಮಾತ್ರವಲ್ಲ, ಜನವರಿ 2023 ರಲ್ಲಿ, ಕರ್ಕಾಟಕ ಮತ್ತು ವೃಶ್ಚಿಕ ರಾಶಿಯ ಜನರ ಮೇಲೆ ಕೂಡಾ ಶನಿ ಧೈಯ್ಯಾದ ಪರಿಣಾಮ ಗೋಚರಿಸಲಿದೆ. ಈ ರಾಶಿಯವರು ಜೀವನದಲ್ಲಿ ತೊಂದರೆಗಳನ್ನು ಎದುರಿಸಬೇಕಾಗಬಹುದು. 

ಇದನ್ನೂ ಓದಿ : Diwali 2022 : ದೀಪಾವಳಿಗೆ ಈ ರಾಶಿಯವರಿಗೆ ಹೊಳೆಯಲಿದೆ ಅದೃಷ್ಟ : ಇವರ ಮೇಲಿದೆ ಲಕ್ಷ್ಮಿದೇವಿಯ ವಿಶೇಷ ಕೃಪೆ!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News