Kartik Purnima 2021: ನೀವು ಶ್ರೀಮಂತರಾಗಲು ಬಯಸಿದರೆ ಕಾರ್ತಿಕ ಪೂರ್ಣಿಮೆಯಂದು ಈ ಕೆಲಸ ಮಾಡಿ

ವಿಶೇಷವಾಗಿ ಹಣದ ಸಮಸ್ಯೆಯಿಂದ ಬಳಲುತ್ತಿರುವ ಜನರಿಗೆ ಈ ದಿನವು ಬಹಳ ಮುಖ್ಯವಾಗಿದೆ. ಈ ದಿನದಂದು ನೀವು ಮಾಡುವ ಒಳ್ಳೆಯ ಕಾರ್ಯಗಳು ಭವಿಷ್ಯದಲ್ಲಿ ನಿಮಗೆ ವರದಾನವಾಗಲಿದೆ.     

Written by - Puttaraj K Alur | Last Updated : Nov 17, 2021, 01:32 PM IST
  • ಕಾರ್ತಿಕ ಪೂರ್ಣಿಮೆಯಂದು ಲಕ್ಷ್ಮಿಯ ಆರಾಧನೆಗೂ ವಿಶೇಷ ಮಹತ್ವವಿದೆ
  • ಕಾರ್ತಿಕ ಪೂರ್ಣಿಮೆಯ ದಿನದಂದು ಮಾಡುವ ಪೂಜೆ ಹೆಚ್ಚು ಫಲ ನೀಡುತ್ತದೆ
  • ಈ ವಿಶೇಷ ದಿನ ಕೈಗೊಳ್ಳುವ ನಿರ್ಧಾರಗಳು ಪರಿಣಾಮಕಾರಿ ಫಲಿತಾಂಶ ನೀಡುತ್ತವೆ
Kartik Purnima 2021: ನೀವು ಶ್ರೀಮಂತರಾಗಲು ಬಯಸಿದರೆ ಕಾರ್ತಿಕ ಪೂರ್ಣಿಮೆಯಂದು ಈ ಕೆಲಸ ಮಾಡಿ   title=
ಕಾರ್ತಿಕ ಪೂರ್ಣಿಮೆಯ ಮಹತ್ವ ತಿಳಿದುಕೊಳ್ಳಿ

ನವದೆಹಲಿ: ಹಿಂದೂ ಧರ್ಮದಲ್ಲಿ ಕಾರ್ತಿಕ ಮಾಸ(Kartik Purnima 2021)ಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಕಾರ್ತಿಕ ಮಾಸದ ಹುಣ್ಣಿಮೆಯನ್ನು ಭಗವಾನ್ ವಿಷ್ಣು ಮತ್ತು ತುಳಸಿಯ ಆರಾಧನೆಗೆ ಅತ್ಯಂತ ಪ್ರಮುಖವೆಂದು ಪರಿಗಣಿಸಲಾಗಿದೆ. ಈ ದಿನದಂದು ಮಾಡುವ ಪೂಜೆಯು ಅನೇಕ ಪಟ್ಟು ಹೆಚ್ಚು ಫಲವನ್ನು ನೀಡುತ್ತದೆ. ಅಲ್ಲದೆ ಕಾರ್ತಿಕ ಪೂರ್ಣಿಮೆಯ ದಿನದಂದು ಕೈಗೊಳ್ಳುವ ಕ್ರಮಗಳು ಅತ್ಯಂತ ಪರಿಣಾಮಕಾರಿ ಫಲಿತಾಂಶಗಳನ್ನು ನೀಡುತ್ತವೆ. ಈ ವರ್ಷ ನವೆಂಬರ್ 19ರ ಶುಕ್ರವಾರ ಕಾರ್ತಿಕ ಪೂರ್ಣಿಮೆ ಇದೆ. ವಿಶೇಷವಾಗಿ ಹಣದ ಸಮಸ್ಯೆ(Kartik Purnima Money Remedies)ಯಿಂದ ಬಳಲುತ್ತಿರುವ ಜನರಿಗೆ ಈ ದಿನವು ಬಹಳ ಮುಖ್ಯವಾಗಿದೆ. ಈ ದಿನದಂದು ನೀವು ಮಾಡುವ ಒಳ್ಳೆಯ ಕಾರ್ಯಗಳು ಭವಿಷ್ಯದಲ್ಲಿ ನಿಮಗೆ ವರದಾನವಾಗಲಿದೆ.     

ಧನ ಲಾಭದ ಮಾರ್ಗಗಳು

  • ಕಾರ್ತಿಕ ಪೂರ್ಣಿಮೆಯಂದು ಉಪವಾಸ ಮಾಡಬೇಕು. ಇದು ಅಗ್ನಿಸ್ತೋಮ ಯಾಗ ಮಾಡುವಷ್ಟೇ ಫಲಿತಾಂಶವನ್ನು ನೀಡುತ್ತದೆ. ಇದರೊಂದಿಗೆ ಲಕ್ಷ್ಮಿ ದೇವಿಯು ಪ್ರಸನ್ನಳಾಗುತ್ತಾಳೆ ಮತ್ತು ನಿಮ್ಮ ಹಣದ ಕೊರತೆಯನ್ನು ನಿವಾರಿಸುತ್ತಾಳೆ.
  • ಕಾರ್ತಿಕ ಪೂರ್ಣಿಮೆಯ ದಿನದಂದು ತುಳಸಿ ಪೂಜೆ(Tulsi Pooja)ಯನ್ನು ಮಾಡಿ. ಇದರಿಂದ ಅನೇಕ ಜನ್ಮಗಳ ಪಾಪಗಳು ನಾಶವಾಗುತ್ತವೆ.

ಇದನ್ನೂ ಓದಿ: Guru Rashi Parivartan: ಶನಿಯ ರಾಶಿ ಚಿಹ್ನೆಯಲ್ಲಿ ಗುರುವಿನ ಪ್ರವೇಶ, ನಿಮ್ಮ ಮೇಲೆ ಏನು ಪ್ರಭಾವ!

  • ನಿಮ್ಮ ಮನೆಗೆ ಲಕ್ಷ್ಮಿ ದೇವಿ(Goddess Lakshmi)ಯ ಆಗಮನವಾಗಬೇಕಾದರೆ, ಮನೆಯ ಮುಖ್ಯ ಬಾಗಿಲಿನ ಮೇಲೆ ಮಾವಿನ ಎಲೆಗಳ ಕಂಬವನ್ನು ಇರಿಸಿ. ಹೀಗೆ ಮಾಡಿದರೆ ನಿಮ್ಮ ಹಣದ ಕೊರತೆ ದೂರವಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ.
  • ಹುಣ್ಣಿಮೆ ದಿನದಂದು ಬಾನಂಗಳದಲ್ಲಿ ಚಂದ್ರನು ತನ್ನ ಬೆಳಕಿನಿಂದ ಕಂಗೊಳಿಸುತ್ತಾನೆ. ಈ ದಿನ ಚಂದ್ರ ಉದಯಿಸಿದ ತಕ್ಷಣ ಭಗವಾನ್ ಕಾರ್ತಿಕ ಮಾತೆಯರು ಎಂದು ನಂಬಲಾಗಿರುವ ಶಿವ, ಸಂಭೂತಿ, ಪ್ರೀತಿ, ಸಂತತಿ, ಅನಸೂಯಾ ಮತ್ತು ಕ್ಷಮಾ ಎಂಬ 6 ಯತಿಗಳನ್ನು ಪೂಜಿಸಿ. ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿ ಧನ(Money Crunch) ಮತ್ತು ಸಂಪತ್ತು ತುಂಬಿ ತುಳುಕುತ್ತದೆ.
  • ಕಾರ್ತಿಕ ಪೂರ್ಣಿಮೆಯ ದಿನ ದೇವತೆಗಳು ದೀಪವನ್ನು ಬೆಳಗಿಸುವ ಮೂಲಕ ದೀಪಾವಳಿಯನ್ನು ಆಚರಿಸುತ್ತಾರೆ. ಈ ದಿನ ದೀಪವನ್ನು ದಾನ ಮಾಡುವುದರಿಂದ
  • ಮೋಕ್ಷ ಪ್ರಾಪ್ತಿಯಾಗುತ್ತದೆ. ಋಣಭಾರವಿರುವವರು ಕಾರ್ತಿಕ ಪೂರ್ಣಿಮೆ(Kartik Purnima )ಯ ದಿನದಂದು ದೀಪಗಳನ್ನು ದಾನ ಮಾಡಿದರೆ ಶೀಘ್ರವೇ ಋಣಭಾರ ಪರಿಹಾರವಾಗುತ್ತದೆ.

ಇದನ್ನೂ ಓದಿ: ಜಪ ಮಾಡುವಾಗ ಈ ಒಂದು ವಿಷಯ ನೆನಪಿನಲ್ಲಿಡಿ: ದೇವರು ಬಹುಬೇಗನೆ ಪ್ರಸನ್ನನಾಗುತ್ತಾನೆ

  • ಕಾರ್ತಿಕ ಪೂರ್ಣಿಮೆಯ ದಿನ ದಾನ ಮಾಡುವುದರಿಂದ 10 ಯಾಗಗಳ ಫಲ ಸಿಗುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ದಾನ ಮಾಡುವುದು ಉತ್ತಮ.

(ಗಮನಿಸಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News