ಇನ್ನು ಏಳು ದಿನಗಳಲ್ಲಿ ಈ ರಾಶಿಯವರ ಭಾಗ್ಯ ಬೆಳಗಲಿದ್ದಾನೆ ಮಂಗಳ

 ಮಂಗಳವು ಭೂಮಿ-ಆಸ್ತಿ, ಧೈರ್ಯ, ಶಕ್ತಿ ಮತ್ತು ಸಹೋದರತ್ವದ ಗ್ರಹವಾಗಿದೆ. ಮೇಷ ರಾಶಿಗೆ ಮಂಗಳನ ಪ್ರವೇಶವು ಎಲ್ಲಾ ರಾಶಿಯವರ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರುತ್ತದೆ. ವಿಶೇಷವಾಗಿ 4 ರಾಶಿಯವರಿಗೆ ಇದು ತುಂಬಾ ಮಂಗಳಕರವಾಗಿರುತ್ತದೆ. 

Written by - Ranjitha R K | Last Updated : Jun 20, 2022, 08:00 AM IST
  • ಜೂನ್ 27 ರಂದು ಮಂಗಳನು ​​ರಾಶಿಯನ್ನು ಬದಲಾಯಿಸಲಿದ್ದಾನೆ.
  • ತನ್ನದೇ ಆದ ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ ಮಂಗಳ
  • ಮಂಗಳ ಸಂಚಾರವು ಈ ರಾಶಿಯವರಿಗೆ ಅದೃಷ್ಟವನ್ನು ತರುತ್ತದೆ.
 ಇನ್ನು ಏಳು ದಿನಗಳಲ್ಲಿ ಈ ರಾಶಿಯವರ ಭಾಗ್ಯ ಬೆಳಗಲಿದ್ದಾನೆ ಮಂಗಳ  title=
Mangara rashi parivarthane (file photo)

ಬೆಂಗಳೂರು : ಜೂನ್ 27 ರಂದು ಮಂಗಳನು ​​ರಾಶಿಯನ್ನು ಬದಲಾಯಿಸಲಿದ್ದಾನೆ. ಜ್ಯೋತಿಷ್ಯದಲ್ಲಿ, ಮಂಗಳನನ್ನು ಸೇನಾಧಿಪತಿ ಎಂದು ಕರೆಯಲಾಗುತ್ತದೆ. ಮಂಗಳ ಮೇಷ ಮತ್ತು ವೃಶ್ಚಿಕ ರಾಶಿಯ ಅಧಿಪತಿ. 7 ದಿನಗಳ ನಂತರ, ಮಂಗಳವು ತನ್ನದೇ ಆದ ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ. ಈ ಬದಲಾವಣೆಯು 4 ರಾಶಿಯವರ ಪಾಲಿಗೆ ಸುವರ್ಣ ದಿನಗಳನ್ನು ತರಲಿದೆ. ಮಂಗಳ ಸಂಚಾರವು ಈ ರಾಶಿಯವರಿಗೆ  ಅದೃಷ್ಟವನ್ನು ತರುತ್ತದೆ. 

ಮಂಗಳನ ಸಂಕ್ರಮಣದೊಂದಿಗೆ ಬೆಳಗಲಿದೆ ಈ ರಾಶಿಯವರ ಅದೃಷ್ಟ :
ಮಿಥುನ :  ಮಂಗಳ ಸಂಚಾರವು ಮಿಥುನ ರಾಶಿಯವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಅವರ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಉದ್ಯೋಗಸ್ಥರಿಗೆ   ಬಡ್ತಿ ದೊರೆಯಲಿದೆ. ವ್ಯಾಪಾರಸ್ಥರ ವ್ಯಾಪಾರ ವೃದ್ಧಿಯಾಗಲಿದೆ. ಆರ್ಥಿಕ ಲಾಭವಾಗುವ ಅವಕಾಶಗಳು ಹೆಚ್ಚಾಗಲಿವೆ. ನಿಮ್ಮೆ ಎಲ್ಲಾ ಕಾರ್ಯಗಳಿಗೂ ತಂದೆಯ ಬೆಂಬಲ ಸಿಗಲಿದೆ. ದಾಂಪತ್ಯ ಜೀವನ ಉತ್ತಮವಾಗಿರಲಿದೆ. 

ಇದನ್ನೂ ಓದಿ :  Shani Dev Vehicle: ಶನಿ ದೇವನ ಈ 9 ವಾಹನಗಳು ಭಾಗ್ಯ ನಿರ್ಧರಿಸುತ್ತವೆ, ಯಾವ ವಾಹನ ಯಾವ ಶುಭ-ಅಶುಭ ಸಂಕೇತಗಳನ್ನು ನೀಡುತ್ತದೆ

ಕರ್ಕಾಟಕ : ಮಂಗಳನ ರಾಶಿಯ ಬದಲಾವಣೆಯು ಕರ್ಕ ರಾಶಿಯವರಿಗೆ ಲಾಭದಾಯಕವಾಗಿರಲಿದೆ. ವೃತ್ತಿಜೀವನಕ್ಕೆ ಇದು ಉತ್ತಮ ಸಮಯವಾಗಿರುತ್ತದೆ. ಕುಟುಂಬದಲ್ಲಿ ಸಂತೋಷ ಮತ್ತು ಸಹಕಾರದ ವಾತಾವರಣ ಇರುತ್ತದೆ. ಶಿಕ್ಷಣಕ್ಕೆ ಸಂಬಂಧಿಸಿದ ಜನರಿಗೆ ಈ ಸಮಯವು ಅತ್ಯುತ್ತಮವಾಗಿರುತ್ತದೆ. 

ವೃಶ್ಚಿಕ ರಾಶಿ : ಮೇಷ ರಾಶಿಯಲ್ಲಿ ಮಂಗಳನ ಪ್ರವೇಶವು ವೃಶ್ಚಿಕ ರಾಶಿಯವರ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಈ ಕಾರಣದಿಂದಾಗಿ, ಅವರು ಪ್ರತಿ ಕೆಲಸವನ್ನು ಸುಲಭವಾಗಿ ಪೂರ್ಣಗೊಳಿಸುತ್ತಾರೆ. ವೃತ್ತಿಯಲ್ಲಿ ಪ್ರಗತಿ ಕಂಡುಬರಲಿದೆ. ಹಣಕಾಸಿನ ಸಮಸ್ಯೆಗಳು ನಿವಾರಣೆಯಾಗುತ್ತವೆ. ದಾಂಪತ್ಯ ಜೀವನ ಉತ್ತಮವಾಗಿರಲಿದೆ. 

ಇದನ್ನೂ ಓದಿ: Chanakya Niti : ಈ ಗುಣಗಳನ್ನು ಹೊಂದಿರುವ ಮಹಿಳೆಯರು ಅತ್ಯುತ್ತಮ ಪತ್ನಿ ಮತ್ತು ತಾಯಿಯಂತೆ!

ಧನು ರಾಶಿ : ಮಂಗಳನ ಸಂಚಾರವು ಧನು ರಾಶಿಯವರ ಆರೋಗ್ಯದಲ್ಲಿ ಸುಧಾರಣೆ ತರುತ್ತದೆ. ಆದಾಯ ಹೆಚ್ಚಲಿದೆ. ಬಹಳ ದಿನಗಳ ನಂತರ ನೀವು ಆರಾಮವಾಗಿರುತ್ತೀರಿ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. 

 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News